ಹೈದರಾಬಾದ್ : 13ನೇ ಐಪಿಎಲ್‌ನಲ್ಲಿ ನೀರಸ ಪ್ರದರ್ಶನದಿಂದಾಗಿ ಹೆಚ್ಚು ಟೀಕೆಗೆ ಗುರಿಯಾಗಿದ್ದ ಮ್ಯಾಕ್ಸ್ವೆಲ್ ಇಂದಿನ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದರು. ಇದನ್ನ ನೆಪವಾಗಿಸಿಕೊಂಡು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸಿಮ್ ಜಾಫರ್, ಕೆ ಎಲ್ ರಾಹುಲ್ ಕಾಲೆಳೆದಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮ್ಯಾಕ್ಸ್ವೆಲ್ ಅಬ್ಬರದ ಆಟ ಆಡಿದ್ರು. ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 45 ರನ್ ಸಿಡಿಸಿ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ರು.
-
.@klrahul11 behind the stumps right now#Maxwell #AUSvIND pic.twitter.com/R2EO0872uv
— Wasim Jaffer (@WasimJaffer14) November 27, 2020 " class="align-text-top noRightClick twitterSection" data="
">.@klrahul11 behind the stumps right now#Maxwell #AUSvIND pic.twitter.com/R2EO0872uv
— Wasim Jaffer (@WasimJaffer14) November 27, 2020.@klrahul11 behind the stumps right now#Maxwell #AUSvIND pic.twitter.com/R2EO0872uv
— Wasim Jaffer (@WasimJaffer14) November 27, 2020
ಮ್ಯಾಕ್ಸ್ವೆಲ್ ಭರ್ಜರಿ ಪ್ರದರ್ಶನಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ವಾಸಿಮ್ ಜಾಫರ್ ತಮಾಷೆಯಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪಂಜಾಬ್ ತಂಡದ ನಾಯಕನಾಗಿದ್ದ ಪ್ರಸ್ತುತ ಟೀಂ ಇಂಡಿಯಾ ಉಪನಾಯಕ ಕೆ.ಎಲ್.ರಾಹುಲ್ ಅವರನ್ನು ಕಾಲೆಳೆದಿದ್ದಾರೆ. ವಾಸಿಮ್ ಜಾಫರ್ ಅವರ ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಐಪಿಎಲ್ ವೇಳೆ ಎಲ್ಲಿ ಅಡಗಿತ್ತು ಈ ನಿಮ್ಮ ಪರಾಕ್ರಮ.. ಆಸೀಸ್ ಆಟಗಾರರಿಗೆ ಅಭಿಮಾನಿಗಳ ಪ್ರಶ್ನೆ!!
ಇಡೀ ಐಪಿಎಲ್ ಟೂರ್ನಿಯಲ್ಲಿ ಒಂದು ಸಿಕ್ಸರ್ ಸಿಡಿಸಲು ಹೆಣಗಾಡಿದ್ದ ಮ್ಯಾಕ್ಸ್ವೆಲ್, 13 ಪಂದ್ಯಗಳಿಂದ ಕೇವಲ 108 ರನ್ ಗಳಿಸಿದ್ದರು. 11 ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸಿ, ಕೇವಲ 9 ಬೌಡರಿ ಬಾರಿಸಿದ್ದರು.