ETV Bharat / sitara

ಹಲ್ಲು ಮುರಿದುಕೊಂಡ ಬಿಗ್​ಬಾಸ್​ ಮಂಜು..! - ಬಿಗ್​ಬಾಸ್ ರಾಜೀವ್

ಬಿಗ್​ಬಾಸ್​ನಲ್ಲಿ ಟಾಸ್ಕ್​ ಮಾಡುತ್ತಿರುವ ಸಂದರ್ಭದಲ್ಲಿ ರಾಜೀವ್​ ಅವರ ಕೈ ತಗುಲಿ ಮಂಜು ಅವರ ಹಲ್ಲು ಮುರಿದಿದೆ.

biggboss-task
ಬಿಗ್​ಬಾಸ್​ ಮಂಜು
author img

By

Published : Mar 31, 2021, 12:17 PM IST

ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೆ ಟಾಸ್ಕ್​ಗಳು ಟಫ್ ಆಗುತ್ತಿವೆ. ನಿನ್ನೆ ನಡೆದ ಇಟ್ಟಿಗೆ ಹೊಡೆಯುವ ಟಾಸ್ಕ್​ನಲ್ಲಿ ರಾಜೀವ್ ಕೈ ನೋವು ಮಾಡಿಕೊಂಡರೆ, ಮಂಜು ಪಾವಗಡ ಹಲ್ಲು ಮುರಿದುಕೊಂಡಿದ್ದಾರೆ.

ಬಿಗ್ ಬಾಸ್ ನೀಡಿದ ಟಾಸ್ಕ್​ನಲ್ಲಿ ಅನುಬಂಧ ಹಾಗೂ ಜಾತ್ರೆ ಗ್ಯಾಂಗ್ ಎದುರಾಳಿ ತಂಡದ ಹಂಚು ಹೊಡೆದುಹಾಕಬೇಕು. ಶುಭಾ ಪೂಂಜಾ ಮತ್ತು ದಿವ್ಯಾ ಉರುಡುಗ ಅವರು ಕ್ಯಾಪ್ಟನ್‌ಗಳಗಾಗಿದ್ದರು. ದಿವ್ಯಾ ಅವರ ಅನುಬಂಧ ಟೀಮ್‌ನಲ್ಲಿ ರಾಜೀವ್, ಶುಭಾ ಅವರ ಜಾತ್ರೆ ಗ್ಯಾಂಗ್ ತಂಡದಲ್ಲಿ ಮಂಜು ಇದ್ದರು.

ಒಂದು ತಂಡ ಸಂಗ್ರಹಿಸುವ ಹೆಂಚುಗಳನ್ನು ಎದುರಾಳಿ ತಂಡಗಳು ಒಡೆದು ಹಾಕುವ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ, ಅನುಬಂಧ ತಂಡ ಸಂಗ್ರಹಿಸಿದ್ದ ಹೆಂಚುಗಳನ್ನು ಮಂಜು ಒಡೆದು ಹಾಕಲು ಮುಂದಾದರು. ಆಗ ರಾಜೀವ್ ಅಡ್ಡಬಂದರು. ಆಗ ಅವರ ಮುಂಗೈ ಮಂಜು ಅವರ ಹಲ್ಲಿ ತಾಗಿದೆ. ಇದರಿಂದ ಮಂಜು ಅವರ ಮುಂದಿನ ಹಲ್ಲು ಮುರಿಯಿತು.

ಮಂಜು ಹಲ್ಲಿಗೆ ರಾಜೀವ್ ಕೈ ಹೊಡೆದದ್ದರಿಂದ ಕೈಗೆ ಪೆಟ್ಟಾಯಿತು. ಇಬ್ಬರು ನೋವಿನಿಂದ ಬಳಲಿದರು. ‌ಮಂಜು ಹಾಗೂ ರಾಜೀವ್​ಗೆ ಬಿದ್ದ ಏಟು ಮನೆಮಂದಿಗೆಲ್ಲಾ ಆಘಾತವಾಯಿತು. ಮನೆಯೊಳಗೆ ಹೋಗಿ ಮಂಜು ಬಾಯಿ ತೊಳೆದುಕೊಂಡರು. ಆಗ ಗಾರ್ಡನ್ ಏರಿಯಾದಲ್ಲಿ ಬಿದ್ದಿದ್ದ ಹಲ್ಲನ್ನು ಪ್ರಶಾಂತ್ ತಂದುಕೊಟ್ಟರು. ಆದರೆ, ರಾಜೀವ್​ಗೆ ತಮ್ಮ ನೋವಿಗಿಂತ ಮಂಜು ಹಲ್ಲಿನ ಬಗ್ಗೆ ಚಿಂತೆಯಾಗಿತ್ತು. ಮಂಜು ನಟನಾಗಿ ಇರುವುದರಿಂದ ಹಲ್ಲಿನ ಬಗ್ಗೆ ಅವರಿಗೆ ಚಿಂತೆಯಾಗಿತ್ತು. ನಂತರ ಇಬ್ಬರೂ ಒಬ್ಬರಿಗೊಬ್ಬರು ಕ್ಷಮೆ ಕೇಳಿಕೊಂಡರು.

ಅದಕ್ಕೆ ಮಂಜು, ಆಟ ಎಂದಮೇಲೆ ಇವೆಲ್ಲ ಇದ್ದದ್ದೇ ಎಂದು ರಾಜೀವ್‌ಗೆ ಸಮಾಧಾನ ಮಾಡಿದರು. ಅಲ್ಲದೇ, ಇಲ್ಲಿ ಈ ಥರ ಆದಾಗ ಮನೆಯಲ್ಲಿ ನೋಡುವ ನಮ್ಮ ಕುಟುಂಬದವರಿಗೆ ತುಂಬ ಬೇಸರವಾಗುತ್ತದೆ ಎಂದು ಇಬ್ಬರು ಮಾತನಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.