ಪುಣೆ: ಶ್ರೀಲಂಕಾ ವಿರುದ್ಧ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 190 ರನ್ ಗಳಿಸಿ 16 ರನ್ಗಳಿಂದ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯು 1-1ರಲ್ಲಿ ಸಮಬಲವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡವು ಭಾರತಕ್ಕೆ 207 ರನ್‌ಗಳ ಬೃಹತ್ ಗೆಲುವಿನ ಗುರಿ ನೀಡಿತ್ತು. ಕುಶಾಲ್ ಮೆಂಡಿಶ್(52) ಹಾಗೂ ನಾಯಕ ದಸುನ್ ಶನಕ(56) ಭರ್ಜರಿ ಅರ್ಧಶತಕ ಸಿಡಿಸಿದರು. ಭಾರತದ ಪರ ವೇಗದ ಬೌಲರ್ ಉಮ್ರಾನ್ ಮಲಿಕ್ 3 ಹಾಗೂ ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.
207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತವು, ಆರಂಭಿಕ ಆಟಗಾರರ ವೈಫಲ್ಯದ ನಡುವೆಯೂ ಗೆಲುವಿಗಾಗಿ ಹೋರಾಡಿತು. ಇಶಾನ್ ಕಿಶನ್ (2), ಶುಭಮನ್ ಗಿಲ್ (5) ಮತ್ತು ರಾಹುಲ್ ತ್ರಿಪಾಠಿ (5) ಎರಡಂಕಿ ದಾಟದೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ನಿರಾಶೆ ಮೂಡಿಸಿದ್ದರಿಂದ ತಂಡದ ಮೊತ್ತ 57 ಆಗುವಷ್ಟರಲ್ಲಿ ಪ್ರಮುಖ ಐವರು ಬ್ಯಾಟ್ಸಮನ್ಗಳ ವಿಕೆಟ್ ಬಿದ್ದವು.
ಪ್ರಮುಖವಾಗಿ ಆಲ್ರೌಂಡರ್ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಸಿಡಿಸಿ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 51 ರನ್ ಬಾರಿಸಿದರು. ಇವರಿಬ್ಬರ ಅದ್ಭುತ 91 ರನ್‌ಗಳ ಜೊತೆಯಾಟ ಭಾರತದ ಪಾಳೆಯದಲ್ಲಿ ಆಶಾಯಭಾವ ಮೂಡಿಸಿತ್ತು. ಆದ್ರೆ ಸೂರ್ಯಕುಮಾರ್ ವಿಕೆಟ್ ಬಳಿಕ ಶಿವಂ ಮಾವಿ 15 ಎಸೆತಗಳಲ್ಲಿ 26 ರನ್ ಮೂಲಕ ಭರ್ಜರಿ ಬ್ಯಾಟಿಂಗ್ ನಡೆಸಿ ಅಕ್ಷರ್ ಪಟೇಲ್ಗೆ ಸಾಥ್ ನೀಡಿದರೂ ಜಯ ಸಾಧ್ಯವಾಗಲಿಲ್ಲ. ನಾಯಕ ಹಾರ್ದಿಕ್ 12, ದೀಪಕ್ಸೇ ಹುಡಾ 9 ರನ್ ಸೇರಿ ಪ್ರಮುಖ ಬ್ಯಾಟರ್ಗಳ ವೈಫಲ್ಯದಿಂದ ಸೋಲು ಕಾಣುವಂತಾಯಿತು.
ಇದಕ್ಕೂ ಮುನ್ನ ಲಂಕಾದ ಆರಂಭಿಕ ಜೋಡಿ ಫಥುಮ್ ನಿಸಾಂಕ (33) ಮತ್ತು ಕುಶಾಲ ಮೆಂಡಿಸ್ (52) ರನ್ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಆದ್ರೆ ನಂತರ 58 ರನ್‌ಗಳ ಗಳಿಸುವಷ್ಟರಲ್ಲಿ ಲಂಕಾ ತಂಡ ಆರು ವಿಕೆಟ್‌ಗಳು ಪತನವಾದವು. ಸ್ಪಿನ್ನರ್ ಅಕ್ಷರ್ ಪಟೇಲ್ (24ಕ್ಕೆ2) ಮತ್ತು ಉಮ್ರಾನ್ ಮಲೀಕ್ (48ಕ್ಕೆ3) ವಿಕೆಟ್ ಕಿತ್ತು ರನ್ ಗಳಿಕೆ ನಿಯಂತ್ರಿಸಿದರು. ಆದರೆ, ಕೊನೆಯ 4 ಓವರ್‌ಗಳಲ್ಲಿ ದಸುನ್ 27 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ 68 ರನ್ ಗಳಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು. ನಾಯಕ ಪಾಂಡ್ಯ ಯೋಜನೆ ತಲೆ ಕೆಳಗಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 206 ರನ್‌ಗಳ ಸವಾಲಿನ ಗುರಿಯನ್ನು ಭಾರತಕ್ಕೆ ನೀಡಿತು. ಶ್ರೀಲಂಕಾ ಪರ ದಿಲ್ಶನ್, ಕಸುನ್ ಮತ್ತು ದಸುನ್ ತಲಾ 2 ವಿಕೆಟ್ ಕಬಳಿಸಿ, ಭಾರತ ತಂಡವನ್ನು ಕಟ್ಟಿ ಹಾಕಿದರು.
ಮುಂಬೈ ಸೋಲಿನ ಬಳಿಕ ಕಮ್ಬ್ಯಾಕ್ ಮಾಡಿರುವ ದಸುನ್ ಶನಕ ಪಡೆ ಸರಣಿಯಲ್ಲಿ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಜ.7ರಂದು ರಾಜ್ಕೋಟ್ನಲ್ಲಿ ನಡೆಯಲಿದೆ.
ಸ್ಕೋರ್ ವಿವರ:
ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 206
ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 190
ಇದನ್ನೂ ಓದಿ: ಮೊಣಕಾಲಿಗೆ ಗಾಯ, ಲಂಕಾ ಸರಣಿಯಿಂದ ಸಂಜು ಸ್ಯಾಮ್ಸನ್ ಔಟ್: ಜಿತೇಶ್ ಶರ್ಮಾಗೆ ಚಾನ್ಸ್