ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಇದೀಗ ಅನಿರ್ದಿಷ್ಟಾವಧಿವರೆಗೆ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸಿದ್ದು, ಅದೇ ಕಾರಣಕ್ಕಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಬೋರ್ಡ್(ECB) ಮಾಹಿತಿ ಹಂಚಿಕೊಂಡಿದೆ.
ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಬೇಕಾಗಿದ್ದ ಸ್ಟಾರ್ ಆಲ್ರೌಂಡರ್ ಇದೀಗ ದಿಢೀರ್ ನಿರ್ಧಾರ ಮಾಡಿದ್ದು, ತಕ್ಷಣದಿಂದಲೇ ಜಾರಿಗೊಳ್ಳುವಂತೆ ನಿರ್ಧಾರ ಕೈಗೊಂಡಿದ್ದಾಗಿ ಇಸಿಬಿ ತಿಳಿಸಿದೆ.
-
England all-rounder Ben Stokes will take an indefinite break from all cricket with immediate effect: England and Wales Cricket Board (ECB)
— ANI (@ANI) July 30, 2021 " class="align-text-top noRightClick twitterSection" data="
(File photo) pic.twitter.com/FFCONX9rr5
">England all-rounder Ben Stokes will take an indefinite break from all cricket with immediate effect: England and Wales Cricket Board (ECB)
— ANI (@ANI) July 30, 2021
(File photo) pic.twitter.com/FFCONX9rr5England all-rounder Ben Stokes will take an indefinite break from all cricket with immediate effect: England and Wales Cricket Board (ECB)
— ANI (@ANI) July 30, 2021
(File photo) pic.twitter.com/FFCONX9rr5
ಇಂಡಿಯನ್ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಬೆರಳಿನ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿದ್ದ ಸ್ಟೋಕ್ಸ್ ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದರು. ಪಾಕ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಯಿಂದ ಹೊರಗುಳಿದಿದ್ದರು. ಆದರೆ ಈ ಸರಣಿಯಲ್ಲಿ ಭಾಗಿಯಾಗಬೇಕಾಗಿದ್ದ ಇಂಗ್ಲೆಂಡ್ನ ಪ್ರಮುಖ ಪ್ಲೇಯರ್ಸ್ ಕೋವಿಡ್ ಸೋಂಕಿಗೊಳಗಾಗಿದ್ದ ಕಾರಣ ಏಕದಿನ ಸರಣಿಗೆ ನಾಯಕತ್ವ ಜವಾಬ್ದಾರಿ ನೀಡಲಾಗಿತ್ತು.
ಈ ಸರಣಿಯಲ್ಲಿ ತಂಡ ಮುನ್ನಡೆಸಿದ್ದ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಸರಣಿಯಲ್ಲಿ 3-0 ಅಂತರದಿಂದ ಆಂಗ್ಲರ ಪಡೆ ಗೆಲುವು ಸಾಧಿಸಿತು. ಇದಾದ ಬಳಿಕ ಟಿ-20 ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದರು.
ಇದೀಗ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಭಾಗಿಯಾಗಬೇಕಾಗಿತ್ತು. ಅದಕ್ಕೆ ಒಂದು ವಾರ ಬಾಕಿ ಇರುವಾಗಲೇ ಈ ನಿರ್ಧಾರ ಕೈಗೊಂಡಿದ್ದು, ಇಂಗ್ಲೆಂಡ್ ಟೆಸ್ಟ್ ತಂಡದಿಂದ ಹಿಂದೆ ಸರಿಯುತ್ತಿರುವುದಾಗಿ ಇಸಿಬಿ ತಿಳಿಸಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಬೆರಳಿನ ಗಾಯಕ್ಕೊಳಗಾಗಿರುವ ಕಾರಣ ಮತ್ತಷ್ಟು ವಿಶ್ರಾಂತಿ ಅವಶ್ಯಕತೆ ಇರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ಇಸಿಬಿ ಹೇಳಿದ್ದು, ಅವರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.