ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರು ಹಾಗೂ ಪತ್ನಿ ಜೊತೆ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ 318 ರನ್ಗಳ ದಾಖಲೆಯ ಜಯ ಸಾಧಿಸಿತ್ತು.
ಇದೇ ಖುಷಿಯಲ್ಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಕರ್ನಾಟಕ ಆಟಗಾರರಾದ ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಆರ್.ಅಶ್ವಿನ್ ಅವರೊಂದಿಗೆ ಬೋಟಿಂಗ್, ಸ್ವಿಮ್ಮಿಂಗ್ ನಡೆಸುತ್ತಾ ಗೆಲುವಿನ ಸಂಭ್ರಮ ಆಚರಿಸುತ್ತಿದ್ದಾರೆ. ಈ ಫೋಟೋಗಳನ್ನು ಕನ್ನಡಿಗ ಕೆ ಎಲ್ ರಾಹುಲ್ ತಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
-
Endless blues 🌊💙 pic.twitter.com/WigHnr7e5b
— K L Rahul (@klrahul11) August 27, 2019 " class="align-text-top noRightClick twitterSection" data="
">Endless blues 🌊💙 pic.twitter.com/WigHnr7e5b
— K L Rahul (@klrahul11) August 27, 2019Endless blues 🌊💙 pic.twitter.com/WigHnr7e5b
— K L Rahul (@klrahul11) August 27, 2019
ಟಿ20 ಸರಣಿಯ ವೇಳೆ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್ ಇದೇ ರೀತಿ ಬೀಚ್ನಲ್ಲಿ ಸೇರಿ ಎಂಜಾಯ್ ಮಾಡಿದ್ದರು. ಇದೀಗ ಈ ಐದು ಜನ ಇಂದು ವಿಂಡೀಸ್ ಪ್ರವಾಸವನ್ನು ಸಖತ್ ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದಾರೆ. ಮೊದಲ ಟೆಸ್ಟ್ಗೂ ಮುನ್ನ ಕೊಹ್ಲಿ ಎಲ್ಲಾ ಆಟಗಾರರೊಂದಿಗೆ ಬೀಚ್ನಲ್ಲಿ ತೆಗೆದ ಫೋಟೋವೊಂದನ್ನು ಶೇರ್ ಮಾಡಿದ್ದರು.