ನವದೆಹಲಿ: ಕ್ರಿಕೆಟ್ನಲ್ಲಿ ವಯಸ್ಸಿನ ವಂಚನೆ ಮತ್ತು ವಾಸಸ್ಥಳದ ವಂಚೆನೆ ಮಾಡುವವರಿಗೆ ಎರಡು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧ ಏರಲು ಕಾನೂನು ಸಿದ್ದಪಡಿಸಿದೆ.
ಹಲವು ವರ್ಷಗಳಿಂದ ವಯಸ್ಸಿನ ವಂಚನೆಯನ್ನು ತಡೆಯಲು ಬಿಸಿಸಿಐ ಪ್ರಯತ್ನಿಸುತ್ತಿದ್ದು, ಈಗಾಗಲೆ ಮಂಜೋತ್ ಕಾಲ್ರಾ ಅಂತಹ ಪ್ರತಿಭಾನ್ವಿತ ಕ್ರಿಕೆಟಿಗರನ್ನೇ ನಿಷೇಧಕ್ಕೊಳಗಾಗುವಂತೆ ಮಾಡಿದೆ. ಇದೀಗ ವಯೋಮಾನದ ಟೂರ್ನಮೆಂಟ್ಗಳಲ್ಲಿ ಭಾಗವಹಿಸುವ ಕ್ರಿಕೆಟಿಗರಿಗೆ ಬಿಸಿಸಿಐ ಹೊಸ ಕಾನೂನನ್ನು ಜಾರಿಗೆ ತಂದಿದೆ.
- ಈಗಾಗಲೆ ವಿವಿಧ ವಯೋಮಾನದ ಕ್ರಿಕೆಟ್ಗೆ ತಮ್ಮ ವಯಸ್ಸನ್ನು ನೋಂದಾಯಿಸಿಕೊಳ್ಳುವಾದ ತಮ್ಮ ಜನ್ಮ ದಿನಾಂಕದ ಬಗ್ಗೆ ಸುಳ್ಳು ಮಾಹಿತಿ ನೀಡಿರುವವರು ಸ್ವಯಂ ಪ್ರೇರಿತರಾಗಿ ತಮ್ಮ ನೈಜ ದಿನಾಂಕವನ್ನು ಘೋಷಿಸಿಕೊಂಡರೆ ಅವರನ್ನು ಅಮಾನತುಗೊಳಿಸುವುದಿಲ್ಲ. ಬದಲಾಗಿ ಜನ್ಮದಿನಾಂಕದ ಆಧಾರದ ಮೇಲೆ ವಯಸ್ಸಿನ ಮಟ್ಟದ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಸೆಪ್ಟೆಂಬರ್ 15ರೊಳಗೆ ನೈಜ ಜನ್ಮದಿನಾಂಕದ ದಾಖಲಾತಿಗಳನ್ನು ಬಿಸಿಸಿಐನ ವಯಸ್ಸಿನ ಪರಿಶೀಲನೆ ಇಲಾಖೆಗೆ ಕಳುಹಿಸುವಂತೆ ಸೂಚನೆ ನೀಡಿದೆ.
- ಒಂದು ವೇಳೆ ನೋಂದಾಯಿತ ಕ್ರಿಕೆಟಿಗರು ಸುಳ್ಳುದಾಖಲಾತಿಯನ್ನು ನೀಡಿದವರು ಈಗ ಬಹಿರಂಗಗೊಳಿಸದೆ ಮುಂದೆ ತನಿಖೆಯ ವೇಳೆ ಸಿಲುಕಿಕೊಂಡರೆ ಅಂತಹ ಆಟಗಾರರನ್ನು 2 ವರ್ಷ ನಿಷೇಧಕ್ಕೊಳಗಾಗಲಿದ್ದಾರೆ. ನಿಷೇಧದ ಅವಧಿ ಮುಗಿದ ನಂತರ ವಯೋಮಾನದ ಆಧಾರಿತ ಕ್ರಿಕೆಟ್ನಲ್ಲಿ ಅವರಿಗೆ ಅವಕಾಶವಿರುವುದಿಲ್ಲ. ಈ ಟೂರ್ನಿಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಡೆಸುತ್ತವೆ.( ಉದಾ: ಅಂಡರ್ 14, 16, 19 ಹಾಗೂ 23)
- ವಿಳಾಸ ವಂಚೆನೆ( domicile fraud) ಮಾಡುವ ಹಿರಿಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಎರಡು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧ ಮಾಡಲಾಗುವುದು. ಈಗಾಗಲೆ ವಾಸಸ್ಥಳದ ವಂಚೆನೆ ಮಾಡಿರುವವರಿಗೆ ಸ್ವಯಂ ಘೋಷಣೆ ಮಾಡಲು ಅವಕಾಶವಿಲ್ಲ. ಒಂದು ವೇಳೆ ತನಿಖೆಯಲ್ಲಿ ವಂಚನೆ ಬಗ್ಗೆ ತಿಳಿಬಂದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ.
- ಬಿಸಿಸಿಐ ಅಂಡರ್ -16 ವಯೋಮಾನದ ಟೂರ್ನಮೆಂಟ್ನಲ್ಲಿ 14-16 ವರ್ಷದೊಳಗಿನ ಆಟಗಾರರಿಗೆ ಮಾತ್ರ ನೋಂದಾಯಿಸಲು ಅನುಮತಿ ನೀಡಲಾಗುತ್ತದೆ
- ಇನ್ನು ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ ನೀಡಿರುವವರು ಬಿಸಿಸಿಐ ಸಹಾಯವಾಣಿ (9820556566/9136694499) ಗೆ ಕರೆಮಾಡಿ ವರದಿ ಮಾಡಲು ಮಂಡಳಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಎಲ್ಲಾ ವಯೋಮಾನದವರಿಗೂ ಒಂದು ಮಟ್ಟದ ಆಟದ ಮೈದಾನವನ್ನು ಒದಗಿಸಲು ಬದ್ದರಾಗಿದ್ದೇವೆ. ವಯಸ್ಸಿನ ವಂಚನೆಯನ್ನು ತಡೆಯಲು ಬಿಸಿಸಿಐ ಕಠಿಣ ಕ್ರಮಗಳ್ನು ತೆಗೆದುಕೊಳ್ಳುತ್ತಿದೆ. ಮುಂಬರುವ ದೇಶೀಯ ವೃತುವಿನಿಂದ ಇನ್ನು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಒಂದು ವೇಳೆ ಪ್ರಸ್ತುತ ವಯಸ್ಸಿನ ವಂಚನೆ ಮಾಡಿರುವವರು ತಕ್ಷಣ ಸರಿಪಡಿಸಿಕೊಳ್ಳದೆ, ಮುಂದೆ ಏನಾದರೂ ವಂಚೆಯಲ್ಲಿ ಸಿಲುಕಿದರೆ ಅವರಿಗೆ ಕಠಿಣ ಶಿಕ್ಷೆ ಅನುಭವಿಸಲಿದ್ದಾರೆ. ಮತ್ತು ಎರಡು ವರ್ಷ ನಿಷೇಧಕ್ಕೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.