ಕೇಪ್ಟೌನ್: ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್(AB de Villiers retirement) ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. 2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ 'ಮಿ 360' ಐಪಿಎಲ್(IPL) ಸೇರಿದಂತೆ ವಿವಿಧ ದೇಶಗಳ ಲೀಗ್ಗಳಲ್ಲಿ ಆಡುತ್ತಿದ್ದರು.
ವಿದಾಯದ ಬಗ್ಗೆ ಟ್ವೀಟ್ ಮೂಲಕ ಡಿವಿಲಿಯರ್ಸ್(Villiers) ಅವರು ದೃಢಪಡಿಸಿದ್ದಾರೆ. ಅಲ್ಲದೇ, ಸರಣಿ ಟ್ವೀಟ್ಗಳ ಮೂಲಕ ತಮ್ಮ ಅಭಿಮಾನಿಗಳು, ಸಹ ಆಟಗಾರರು, ವಿವಿಧ ಫ್ರಾಂಚೈಸಿಗಳಿಗೂ ಕೂಡ ಅವರು ಧನ್ಯವಾದ ತಿಳಿಸಿದ್ದಾರೆ.
-
It has been an incredible journey, but I have decided to retire from all cricket.
— AB de Villiers (@ABdeVilliers17) November 19, 2021 " class="align-text-top noRightClick twitterSection" data="
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly. pic.twitter.com/W1Z41wFeli
">It has been an incredible journey, but I have decided to retire from all cricket.
— AB de Villiers (@ABdeVilliers17) November 19, 2021
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly. pic.twitter.com/W1Z41wFeliIt has been an incredible journey, but I have decided to retire from all cricket.
— AB de Villiers (@ABdeVilliers17) November 19, 2021
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly. pic.twitter.com/W1Z41wFeli
ಈ ವಿದಾಯದ ಮೂಲಕ ಐಪಿಎಲ್ನಲ್ಲಿ ಆರ್‌ಸಿಬಿ ತಂಡದಲ್ಲಿ ಇನ್ಮುಂದೆ ಎಬಿಡಿ ಕಾಣಿಸಿಕೊಳ್ಳುವುದಿಲ್ಲ. ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಒಂದು ಯುಗದ ಅಂತ್ಯವಾಗಿದೆ. ನಿಮ್ಮಂತಹ ಚಿಂತನಶೀಲ ವ್ಯಕ್ತಿ ಇನ್ನೊಬ್ಬರಿಲ್ಲ. RCB ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳಲಿದೆ. ನಮ್ಮ ತಂಡಕ್ಕೆ, ಅಭಿಮಾನಿಗಳಿಗೆ ಮತ್ತು ಒಟ್ಟಾರೆಯಾಗಿ ಕ್ರಿಕೆಟ್ ಪ್ರೇಮಿಗಳಿಗೆ ನೀವು ನೀಡಿದ ಕೊಡುಗೆ, ಎಲ್ಲದಕ್ಕೂ, ಧನ್ಯವಾದಗಳು. ಕ್ರಿಕೆಟ್ ದಂತಕಥೆಗೆ ನಿವೃತ್ತಿಯ ಶುಭಾಶಯಗಳು ಎಂದು ತಿಳಿಸಿದೆ.
-
Announcement 🔊 @ABdeVilliers17 retires from all cricket
— Royal Challengers Bangalore (@RCBTweets) November 19, 2021 " class="align-text-top noRightClick twitterSection" data="
End of an era! 😔 There’s nobody like you, AB. We’ll miss you dearly at RCB. ❤️ For all that you’ve done and given to the team, to the fans, and to cricket lovers in general, #ThankYouAB 🙏🏼 Happy retirement, legend! pic.twitter.com/JivSPTVn88
">Announcement 🔊 @ABdeVilliers17 retires from all cricket
— Royal Challengers Bangalore (@RCBTweets) November 19, 2021
End of an era! 😔 There’s nobody like you, AB. We’ll miss you dearly at RCB. ❤️ For all that you’ve done and given to the team, to the fans, and to cricket lovers in general, #ThankYouAB 🙏🏼 Happy retirement, legend! pic.twitter.com/JivSPTVn88Announcement 🔊 @ABdeVilliers17 retires from all cricket
— Royal Challengers Bangalore (@RCBTweets) November 19, 2021
End of an era! 😔 There’s nobody like you, AB. We’ll miss you dearly at RCB. ❤️ For all that you’ve done and given to the team, to the fans, and to cricket lovers in general, #ThankYouAB 🙏🏼 Happy retirement, legend! pic.twitter.com/JivSPTVn88
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಡಿವಿಲಿಯರ್ಸ್, 2011ರಿಂದಲೇ ಆರ್‌ಸಿಬಿ ತಂಡದಲ್ಲಿ ಆಡಿದ್ದರು. ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಜೊತೆ ಮೈದಾನ ಹಾಗೂ ಮೈದಾನದ ಹೊರಗೂ ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆರ್ಸಿಬಿಯ ಆಪತ್ಬಾಂದವ ಎಂದೇ ಮನೆಮಾತಾಗಿದ್ದ ಎಬಿಡಿ ಹಲವಾರು ಪಂದ್ಯಗಳಲ್ಲಿ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ಜಯ ತಂದಿದ್ದರು.
ವಿರಾಟ್ ಕೊಹ್ಲಿ ಜೊತೆ ಅಮೋಘ ಜೊತೆಯಾಟಗಳಲ್ಲಿ ಭಾಗಿಯಾಗಿದ್ದ ಡಿವಿಲಿಯರ್ಸ್, ಆರ್‌ಸಿಬಿ ಪರ 156 ಪಂದ್ಯಗಳಲ್ಲಿ 4,491 ರನ್ ಬಾರಿಸಿದ್ದಾರೆ. ಕೊಹ್ಲಿಯ ಬಳಿಕ ಆರ್‌ಸಿಬಿ ಪರ ಸಾರ್ವಕಾಲಿಕ ಎರಡನೇ ಗರಿಷ್ಟ ರನ್ ಸ್ಕೋರರ್ ಆಗಿದ್ದಾರೆ. 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 133* ಮತ್ತು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅವರು ಗಳಿಸಿದ್ದ ಅಜೇಯ 129 ರನ್ಗಳು RCB ಇತಿಹಾಸದಲ್ಲಿ ಎರಡನೇ ಮತ್ತು ಮೂರನೇ ಅತಿ ಹೆಚ್ಚು ವೈಯಕ್ತಿಕ ರನ್ ಮೊತ್ತವಾಗಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ಟಿಮ್ ಪೇನ್ ದಿಢೀರ್ ರಾಜೀನಾಮೆ