ETV Bharat / sports

ಮತ್ತೆ ಅಬ್ಬರಿಸಿದ ಆಸೀಸ್ ಬ್ಯಾಟ್ಸ್​ಮನ್​ಗಳು: ಭಾರತಕ್ಕೆ 390 ರನ್​ಗಳ ಬೃಹತ್ ಟಾರ್ಗೆಟ್

ಆರಂಭಿಕ ಆಟಗಾರರಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಜೊತೆಯಾಟ, ಸ್ಟೀವ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭರ್ಜರಿ 389 ರನ್​ ಪೇರಿಸಿದೆ.

author img

By

Published : Nov 29, 2020, 1:17 PM IST

Updated : Nov 29, 2020, 6:55 PM IST

Australia vs India 2nd ODI
ಮತ್ತೆ ಅಬ್ಬರಿಸಿದ ಆಸೀಸ್ ಬ್ಯಾಟ್ಸ್​ಮನ್​ಗಳು

ಸಿಡ್ನಿ(ಆಸ್ಟ್ರೇಲಿಯಾ): ಭಾರತದ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್​ಮನ್​ಗಳು ಭಾರತಕ್ಕೆ 390ರನ್​ಗಳ ಬೃಹತ್ ಟಾರ್ಗೆಟ್ ನೀಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ರು, ಟೀಂ ಇಂಡಿಯಾ ಆಟಗಾರರನ್ನು ಸಮರ್ಥವಾಗಿ ಎದುರಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಅರ್ಧಶತಕ ಪೂರೈಸಿದ್ರು.

77 ಎಸೆತಗಳಲ್ಲಿ, 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 83 ರನ್ ಕಲೆಹಾಕಿದ ಡೇವಿಡ್ ವಾರ್ನರ್ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. 69 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 60 ರನ್​ ಗಳಿಸಿದ ಫಿಂಚ್ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಔಟ್​ ಆದ್ರು.

ಕಳೆದ ಪಂದ್ಯದಂತೆ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಟೀವ್ ಸ್ಮಿತ್ 62 ಎಸೆತಗಳಲ್ಲೆ ಶತಕ ಸಿಡಿಸಿದ್ರು. 64 ಎಸೆತಗಳಲ್ಲಿ, 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 104 ರನ್​ ಸಿಡಿಸಿ ಹಾರ್ದಿಕ್​ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು.

ನಾಲ್ಕನೇ ವಿಕೆಟ್​ಗೆ ಉತ್ತಮ ಜೊತೆಯಾಟವಾಡಿದ ಮಾರ್ನಸ್​ ಲಾಬುಶೇನ್(70​) ಮತ್ತು ಮ್ಯಾಕ್ಸ್​ವೆಲ್(63) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 389ರನ್​ ಗಳಿಸಿತು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ, ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Last Updated : Nov 29, 2020, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.