ETV Bharat / sitara

ಲಂಡನ್​ನಲ್ಲಿ ಸೆಟ್ಟೇರಿತು 'ಶಕುಂತಲಾ ದೇವಿ-ಹ್ಯೂಮನ್​ ಕಂಪ್ಯೂಟರ್​​'

author img

By

Published : Sep 30, 2019, 8:04 PM IST

ಶಕುಂತಲಾ ದೇವಿ-ಹ್ಯೂಮನ್​ ಕಂಪ್ಯೂಟರ್ ಸಿನಿಮಾ ಶೂಟಿಂಗ್​ ಸೆಟ್ಟೇರಿದ್ದು, ಸಿನಿಮಾದಲ್ಲಿ ವಿದ್ಯಾ ಬಾಲನ್​ ಮತ್ತು ಸನ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್​ನಲ್ಲಿ ಈ ಚಿತ್ರದ ಶೂಟಿಂಗ್​​​ ಪ್ರಾರಂಭವಾಗಿದ್ದು, ಈ ಬಗ್ಗೆ ಸನ್ಯ ಮಲ್ಹೋತ್ರ  ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲಂಡನ್​ನಲ್ಲಿ ಸೆಟ್ಟೇರಿತು 'ಶಕುಂತಲಾ ದೇವಿ-ಹ್ಯೂಮನ್​ ಕಂಪ್ಯೂಟರ್​​'

ಬಾಲಿವುಡ್​ನಲ್ಲಿ ಜೀವನಾಧಾರಿತ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಇದೀಗ ಇವುಗಳ ಸಾಲಿನಲ್ಲಿ ನಿಲ್ಲಲು ಶಕುಂತಲಾ ದೇವಿ-ಹ್ಯೂಮನ್​ ಕಂಪ್ಯೂಟರ್​ ಚಿತ್ರ ಕೂಡ ಸಿದ್ದವಾಗುತ್ತಿದೆ.

ಈ ಸಿನಿಮಾ ಶೂಟಿಂಗ್​ ಸೆಟ್ಟೇರಿದ್ದು, ಸಿನಿಮಾದಲ್ಲಿ ವಿದ್ಯಾ ಬಾಲನ್​ ಮತ್ತು ಸನ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್​ನಲ್ಲಿ ಶೂಟಿಂಗ್​​​ ಪ್ರಾರಂಭವಾಗಿದ್ದು, ಈ ಬಗ್ಗೆ ಸನ್ಯ ಮಲ್ಹೋತ್ರ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್​ ಮಾಡುತ್ತಿರುವುದರಿಂದ ಫುಲ್​ ಎಕ್ಸೈಟೆಡ್​ ಆಗಿದ್ದೇನೆ. ಈ ಜರ್ನಿ ನನಗೆ ಕುತೂಹಲ ಮೂಡಿಸುತ್ತಿದೆ ಎಂದು ಬರೆದುಕೊಂಡಿದ್ದು, ಇದನ್ನು ವಿದ್ಯಾ ಬಾಲನ್​ ಮತ್ತು ನಿರ್ದೇಶಕ ಅನುಜ್​ ಮೆನನ್​ಗೆ ಟ್ಯಾಗ್​ ಮಾಡಿದ್ದಾರೆ.

creadit : ANI
ಚಿತ್ರ ಕೃಪೆ : ಎಎನ್​​ಐ

ಈ ಸಿನಿಮಾದಲ್ಲಿ ನಟಿಸುತ್ತಿರುವ ಮತ್ತೊಬ್ಬ ನಟಿ ವಿದ್ಯಾ ಬಾಲನ್​ ಇದೇ ತಿಂಗಳಲ್ಲಿ ಶಕುಂತಲಾ ದೇವಿ ಸಿನಿಮಾದ ಟೀಸರ್‌ನ ಶೇರ್​ ಮಾಡಿದ್ದರು. ಈ ಟೀಸರ್‌ನಿಂದ ಅಭಿಮಾನಿಗಳಲ್ಲಿ ಕುತೂಹಲ ಜಾಸ್ತಿಯಾಗಿತ್ತು.

ಶಕುಂತಲಾ ದೇವಿಯವರ ನಿಜ ಜೀವನದ ಕಥೆಯನ್ನ ಚಿತ್ರ ಹೊಂದಿದೆ. ಶಕುಂತಲಾದೇವಿ ತಮ್ಮ 18 ನೇ ವಯಸ್ಸಿಗೆ ಯಾವುದೇ ಕ್ಯಾಲ್ಕುಲೇಟರ್​​ ಮತ್ತು ಸೂತ್ರಗಳಿಲ್ಲದೆ ನಿರಾಯಾಸವಾಗಿ ಗಣಿತದ ಲೆಕ್ಕವನ್ನು ಬಿಡಿಸುತ್ತಿದ್ದರು. ಈ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ಹೆಣೆಯಲಾಗಿದೆ.

ಈ ಸಿನಿಮಾವನ್ನು ಸೋನಿ ಪಿಕ್ಚರ್​ ನೆಟ್​​ವರ್ಕ್​​​​ ಪ್ರೊಡಕ್ಷನ್​​​ ಮತ್ತು ವಿಕ್ರಮ್​ ಮಲ್ಹೊತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣ ಸಿಗುವ ಸನ್ಯ ಈ ಹಿಂದೆ "ಬಧೀ ಹೋ" ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

Intro:Body:

girish

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.