ಕಳೆದ ಮೇ 29 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮುದ್ದಿನ ಪುತ್ರಿ ಗೀತಾಂಜಲಿ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದರು. ಎಲ್ಲಾ ಕೆಲಸಗಳನ್ನು ಬದಿಗೊತ್ತಿ ತಾವು ಅಂದುಕೊಂಡಂತೆ ಕ್ರೇಜಿಸ್ಟಾರ್ ಏಕೈಕ ಪುತ್ರಿಯ ಮದುವೆ ನೆರವೇರಿಸಿದ್ದಾರೆ ಈ ಕನಸುಗಾರ.
- " class="align-text-top noRightClick twitterSection" data="">
ಆದರೆ ಆ ದಿನ ಯಾವುದೇ ವಾಹಿನಿಗಳಿಗೆ ಮದುವೆಯನ್ನು ಚಿತ್ರೀಕರಿಸುವ ಅವಕಾಶ ನೀಡಿರಲಿಲ್ಲ ರವಿಚಂದ್ರನ್. ಮಗಳ ಮದುವೆ ವಿಡಿಯೋವನ್ನು ಒಂದು ದಿನ ವಾಹಿನಿಗಳಿಗೆ ತಲುಪಿಸುವುದಾಗಿ ಕ್ರೇಜಿಸ್ಟಾರ್ ಹೇಳಿದ್ದರು. ಅದರಂತೆ ಗೌರಿ ಗಣೇಶ ಹಬ್ಬದ ವಿಶೇಷ ದಿನದಂದು ವೀಕ್ಷಕರು ಕ್ರೇಜಿಸ್ಟಾರ್ ಪುತ್ರಿಯ ಮದುವೆ ವಿಡಿಯೋವನ್ನು ನೋಡಬಹುದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುತ್ರಿ ಗೀತಾಂಜಲಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿರುವ ರವಿಚಂದ್ರನ್ ಮದುವೆಯ ಸಂಪೂರ್ಣ ವಿಡಿಯೋವನ್ನು ಕನ್ನಡ ವಾಹಿನಿಯೊಂದಕ್ಕೆ ನೀಡಿದ್ದಾರೆ. ಸೆಪ್ಟೆಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಕಲರ್ಸ್ ವಾಹಿನಿಯಲ್ಲಿ 'ನನ್ನ ಮಗಳ ಮದುವೆ' ಎಂಬ ಹೆಸರಿನಲ್ಲಿ ಈ ವಿಡಿಯೋ ಪ್ರಸಾರವಾಗುತ್ತಿದೆ.
ಮೇ 29 ರಂದು ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ರಜನೀಕಾಂತ್, ಚಿರಂಜೀವಿ, ಸುದೀಪ್, ಉಪೇಂದ್ರ, ಪ್ರಭು, ಜಗ್ಗೇಶ್, ಪುನೀತ್ ರಾಜ್ಕುಮಾರ್, ಗಣೇಶ್ ಸೇರಿದಂತೆ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಗಣ್ಯರು, ರಾಜಕೀಯ ಗಣ್ಯರು ಆಗಮಿಸಿ ವಧು-ವರರನ್ನು ಹಾರೈಸಿದರು. ವಿಶೇಷ ಎಂದರೆ ಮೇ. 29 ರಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟಿದ ದಿನ ಕೂಡಾ.