ETV Bharat / sitara

ದೊಡ್ಡ ಮಗನ‌ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್​​! - ಜಾಕ್​ ಮಂಜು

ಕನಸುಗಾರ ರವಿಚಂದ್ರನ್​ ಅವರನ್ನು ಕಿಚ್ಚ ಸುದೀಪ್​ ಭೇಟಿ ಮಾಡಿದ್ದು, ವಿಕ್ರಾಂತ್​ ರೋಣ ಸಿನಿಮಾದ ಪ್ರೀಮಿಯರ್​ಗೆ ಆಹ್ವಾನಿಸಿದ್ದಾರೆ.

Etv - Bharat.html
ಸುದೀಪ್-ರವಿಚಂದ್ರನ್
author img

By

Published : Sep 17, 2021, 2:28 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್​, ರವಿಮಾಮ ಅಂತಾನೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ನಟ ರವಿಚಂದ್ರನ್. ಸದ್ಯ ದೃಶ್ಯಂ-2, ರವಿ ಬೋಪಣ್ಣ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಅವರು ತಮ್ಮ ದೊಡ್ಡ ಮಗನನ್ನು ಭೇಟಿಯಾಗಿದ್ದಾರೆ. ಅರೇ, ಅವರ ದೊಡ್ಡ ಮಗ ಮನೋರಂಜನ್ ಮನೆಯಲ್ಲೇ ಇರುತ್ತಾರೆ. ಮತ್ಯಾರನ್ನು ಭೇಟಿ ಮಾಡ್ತಾರೆ ಅನ್ನಿಸ್ತಿದ್ಯಾ. ಹೌದು, ಮಗನಷ್ಟೇ ಪ್ರೀತಿ ತೋರುವ ಕಿಚ್ಚ ಸುದೀಪ್ ಅವ​ರನ್ನು ರವಿಚಂದ್ರನ್ ಭೇಟಿ ಮಾಡಿದ್ದಾರೆ. ಈ ಮಾತನ್ನು ರವಿಚಂದ್ರನ್ ಕೂಡ ಒಪ್ಪಿಕೊಂಡಿದ್ದಾರೆ.

ರವಿಚಂದ್ರನ್ ಜತೆ ಕಿಚ್ಚ ಸುದೀಪ್​ ಸೆಲ್ಫಿ
ರವಿಚಂದ್ರನ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್

ಸುದೀಪ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದ್ದ ವೇಳೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಬಳಿಕ ರವಿಚಂದ್ರನ್ ಹಾಗೂ ಸುದೀಪ್​ ಮುಖಾಮುಖಿ ಭೇಟಿಯಾಗಿರಲಿಲ್ಲ. ಬಹಳ ದಿನಗಳ ಬಳಿಕ ರಾಜಾಜಿ ನಗರದಲ್ಲಿರುವ ರವಿಚಂದ್ರನ್ ನಿವಾಸಕ್ಕೆ ಕಿಚ್ಚ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.

ರವಿಚಂದ್ರನ್ ಜತೆ ಕಿಚ್ಚ ಸುದೀಪ್​ ಸೆಲ್ಫಿ
ರವಿಚಂದ್ರನ್-ಸುದೀಪ್

ವಿಕ್ರಾಂತ್​ ರೋಣ ಸಿನಿಮಾದ ಪ್ರೀಮಿಯರ್​ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ರವಿಚಂದ್ರನ್​ ಅವರನ್ನು ಆಹ್ವಾನಿಸಲು ಸುದೀಪ್​​, ರವಿಚಂದ್ರನ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ​​

ಈ ಸಂದರ್ಭದಲ್ಲಿ ನಿರ್ಮಾಪಕ ಜಾಕ್ ಮಂಜು, ಕಿಚ್ಚನಿಗೆ ಸಾಥ್ ನೀಡಿದ್ದಾರೆ. ರವಿಚಂದ್ರನ್ ​- ಸುದೀಪ್ ಭೇಟಿಯಾಗಿರುವ ಫೋಟೋವನ್ನು ಕ್ರೇಜಿಸ್ಟಾರ್​ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಬಹಳ ದಿನಗಳ ನಂತರ ನನ್ನ ದೊಡ್ಡಮಗನೊಂದಿಗೆ, ನಿನಗೆ ಸಾಕಷ್ಟು ಪ್ರೀತಿ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ನಿರ್ದೇಶನ ಮಾಡಿರುವ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ತಂದೆಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು. ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಸುದೀಪ್- ರವಿಚಂದ್ರನ್ ಜೋಡಿಯನ್ನು ಅಪ್ಪ ಮಗನಾಗಿ ಕರುನಾಡ ಜನತೆ ಒಪ್ಪಿಕೊಂಡಿದ್ದರು. ಈ ‌ಬಾಂಧವ್ಯ ಇವತ್ತಿಗೂ ಹಾಗೇ ಮುಂದುವರೆದಿದೆ.

ಸದ್ಯ ಸುದೀಪ್ ನಟನೆಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ವಿಕ್ರಾಂತ್ ರೋಣ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಪೋಸ್ಟರ್ ಹಾಗೂ ಟೀಸರ್​​ಗಳಿಂದಲೇ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾ‌ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 14 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.