ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು, ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್ಗೆ ಬರುವ ಟ್ರೆಂಡ್ ಹೆಚ್ಚಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಭಜರಂಗಿ 2 ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗಲಿದ್ದು, ಥಿಯೆಟರ್ನಲ್ಲಿ ನೋಡಲು ಮಿಸ್ ಮಾಡ್ಕೊಂಡಿದ್ದವರು ಈಗ ಕುಟುಂಬದ ಜೊತೆ ಮನೆಯಲ್ಲಿಯೇ ಕುಳಿತು ನೋಡಬಹುದು.
ಹೌದು, ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿದ್ದ ಶಿವಣ್ಣನ ಭಜರಂಗಿಗೆ ಫ್ಯಾನ್ಸ್ ಜೈಕಾರ ಹಾಕಿದ್ದರು. ಶಿವಣ್ಣನ ನಟನೆ, ಹರ್ಷ ಡೈರೆಕ್ಷನ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗೇ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿತ್ತು. ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನ ಪೂರೈಸಿದ ಭಜರಂಗಿ 2 ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.
ಟೀಸರ್, ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಭಜರಂಗಿ 2, ಅಕ್ಟೋಬರ್ 29ರಂದು ತೆರೆಗಪ್ಪಳಿಸಿತ್ತು. ರಾಜ್ಯಾದ್ಯಂತ ರೇ ರೇ ಭಜರಂಗಿ ಎಂಬ ಘೋಷಣೆಗಳು ಮೊಳಗಿದ್ದವು. ಬಹಳ ದಿನಗಳ ನಂತರ ಶಿವಣ್ಣನನ್ನು ತೆರೆ ಮೇಲೆ ನೋಡಿದ ಭಕ್ತಗಣ ಖುಷಿಪಟ್ಟಿತ್ತು. ಹೊಸ ಕಥೆ, ಒಳ್ಳೆ ಸಂದೇಶ ಹೊತ್ತು ತಂದಿದ್ದ ಭಜರಂಗಿ-2 ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು.
ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದಲ್ಲಿ ಭಜರಂಗಿ-2 ಅದ್ಧೂರಿಯಾಗಿ ಮೂಡಿ ಬಂದಿತ್ತು. ಸದ್ಯ ಕೊರೊನಾ ಬೀತಿ, ಅದು ಇದು ಅಂತ ಥಿಯೇಟರ್ನಲ್ಲಿ ಭಜರಂಗಿ ನೋಡಲು ಮಿಸ್ ಮಾಡಿಕೊಂಡಿದ್ದವರು ಇದೇ ತಿಂಗಳ 23ರಂದು ಜೀ5 ಒಟಿಟಿಯಲ್ಲಿ (Zee OTT ) ಪ್ಲಾಟ್ ಫಾರಂನಲ್ಲಿ ವೀಕ್ಷಿಸಬಹುದು.