ಢಾಕಾ: ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಜಯ ದಾಖಲು ಮಾಡಿರುವ ಬಾಂಗ್ಲಾ ತಂಡ ಸರಣಿಯಲ್ಲಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಇಲ್ಲಿನ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಮತ್ತು ಆತಿಥೇಯ ಬಾಂಗ್ಲಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಪಡೆ 103 ರನ್ಗಳ(ಡಕ್ವರ್ಥ ಲೂಯಿಸ್) ಅಂತರದಿಂದ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಮುಸ್ತಫಿಜುರ್ ರಹೀಮ್ 125ರನ್ಗಳ ನೆರವಿನಿಂದ 48.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 246ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಶ್ರೀಲಂಕಾ ತಂಡ ಬಾಂಗ್ಲಾ ಬೌಲಿಂಗ್ ದಾಳಿ ಮುಂದೆ ತತ್ತರಿಸಿ ಹೋಯಿತು.
40 ಓವರ್ಗಳಲ್ಲಿ 9ವಿಕೆಟ್ ಕಳೆದುಕೊಂಡು ಕೇವಲ 140ರನ್ ಮಾತ್ರ ಗಳಿಕೆ ಮಾಡಿತು. ಪಂದ್ಯ ನಡೆಯುತ್ತಿದ್ದ ವೇಳೆ ಮಳೆ ಸುರಿದ ಕಾರಣ ಶ್ರೀಲಂಕಾ ತಂಡಕ್ಕೆ 40 ಓವರ್ಗಳಲ್ಲಿ 245ರನ್ಗಳಿಕೆಗೆ ಅವಕಾಶ ನೀಡಲಾಗಿತ್ತು.