ETV Bharat / sitara

ನನ್ನ ಮಗನನ್ನು ಹೀರೋ ಮಾಡುವ ಕೆಲಸ ನಿಮ್ಮದು : ವಿ.ರವಿಚಂದ್ರನ್​​ - ವಿ.ರವಿಚಂದ್ರನ್​​

ಬಣ್ಣದ ಲೋಕದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್, ತ್ರಿವಿಕ್ರಮ ಚಿತ್ರದ ಮೂಲಕ ಹೀರೋ ಆಗಿ ಲಾಂಚ್​ ಆಗುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್​ ಹಾಗೂ 2 ಟೀಸರ್ ಲಾಂಚ್ ಆಗಿವೆ.

trivkram movie teaser
author img

By

Published : Aug 12, 2019, 1:11 PM IST

ಬೆಂಗಳೂರು ನಗರದ ಜಿಟಿ ವರ್ಲ್ಡ್ ಮಾಲ್​​​ಲ್ಲಿ ನಡೆದ ತ್ರಿವಿಕ್ರಮ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬದ ಮತ್ತೊಂದು ಕುಡಿ ವಿಕ್ರಮ್​​ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಡುತ್ತಿರುವ ಹಿನ್ನೆಲೆ ಶುಭ ಹಾರೈಸಿದರು. ರವಿಚಂದ್ರನ್ ಅವರ ಮಡದಿ ಟೀಸರ್​​ ಲಾಂಚ್ ಮಾಡಿ ಮಗನ ಮೊದಲ ಚಿತ್ರಕ್ಕೆ ವಿಶ್ ಮಾಡಿದ್ರು.

ಈ ವೇಳೆ ಮಾತಾಡಿದ ವಿ.ರವಿಚಂದ್ರನ್​​, ಇವನು ರವಿಚಂದ್ರನ್ ನನ್ನ ಮಗಾ ಅಂತಾ ಯೋಚನೆ ಮಾಡಬೇಡಿ. ನೀವು ಒಬ್ಬ ಹೀರೋನನ್ನು ತಯಾರು ಮಾಡಬೇಕು. ಚಿತ್ರರಂಗಕ್ಕೆ ಯಾರೇ ಹೊಸಬರು ಬಂದರೂ ಅವರು ತೆರೆಯ ಮೇಲೆ ಕಾಮನ್ ಮ್ಯಾನ್ ಆಗಿರಬೇಕು. ಸಿನಿಮಾ ಗೆದ್ದ ಮೇಲಷ್ಟೆ ಹೀರೋ ಆಗಬೇಕು. ಅವನನ್ನು ಹೀರೋ ಮಾಡುವುದು ನಿಮ್ಮ ಕೆಲಸ ಎಂದು ನಿರ್ದೇಶಕ ಸಹನಾ ಮೂರ್ತಿ ಅವರಿಗೆ ಕಿವಿ ಮಾತು ಹೇಳಿದರು.

ತ್ರಿವಿಕ್ರಮ ಚಿತ್ರದ ಟೀಸರ್​ ಅನಾವರಣ ಕಾರ್ಯಕ್ರಮ

ಇನ್ನು ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಒಂದು ಅದ್ಭುತ ರೋಮ್ಯಾಂಟಿಕ್ ಟ್ಯೂನ್ ಟೀಸರ್​​ನಲ್ಲಿ ಸಿನಿ ಪ್ರಿಯರನ್ನು ಹಿಡಿದಿಡುವ ಮುನ್ಸೂಚನೆ ನೀಡಿದೆ. ಈಗಾಗಲೇ ತ್ರಿವಿಕ್ರಮ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಸಹನಾಮೂರ್ತಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೋಮಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸುಮಾರು 60 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

Intro:ಪ್ರೇಮಲೋಕದ ಜನಕ ಬಣ್ಣದ ಲೋಕದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡೆಕೆ ರೆಡಿಯಾಗಿದ್ದಾರೆ‌. ಅಲ್ಲದೆ ನಿನ್ನೆ ತ್ರಿವಿಕ್ರಮ ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಇನ್ನು ಇಂದು ತ್ರಿವಿಕ್ರಮ ಚಿತ್ರತಂಡ ಚಿತ್ರದ ಒಂದು ಮೋಸಂ ಪೋಸ್ಟರ್ ಹಾಗೂ 2 ಟೀಸರ್ ಗಳನ್ನು ಲಾಂಚ್ ಮಾಡಿದರು.

Body:ನಗರದ ಜಿಟಿ ವರ್ಲ್ಡ್ ಮಾಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬ ಆಗಮಿಸಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿರುವ ಮುದ್ದಿನ ಮಗನಿಗೆ ಕ್ರೇಜಿಸ್ಟಾರ್ ದಂಪತಿ ಶುಭಹಾರೈಸಿದರು. ಅಲ್ಲದೆ ಚಿತ್ರದ ಟೀಸರ್ ಅನ್ನು ರವಿಚಂದ್ರನ್ ಅವರ ಮಡದಿ ಲಾಂಚ್ ಮಾಡಿ ಮಗನ ಮೊದಲ ಚಿತ್ರಕ್ಕೆ ವಿಶ್ ಮಾಡಿದ್ರು. ಇನ್ನು ಚಿತ್ರತಂಡ ಒಂದು ರೊಮ್ಯಾಂಟಿಕ್ ಹಾಗೂ ಆಕ್ಷನ್ 2 ಟೀಸರ್ ಗಳನ್ನು ಲಾಂಚ್ ಮಾಡಿದ್ದು 2 ಟೀಸರ್ ಗಳು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿವೆ.

Conclusion:ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಅದ್ಭುತ ರೋಮ್ಯಾಂಟಿಕ್ ಟ್ಯೂನ್ ಟೀಸರ್ ನಲ್ಲಿ ಸಿನಿ ಪ್ರಿಯರನ್ನು ಹಿಡಿದಿಡುವ ಮುನ್ಸೂಚನೆ ನೀಡಿದೆ. ನಿನ್ನೆ ಇದ್ದಲ್ಲಿ ತ್ರಿವಿಕ್ರಮ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಿದ್ದು ಚಿತ್ರಕ್ಕೆ ಸಹನಾಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದು, ಸೋಮಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸುಮಾರು 60 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.