ಮೂವರು ಅಕ್ಕ-ತಂಗಿಯರ ಚೊಚ್ಚಲ ಸಿನಿಮಾ 'ಯಾನ' ನಾಳೆ ಬಿಡುಗಡೆಯಾಗುತ್ತಿದೆ. ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈ ಜಗದೀಶ್ ಅವರ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಹಾಗೂ ವೈಸಿರಿ ಈ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ.
ವಿಜಯಲಕ್ಷ್ಮಿ ಸಿಂಗ್ 'ಯಾನ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಆರಂಭದಲ್ಲೇ ವಿಭಿನ್ನ ರೀತಿಯ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದ ಸಿನಿಮಾ ಮೂವರು ಯುವತಿಯರ ಲೈಫ್ ಕಹಾನಿಯನ್ನು ಒಳಗೊಂಡಿದೆ. ಐ ಎಂಟರ್ಟೈನ್ಮೆಂಟ್, ಎಸಿಎಂಇ ಮೂವೀಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಬ್ಯಾನರ್ ಅಡಿ ವಿಜಯಲಕ್ಷ್ಮಿ ಸಿಂಗ್, ಹರೀಶ್ ಶೆರಿಗರ್, ಶರ್ಮಿಳಾ ಶೆರಿಗರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕರ್ಮ್ ಚಾವ್ಲಾ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸಿಂಪಲ್ ಸುನಿ ಹಾಗೂ ಬಿ.ಎ.ಮಧು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
![yaana](https://etvbharatimages.akamaized.net/etvbharat/prod-images/kn-bng-03-beautifulgirlsinyanamovie_11072019170247_1107f_1562844767_507.jpg)
ಬೆಂಗಳೂರಿನ ಸುತ್ತಮುತ್ತ, ಗೋವಾ ಹಾಗೂ ಕರ್ನಾಟಕದ ಸುಪ್ರಸಿದ್ಧ ತಾಣಗಳಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಅನಂತ್ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು, ಸುಮುಖ್, ಚಕ್ರವರ್ತಿ, ಅಭಿಷೇಕ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.