ETV Bharat / sports

ಟಿ20 ಸರಣಿ: ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದ ಪಾಕಿಸ್ತಾನ್ - ​ಜಿಂಬಾಬ್ವೆ ಆಟಗಾರರು

author img

By

Published : Oct 27, 2020, 5:27 PM IST

Updated : Oct 27, 2020, 5:52 PM IST

ಪಂದ್ಯದ ಅಧಿಕಾರಿಗಳು ಸೇರಿದಂತೆ 107 ಕೋವಿಡ್ ಟೆಸ್ಟ್​ಗಳನ್ನು ಮಾಡಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನ vs ಜಿಂಬಾಬ್ವೆ ಏಕದಿನ-ಟಿ20 ಸರಣಿ
ಪಾಕಿಸ್ತಾನ vs ಜಿಂಬಾಬ್ವೆ ಏಕದಿನ-ಟಿ20 ಸರಣಿ

ರಾವಲ್ಪಿಂಡಿ: ಮಂಗಳವಾರ ಪಾಕಿಸ್ತಾನ್ ಕ್ರಿಕೆಟ್​ ಬೋರ್ಡ್ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ಜಿಂಬಾಬ್ವೆ ಮತ್ತು ಪಾಕಿಸ್ತಾನ್​ ತಂಡಗಳ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳಿಗೆ ನೆಗೆಟಿವ್ ವರದಿ ಬಂದಿದೆ.

ಪಂದ್ಯದ ಅಧಿಕಾರಿಗಳು ಸೇರಿದಂತೆ 107 ಕೋವಿಡ್ ಟೆಸ್ಟ್​ಗಳನ್ನು ಮಾಡಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಮವಾರ ಪಿಸಿಬಿ ಕೋವಿಡ್​ 19 ಪ್ರೋಟೋಕಾಲ್​ಗಳ ಭಾಗವಾಗಿ 2 ಕಡೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿತ್ತು., ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಹಾಗೂ ಪಂದ್ಯದ ಅಧಿಕಾರಿಗಳ ಮೇಲೆ ನಡೆಸಿದ 107 ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಪಡೆದಿದ್ದಾರೆ ಎಂದು ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.

ಫಲಿತಾಂಶದ ನಂತರ ಎಲ್ಲಾ 107 ಮಂದು ರಾವಲ್ಪಿಂಡಿಯಲ್ಲಿ ಹೋಟೆಲ್​ನಲ್ಲಿ ಬಯೋ ಸೆಕ್ಯೂರ್ ಬಬಲ್​ಗೆ ತೆರಳಿದ್ದಾರೆ. ಇದೀಗ ಆಟಗಾರರು ಒಬ್ಬರನ್ನೊಬ್ಬರು ಜೊತೆ ಮಾತನಾಡಲು ಮತ್ತು ಸ್ವತಂತ್ರರಾಗಿ ಬಯೋಬಬಲ್​ನಲ್ಲಿ ಇರಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎರಡು ತಂಡಗಳ ನಡುವೆ 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳು ರಾವಲ್ಪಿಂಡಿಯಲ್ಲಿ ನಡೆಯಲಿವೆ. ಇದರಲ್ಲಿ ಏಕದಿನ ಸರಣಿ ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ನ ಭಾಗವಾಗಲಿದೆ.

Last Updated : Oct 27, 2020, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.