ETV Bharat / sports

ಬೌಲ್ಟ್​​​ ಮಾರಕ ಬೌಲಿಂಗ್​ಗೆ ಚೆನ್ನೈ ತತ್ತರ... ಮುಂಬೈ ಗೆಲುವಿಗೆ 115ರನ್​ ಟಾರ್ಗೆಟ್​ - ಐಪಿಎಲ್​ 2020 ದುಬೈ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸೋತು ಸುಣ್ಣವಾಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ಇಂದಿನ ಪಂಧ್ಯದಲ್ಲೂ ಕೇವಲ 115 ರನ್​ ಟಾರ್ಗೆಟ್​ ನೀಡಿದೆ.

Chennai Super
Chennai Super
author img

By

Published : Oct 23, 2020, 9:36 PM IST

ಶಾರ್ಜಾ: ಮುಂಬೈ ಇಂಡಿಯನ್ಸ್​ ಸಂಘಟಿತ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ಚೆನ್ನೈ ಸೂಪರ್​ ಕಿಂಗ್ಸ್​​​ 20 ಓವರ್​ಗಳಲ್ಲಿ 9ವಿಕೆಟ್​ನಷ್ಟಕ್ಕೆ ಕೇವಲ 114ರನ್​ಗಳಿಕೆ ಮಾಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಚೆನ್ನೈ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯ್ತು. ಮೆಲುಗೈ ಸಾಧಿಸಿದ ವೇಗಿ ಬೌಲ್ಟ್​​ ಗಾಯ್ಕವಾಡ್​ಗೆ​ ಖಾತೆ ತೆರೆಯುವ ಮೊದಲೇ ಪೆವಿಲಿಯನ್​ ಹಾದಿ ತೊರಿಸಿದರು.ಇದರ ಬೆನ್ನಲ್ಲೇ ಡುಪ್ಲೆಸಿ(1) ವಿಕೆಟ್​ ಕೂಡ ಪಡೆದುಕೊಂಡರು. ನಂತರ ಬಂದ ರಾಯುಡು(2), ಜಗದೀಶನ್​(0), ಧೋನಿ(17), ಜಡೇಜಾ(7) ವಿಕೆಟ್​ ಒಪ್ಪಿಸಿದರು.

ತಂಡಕ್ಕೆ ಆಸರೆಯಾದ ಕರನ್​

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದ ಸ್ಯಾಮ್​ ಕರನ್​ ತಂಡಕ್ಕೆ ಆಸರೆಯಾದರು. ಶಾರ್ದೂಲ್​ ಠಾಕೂರ್​ ಹಾಗೂ ಇಮ್ರಾನ್ ತಾಹೀರ್​ ಜತೆ ಸೇರಿ ತಂಡದ ಮೊತ್ತ 100ರ ಗಡಿ ದಾಟುವಂತೆ ಮಾಡಿದರು. 47 ಎಸೆತಗಳಲ್ಲಿ 4 ಬೌಂಡರಿ, ಎರಡು ಸಿಕ್ಸರ್​​ ಸೇರಿ 52ರನ್​ಗಳಿಕೆ ಮಾಡಿ ಕೊನೆ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರ ಜತೆಗೆ ಠಾಕೂರ್​​(11)ರನ್​, ತಾಹೀರ್​​ 13ರನ್​ಗಳಿಕೆ ಮಾಡಿದರು. ಸಿಎಸ್​ಕೆ 43ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 7ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕರನ್​ ಆಸರೆಯಾಗಿ ಟೀಂ ಸ್ಕೋರ್​ 100ರ ಗಡಿ ದಾಟುವಂತೆ ಮಾಡಿದರು.

Sam Curran
ತಂಡಕ್ಕೆ ಆಸರೆಯಾದ ಸ್ಯಾಮ್​ ಕರನ್​​

ಕೇದಾರ್ ಜಾಧವ್​, ವ್ಯಾಟ್ಸನ್​ ಜಾಗದಲ್ಲಿ ಅವಕಾಶ ಪಡೆದುಕೊಂಡಿದ್ದ ಜಗದೀಶನ್​ ಹಾಗೂ ಗಾಯ್ಕವಾಡ್​ ನಿರಾಸೆ ಮೂಡಿಸಿದರು. ಮುಂಬೈ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಬೌಲ್ಟ್​ 14ವಿಕೆಟ್​​, ಬುಮ್ರಾ, ಚಹರ್​ ತಲಾ 2ವಿಕೆಟ್​ ಪಡೆದುಕೊಂಡರೆ, ನಾಥನ್​ 1ವಿಕೆಟ್​ ಕಿತ್ತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.