ETV Bharat / sports

ದಿನೇಶ್​ ಕಾರ್ತಿಕ್​ ಕ್ಷಮೆ ಸ್ವೀಕರಿಸಿದ ಬಿಸಿಸಿಐ... ಕೆಕೆಆರ್​ ನಾಯಕನಿಗೆ ಬಿಗ್​ ರಿಲೀಫ್

ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಶಾರುಖ್​ ಖಾನ್ ಮಾಲಿಕತ್ವದ ಟ್ರಿಂಬ್ಯಾಗೊ ನೈಟ್​ ರೈಡರ್ಸ್​ ತಂಡದ ಪರ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಕ್ಕಾಗಿ ಬಿಸಿಸಿಐ ಕಾರ್ತಿಕ್​ಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿತ್ತು. ನೋಟಿಸ್​ಗೆ ಉತ್ತರಿಸಿರುವ ಕಾರ್ತಿಕ್​ ತಮ್ಮ ತಪ್ಪನ್ನು ಒಪ್ಪಿಕೊಂಡು ಬೇಷರತ್​ ಕ್ಷಮೆ ಕೋರಿದ್ದಾರೆ.

BCCI accepts Karthik's apology
author img

By

Published : Sep 16, 2019, 6:22 PM IST

ನವದೆಹಲಿ: ಬಿಸಿಸಿಐ ಅನುಮತಿ ಪಡೆಯದೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಟಿಕೆಆರ್​ ತಂಡದ ಜರ್ಸಿ ತೊಟ್ಟು ಡ್ರೆಸ್ಸಿಂಗ್​ ರೂಮಿನಲ್ಲಿ ಕುಳಿತು ಪಂದ್ಯ ವೀಕ್ಷಿಸಿ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿ ನೋಟೀಸ್​ ಪಡೆದಿದ್ದ ಕಾರ್ತಿಕ್​ ಅಪಾಲಜಿ ಪತ್ರ ಬರೆದು ಕ್ಷಮೆ ಕೇಳಿದ್ದರಿಂದ ಬಿಸಿಸಿಐ ಕ್ಷಮಾಪಣೆಯನ್ನು ಸ್ವೀಕರಿಸಿದೆ.

ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಶಾರುಖ್​ ಖಾನ್ ಮಾಲಿಕತ್ವದ ಟ್ರಿಂಬ್ಯಾಗೊ ನೈಟ್​ ರೈಡರ್ಸ್​ ತಂಡದ ಪರ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಕ್ಕಾಗಿ ಬಿಸಿಸಿಐ ಕಾರ್ತಿಕ್​ಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿತ್ತು. ನೋಟಿಸ್​ಗೆ ಉತ್ತರಿಸಿರುವ ಕಾರ್ತಿಕ್​ ತಮ್ಮ ತಪ್ಪನ್ನು ಒಪ್ಪಿಕೊಂಡು ಬೇಷರತ್​ ಕ್ಷಮೆ ಕೋರಿದ್ದಾರೆ.

ಕೆಕೆಆರ್​ ಮುಖ್ಯ ಕೋಚ್​ ಬ್ರೆಂಡನ್ ಮೆಕಲಮ್ ಅವರ ಕೋರಿಕೆಯ ಮೇರೆಗೆ ಪೋರ್ಟ್ ಆಫ್ ಸ್ಪೇನ್​ನಲ್ಲಿ ನಡೆದಿದ್ದ ಪಂದ್ಯಕ್ಕೆ ಹಾಜರಾಗಿದ್ದೆ. ಮೆಕಲಮ್​ ಒತ್ತಾಯದ ಮೇರೆಗೆ ಟಿಕೆಆರ್ ಜರ್ಸಿ ಧರಿಸಿ ಪಂದ್ಯವನ್ನು ವೀಕ್ಷಿಸಿರುವುದಾಗಿ ತಿಳಿಸಿರುವ ಕಾರ್ತಿಕ್,​ ತಮ್ಮ ತಪ್ಪಿಗೆ ಕ್ಷಮೆ ಕೋರಿದ್ದಾರೆ. ಇದನ್ನು ಮನ್ನಿಸಿರುವ ಬಿಸಿಸಿಐ ಕಾರ್ತಿಕ್​ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ತಿಳಿಸಿದೆ.

ಐಪಿಎಲ್​ನಲ್ಲಿ ಕೆಕೆಆರ್​ ಒಡೆಯನಾಗಿರುವ ಶಾರುಖ್ ಖಾನ್ ಸಿಪಿಎಲ್​ನಲ್ಲೂ ಟಿಕೆಆರ್​ ಮಾಲೀಕರಾಗಿದ್ದಾರೆ. ಎರಡೂ ತಂಡಕ್ಕೂ ​ಬ್ರೆಂಡಮ್​ ಮೆಕಲಮ್ ಕೋಚ್​ ಆಗಿದ್ದಾರೆ. ಇವರ ಕೋರಿಕೆಯ ಮೇರೆಗೆ ಕಾರ್ತಿಕ್​ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಪಾಲ್ಗೊಂಡು ಸಂಕಷ್ಟಕ್ಕೀಡಾಗಿದ್ದರು. ಸದ್ಯ ಬಿಸಿಸಿಐ ಕ್ಷಮೆ ಸ್ವೀಕರಿಸರುವುದರಿಂದ ಕಾರ್ತಿಕ್​ ನಿರಾಳರಾಗಿದ್ದಾರೆ.

ಬಿಸಿಸಿಐ ಒಪ್ಪಂದದ ಪ್ರಕಾರ ಯಾವುದೇ ಒಬ್ಬ ಆಟಗಾರ ಬಿಸಿಸಿಐ ಅನುಮತಿ ಪಡೆಯದೇ ಬಿಸಿಸಿಐ ವ್ಯಾಪ್ತಿಯ ಹೊರಗೆ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುವಂತಿಲ್ಲ. ಒಂದು ವೇಳೆ ಅನುಮತಿ ಪಡೆಯದೇ ಯಾವುದೇ ಕ್ರಿಕೆಟ್​ನಲ್ಲಿ ಪಾಲ್ಗೊಂಡರೆ ಅವರಿಗೆ ನಿಷೇಧದ ಶಿಕ್ಷೆಯನ್ನು ಬಿಸಿಸಿಐ ವಿಧಿಸಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.