ETV Bharat / sitara

ಪ್ರವಾಹ ಪೀಡಿತ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ ಶ್ರೀಮಹಾದೇವ್

ಕಿರುತೆರೆ ನಟ ಶ್ರೀಮಹಾದೇವ್ ಅವರು ಪ್ರವಾಹ ಪೀಡಿತ ಸಂತ್ರಸ್ತರ ಸಂಕಷ್ಟಕ್ಕೆ ಸಂದಿಸುತ್ತಿದ್ದು, ಕೇವಲ ಸರ್ಕಾರ ಮಾತ್ರವಲ್ಲದೇ ನೀವು ಕೂಡ ಕೈಲಾದ ಮಟ್ಟಿಗೆ ಸಹಾಯ ಮಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Actor Shree Mahadev
Actor Shree Mahadev
author img

By

Published : Oct 22, 2020, 4:19 PM IST

ಕೊರೊನಾ ವೈರಸ್ ಹಾವಳಿ ಮತ್ತು ಪ್ರವಾಹದಿಂದಾಗಿ ಜನ ಜೀವನ ತತ್ತರಿಸಿ ಹೋಗಿದ್ದು, ಅನೇಕರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕಿರುತೆರೆ ಕಲಾವಿದರು ಸಹ ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದಾರೆ.

'ಇಷ್ಟದೇವತೆ' ಧಾರಾವಾಹಿಯಲ್ಲಿ ನಾಯಕ ಶ್ರೀರಾಮ್ ಆಗಿ ಅಭಿನಯಿಸಿದ್ದ ಶ್ರೀಮಹಾದೇವ್ ಅವರು ಕೂಡ ಜನರ ಸಂಕಷ್ಟಕ್ಕೆ ಮರುಗಿದ್ದು, ಸಹಾಯ ಮಾಡಿದ್ದಾರೆ. ಜೊತೆಗೆ ಉಳಿದವರು ಕೂಡ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

"ಉತ್ತರ ಕರ್ನಾಟಕದ ಜನರ ಜೀವನ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು, ದೇವಸ್ಥಾನ, ಮನೆಗಳೆಲ್ಲ ನೀರಿನಿಂದ ಆವೃತ್ತವಾಗಿವೆ. ಬಸ್ ಸಂಚರಿಸುವಲ್ಲಿ ಇದೀಗ ದೋಣಿ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ನಾಡಹಬ್ಬ ದಸರಾಕ್ಕೆ ಖರ್ಚು ಮಾಡುವ ಹಣವನ್ನು ಸರ್ಕಾರ ಕಲಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ ಊರಿನ ಜನರಿಗೆ ನೀಡಬಹುದಿತ್ತು‌. ಇದರಿಂದ ಜನರ ಕಷ್ಟ ಸ್ಪಲ್ಪ ಮಟ್ಟಿಗೆ ಪರಿಹಾರವಾಗುತ್ತಿತ್ತು ಎಂದು ಶ್ರೀ ಮಹಾದೇವ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.