ETV Bharat / sports

7 ದೇಶಗಳು ಥಾಮಸ್​ ಉಬರ್​ ಕಪ್​ನಿಂದ ಹಿಂದೆ ಸರಿದ ಬೆನ್ನಲ್ಲೇ ಸುರಕ್ಷತೆಯ ಬಗ್ಗೆ ಸೈನಾ ಆತಂಕ - ಸುರಕ್ಷತೆಯ ಬಗ್ಗೆ ಸೈನಾ ನೆಹ್ವಾಲ್​ ಆತಂಕ

ಡೆನ್ಮಾರ್ಕ್​ನಲ್ಲಿ ಅಕ್ಟೋಬರ್​ 3 ರಿಂದ 11ರವರೆಗೆ ಥಾಮಸ್ ಮತ್ತು ಉಬರ್​ ಕಪ್​ ನಡೆಯಲಿದೆ. ಆದರೆ, ಪ್ರಮುಖ ರಾಷ್ಟ್ರಗಳಾದ ಕೊರಿಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ತೈವಾನ್​, ಸಿಂಗಾಪುರ್, ಹಾಂಗ್​ಕಾಂಗ್​ ದೇಶಗಳು ಕೊರೊನಾ ಭೀತಿಯಿಂದ ಟೂರ್ನಿಯಿಂದ ಹಿಂದೆ ಸರಿದಿವೆ..

ಸೈನಾ ನೆಹ್ವಾನ್​
ಸೈನಾ ನೆಹ್ವಾನ್​
author img

By

Published : Sep 13, 2020, 9:56 PM IST

ನವದೆಹಲಿ : ವಿಶ್ವದ ಮಾಜಿ ನಂಬರ್​ ಒನ್ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಮುಂದಿನ ತಿಂಗಳು ಡೆನ್ಮಾರ್ಕ್​ನಲ್ಲಿ ನಡೆಯಲಿರುವ ಥಾಮಸ್​ ಮತ್ತು ಉಬರ್​ ಕಪ್​ ಟೂರ್ನಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೋವಿಡ್​-19 ಕಠಿಣ ಪರಿಸ್ಥಿತಿಯಲ್ಲಿ ಟೂರ್ನಿ ಆಯೋಜನೆ ಸುರಕ್ಷಿತವೇ ಎಂದು ಪ್ರಶ್ನಿಸಿದ್ದಾರೆ.

ವಿಶ್ವದಾದ್ಯಂತ ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳಿಂದಾಗಿ ಏಳು ಪ್ರಮುಖ ದೇಶಗಳು ಪಂದ್ಯಾವಳಿಯಿಂದ ಹಿಂದೆ ಸರಿದ ನಂತರ ನೆಹ್ವಾಲ್ ಟ್ವೀಟ್​ ಮೂಲಕ ತಮ್ಮ ಆತಂಕ ತೋಡಿಕೊಂಡಿದ್ದಾರೆ.

'ಸಾಂಕ್ರಾಮಿಕ ರೋಗದ ಕಾರಣದಿಂದ 7 ರಾಷ್ಟ್ರಗಳು ಹಿಂದೆ ಸರಿದಿವೆ. ಈ ಸಮಯದಲ್ಲಿ ಪಂದ್ಯಾವಳಿ ನಡೆಸುವುದು ಸಾಕಷ್ಟು ಸುರಕ್ಷಿತವೇ?...(ಥಾಮಸ್​ ಮತ್ತು ಉಬರ್​ ಕಪ್​ 2020)'ಎಂದು ಟ್ವೀಟ್​ ಮಾಡಿದ್ದಾರೆ.

ಡೆನ್ಮಾರ್ಕ್​ನಲ್ಲಿ ಅಕ್ಟೋಬರ್​ 3 ರಿಂದ 11ರವರೆಗೆ ಥಾಮಸ್ ಮತ್ತು ಉಬರ್​ ಕಪ್​ ನಡೆಯಲಿದೆ. ಆದರೆ, ಪ್ರಮುಖ ರಾಷ್ಟ್ರಗಳಾದ ಕೊರಿಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ತೈವಾನ್​, ಸಿಂಗಾಪುರ್, ಹಾಂಗ್​ಕಾಂಗ್​ ದೇಶಗಳು ಕೊರೊನಾ ಭೀತಿಯಿಂದ ಟೂರ್ನಿಯಿಂದ ಹಿಂದೆ ಸರಿದಿವೆ.

ಭಾರತದಲ್ಲಿ ನಡೆಯಬೇಕಿದ್ದ ತರಬೇತಿ ಶಿಬಿರದ ಮೇಲೆ ಕೋವಿಡ್​-19 ಬಿಕ್ಕಟ್ಟು ಪರಿಣಾಮ ಬೀರಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ನಿಗದಿಪಡಿಸಿದ ಕ್ಯಾರಂಟೈನ್ ಷರತ್ತುಗಳನ್ನು ಆಟಗಾರರು ಸ್ವೀಕರಿಸಲು ನಿರಾಕರಿಸಿದ ಕಾರಣ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಪೂರ್ವ ಸಿದ್ಧತಾ ಶಿಬಿರವನ್ನು ರದ್ದುಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.