ವೆಲ್ವಾ(ಸ್ಪೇನ್) : ಜಪಾನ್ನ ವಿಶ್ವದ ನಂಬರ್ 2ನೇ ಶ್ರೇಯಾಂಕದ ಅಕಾನೆ ಯಮಗುಚಿ ಚೈನೀಸ್ ತೈಪೆಯ ಥಾಯ್ ಜು ಯಿಂಗ್ ವಿರುದ್ಧ ಸುಲಭ ಜಯ ಸಾಧಿಸಿ ನೂತನ ವಿಶ್ವಚಾಂಪಿಯನ್ ಆಗಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಯಮಗುಚಿ 21-14, 21-11ರ ಅಂತರದಲ್ಲಿ ಯಿಂಗ್ ವಿರುದ್ಧ ಕೇವಲ 39 ನಿಮಿಷಗಳಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಯಮಗುಚಿ ಸೆಮಿಫೈನಲ್ನಲ್ಲಿ ಚೀನಾದ ಝಾಂಗ್ ಯಿ ಮನ್ ವಿರುದ್ಧ 21-19, 21-19ರ ನೇರ ಗೇಮ್ಗಳ ಅಂತರದಲ್ಲಿ ಜಯ ಸಾಧಿಸಿದ್ದರು.
ಹಾಲಿ ವಿಶ್ವ ಚಾಂಪಿಯನ್ ಭಾರತದ ಪಿವಿ ಸಿಂಧುರನ್ನು ಕ್ವಾರ್ಟರ್ ಫೈನಲ್ನಲ್ಲಿ ಮಣಿಸಿದ್ದ ಯಿಂಗ್ ಸೆಮಿಫೈನಲ್ನಲ್ಲಿ ಚೀನಾದ ಹೆ ಬಿಂಗ್ ಜಿಯಾವೋ ವಿರುದ್ದ ಮೂರು ಗೇಮ್ಗಳ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.
-
Akane Yamaguchi and Tai Tzu Ying compete to be crowned in their first-ever World Championships final in Huelva.#BWFWorldChampionships #Huelva2021 pic.twitter.com/cLRoj88f8Q
— BWF (@bwfmedia) December 19, 2021 " class="align-text-top noRightClick twitterSection" data="
">Akane Yamaguchi and Tai Tzu Ying compete to be crowned in their first-ever World Championships final in Huelva.#BWFWorldChampionships #Huelva2021 pic.twitter.com/cLRoj88f8Q
— BWF (@bwfmedia) December 19, 2021Akane Yamaguchi and Tai Tzu Ying compete to be crowned in their first-ever World Championships final in Huelva.#BWFWorldChampionships #Huelva2021 pic.twitter.com/cLRoj88f8Q
— BWF (@bwfmedia) December 19, 2021
2013ರ ಬಳಿಕ ಭಾರತಕ್ಕೆ ನಿರಾಶೆ
ವಿಶ್ವ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತ 2013ರ ಬಳಿಕೆ ಇದೇ ಮೊದಲ ಬಾರಿಗೆ ಪದಕವಂಚಿವಾಗಿದೆ. 2013 ಮತ್ತು 14ರಲ್ಲಿ ಪಿವಿ ಸಿಂಧು ಕಂಚು ಗೆದ್ದರೆ, 2015ರಲ್ಲಿ ಸೈನಾ ನೆಹ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು.
ನಂತರ 2017 ಮತ್ತು 18ರಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. 2019ರಲ್ಲಿ ಸಿಂಧು ಜಪಾನ್ನ ನೊಜೋಮಿ ಒಕುಹರ ಅವರನ್ನು ಮಣಿಸಿ ವಿಶ್ವಚಾಂಪಿಯನ್ ಆಗಿದ್ದರು. ಆದರೆ, 2021ರಲ್ಲಿ ಕ್ವಾರ್ಟರ್ ಫೈನಲ್ನಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದರು.
ಇನ್ನು ಮಿಕ್ಸಡ್ ಡಬಲ್ಸ್ನಲ್ಲಿ ಥಾಯ್ಲೆಂಡ್ನ ದೆಚಪೋಲ್ ಪುವರನುಕ್ರೋಹ್ ಮತ್ತು ಸಾಪ್ಸಿರೀ ಟೆರಟನಾಚೈ ಫೈನಲ್ನಲ್ಲಿ ಯುಟಾ ವಟನಬೆ ಮತ್ತು ಅರಿಸಾ ಹಿಗಾಶಿನೊರನ್ನು 21-13, 21-14ರಲ್ಲಿ ಮಣಿಸಿ ಚಾಂಪಿಯನ್ ಆದರು.
ಮಹಿಳಾ ಡಬಲ್ಸ್ನಲ್ಲಿ ಚೀನಾದ ಚೆನ್ ಕಿಂಗ್ ಚೆನ್ ಮತ್ಉ ಜಿಯಾ ಯಿ ಫಾನ್ ವಿರುದ್ಧ ದಕ್ಷಿಣ ಕೊರಿಯಾದ ಲೀ ಸೊಹೀ ಮತ್ತು ಶಿನ್ ಸೆಯುಂಗ್ಚಾನ್ ವಿರುದ್ಧ 21-16, 21-17ರಲ್ಲಿ ಗೆದ್ದು ಚಿನ್ನದ ಪದಕ ಪಡೆದರು.
ಇದನ್ನೂ ಓದಿ:ವಿಶ್ವ ಚಾಂಪಿಯನ್‌ಶಿಪ್ ಕಂಚಿಗೆ ತೃಪ್ತಿಯಾಗಿಲ್ಲ.. ಆದರೆ, ಇದು ಭವಿಷ್ಯಕ್ಕೆ ಮೆಟ್ಟಿಲು : ಲಕ್ಷ್ಯ ಸೇನ್