ಮುಂಬೈ: ನಟಿ ಹಾಗೂ ಫಿಟ್‌ನೆಸ್ ಐಕಾನ್ ಮಂದಿರಾ ಬೇಡಿ ಅವರು ಪುಟಾಣಿ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದು, ಈ ಕುರಿತಾದ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ಚಲನಚಿತ್ರ ನಿರ್ಮಾಪಕ, ಪತಿ ರಾಜ್ ಕೌಶಲ್ ಮತ್ತು ಮಂದಿರಾ ಒಬ್ಬ ಗಂಡು ಮಗನನ್ನು ಹೊಂದಿದ್ದು, ಈ ಹಿಂದೆ ತಮ್ಮ ಫೇಸ್‌ಬುಕ್ ನಲ್ಲಿ ಒಂದು ಹೆಣ್ಣುಮಗುವನ್ನು ದತ್ತು ಪಡೆಯುವ ಆಸೆಯನ್ನು ದಂಪತಿ ವ್ಯಕ್ತಪಡಿಸಿದ್ದರು.
ಇದೀಗ ಮಂದಿರಾ ಆಸೆಯಂತೆ ನಾಲ್ಕು ವರ್ಷದ ಮಗುವನ್ನು 2020 ರ ಜುಲೈ 28 ರಂದು ತಮ್ಮ ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಜೊತೆಗೆ ಮಗುವಿಗೆ ತಾರಾ ಬೇಡಿ ಕೌಶಲ್ ಎಂದು ನಾಮಕರಣ ಮಾಡಿದ್ದು, ಪರಿಪೂರ್ಣ ಕುಟುಂಬ ಎಂಬ ಶೀರ್ಷಿಕೆಯಡಿ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.