ETV Bharat / sitara

ಆ ಡೈಲಾಗ್​​ನಂತೆ ಚಿರು ಜೀವನ ಅರ್ಧಕ್ಕೆ ಮುಗಿಯಿತು..ಮರುಕ ಪಟ್ಟ ದಳಪತಿ ವಿಜಯ್

author img

By

Published : Jun 11, 2020, 1:38 PM IST

Updated : Jun 11, 2020, 4:11 PM IST

ಭಾನುವಾರ ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಅವರನ್ನು ನೆನೆದು ತಮಿಳು ನಟ ದಳಪತಿ ವಿಜಯ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಸಿನಿಮಾದ 'ಲೈಫ್ ಇಸ್ ವೆರಿ ಶಾರ್ಟ್​ ನಿಂಬಾ' ಎಂಬ ಡೈಲಾಗ್​ನಂತೆ ಚಿರು ಜೀವನ ಕೂಡಾ ಅರ್ಧಕ್ಕೆ ಮುಗಿಯಿತಲ್ಲಾ ಎಂದು ವಿಜಯ್ ಕಂಬನಿ ಮಿಡಿದಿದ್ದಾರೆ.

Thalapathi Vijay sad for Chiranjeevi sarja death
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ

ಯುವ ಸಾಮ್ರಾಟ್ ನಮ್ಮನ್ನು ಅಗಲಿ ಇಂದಿಗೆ 5ನೇ ದಿನ. ಇನ್ನು ಚಿರಂಜೀವಿ ಸರ್ಜಾ ಅವರ ವಯಸ್ಸು 39 ಎಂದು ತಪ್ಪು ತಿಳಿಯಲಾಗಿತ್ತು. ಆದರೆ ಅವರು 1985 ರಲ್ಲಿ ಜನಿಸಿದ್ದು ಅವರ ವಯಸ್ಸು 35 ಎಂದು ಸ್ನೇಹಿತ ಪನ್ನಗಾಭರಣ ಅವರು ಸ್ಪಷ್ಟನೆ ನೀಡಿದ್ದಾರೆ.

  • " class="align-text-top noRightClick twitterSection" data="">

ಚಿರಂಜೀವಿ ಸರ್ಜಾ ಅವರು ನಿಧನರಾದ ವಿಚಾರ ಇತರ ಭಾಷೆಗಳ ನ್ಯೂಸ್ ಚಾನಲ್​​​​ಗಳಲ್ಲೂ ಪ್ರಸಾರವಾಗಿತ್ತು. ಚಿರು ಅಗಲಿಕೆಗೆ ತಮಿಳು, ತೆಲುಗು ನಟರು ಕೂಡಾ ಬೇಸರ ವ್ಯಕ್ತಪಡಿಸಿದ್ದರು. ತಮಿಳು ನಟ ತಳಪತಿ ವಿಜಯ್ ಕೂಡಾ ಚಿರು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದರು. ಚಿರಂಜೀವಿ ಸರ್ಜಾ ಟಿಕ್​​​​ಟಾಕ್​​ನಲ್ಲಿ ಕೂಡಾ ಆ್ಯಕ್ಟಿವ್​​​​​​​​​​​ ಇದ್ದು ವಿಜಯ್ ಅವರ 'ಮಾಸ್ಟರ್' ಸಿನಿಮಾದ ಡೈಲಾಗ್​​​​ಗೆ ಟಿಕ್​​ಟಾಕ್ ಮಾಡಿದ್ದರು.

Sandalwood actor Chiranjeevi sarja
'ಮಾಸ್ಟರ್' ಚಿತ್ರದಲ್ಲಿ ವಿಜಯ್

ಚಿರಂಜೀವಿ ಸರ್ಜಾ ಅವರು ತಮಿಳು ಸಿನಿಮಾಗಳನ್ನು ಕೂಡಾ ನೋಡುತ್ತಿದ್ದರು. ಅವರಿಗೆ ವಿಜಯ್ ಎಂದರೆ ಬಹಳ ಇಷ್ಟ. 'ಮಾಸ್ಟರ್' ಚಿತ್ರದ ಕುಟ್ಟಿ ಸ್ಟೋರಿ ಎಂಬ ಹಾಡಿನಲ್ಲಿ ಬರುವ 'ಲೈಫ್ ಇಸ್ ವೆರಿ ಶಾರ್ಟ್​ ನಿಂಬಾ' ಎಂಬ ಡೈಲಾಗ್​​​​ಗೆ ಕೂಡಾ ಚಿರು ಟಿಕ್​​​ಟಾಕ್ ಮಾಡಿದ್ದರು. ಚಿರು ನಿಧನರಾಗುತ್ತಿದ್ದಂತೆ ಈ ಟಿಕ್​​​ಟಾಕ್ ವೈರಲ್ ಆಗಿದೆ. ಈ ಟಿಕ್​​​​​​​​ಟಾಕ್ ನೋಡಿ ಬೇಸರ ವ್ಯಕ್ತಪಡಿಸಿರುವ ವಿಜಯ್,​​​​​​​ ಈ ಡೈಲಾಗ್​​ನಂತೆ ಚಿರಂಜೀವಿ ಸರ್ಜಾ ಜೀವನ ಕೂಡಾ ಆಯ್ತಲ್ಲಾ ಎಂದು ಮರುಕಪಟ್ಟಿದ್ದಾರೆ.

Sandalwood actor Chiranjeevi sarja
ಚಿರಂಜೀವಿ ಸರ್ಜಾ

Last Updated : Jun 11, 2020, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.