ಹೊಂಬಾಳೆ ಫಿಲಂಸ್ ಮತ್ತೊಂದು ದೇಶವ್ಯಾಪಿ ಸಿನಿಮಾಕ್ಕೆ ಕೈ ಹಾಕಿದೆ. ಈ ಚಿತ್ರದ ಬಗ್ಗೆ ಇಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ಮಾಹಿತಿ ನೀಡಿದ್ದು, ಹೊಸ ಸಿನಿಮಾಕ್ಕೆ 'ಸಲಾರ್' ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ಕೆಜಿಎಫ್ ಮತ್ತು ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್, ಕಟ್ ಹೇಳುತ್ತಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ.
ಈ ಹಿಂದೆ ತೆಲುಗಿನ ಖ್ಯಾತ ನಟರಿಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆ ಎಲ್ಲಾ ಗಾಳಿಸುದ್ದಿಗಳಿಗೆ ಇಂದು ತೆರೆ ಬಿದ್ದಿದ್ದು, ಪ್ರಭಾಸ್ ಅಭಿನಯದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿರಲಿದೆ. ಸಿನಿಮಾಕ್ಕೆ ವಿಜಯ ಕಿರಗಂದೂರು ಬಂಡವಾಳ ಹಾಕುತ್ತಿದ್ದಾರೆ.
ಈಗಾಗಲೇ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಸಲಾರ್ ಚಿತ್ರವು ಉಗ್ರಂ ರಿಮೇಕ್ ಎನ್ನಲಾಗುತ್ತಿದೆ. ಉಗ್ರಂ ಸಿನಿಮಾದ ಕಥಾ ಹಂದರವನ್ನು ಇಟ್ಟುಕೊಂಡು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ಪ್ರಶಾಂತ್ ಹೊರಟಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಇಬ್ಬರೂ ಹೈದರಾಬಾದ್‍ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರಂತೆ. ಈ ವಿಷಯ ಅದು ಹೇಗೋ ಸೋರಿಕೆ ಆಗಿದೆ. ಅವರಿಬ್ಬರೂ ಜೊತೆಯಾಗಿ ಕೆಲಸ ಮಾಡುವುದಕ್ಕೆ ಸಜ್ಜಾಗಿರುವುದಷ್ಟೇ ಅಲ್ಲ, ಆ ಚಿತ್ರವನ್ನೇ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ ಎಂಬ ವಿಷಯ ಈ ಹಿಂದೆಯೇ ಕೇಳಿಬಂದಿತ್ತು.
-
#Prabhas in #SALAAR
— Hombale Films (@hombalefilms) December 2, 2020 " class="align-text-top noRightClick twitterSection" data="
THE MOST VIOLENT MEN.. CALLED ONE MAN.. THE MOST VIOLENT!!
Revealing our next Indian Film, an Action Saga.@VKiragandur @prashanth_neel pic.twitter.com/RqaIPwSUiB
">#Prabhas in #SALAAR
— Hombale Films (@hombalefilms) December 2, 2020
THE MOST VIOLENT MEN.. CALLED ONE MAN.. THE MOST VIOLENT!!
Revealing our next Indian Film, an Action Saga.@VKiragandur @prashanth_neel pic.twitter.com/RqaIPwSUiB#Prabhas in #SALAAR
— Hombale Films (@hombalefilms) December 2, 2020
THE MOST VIOLENT MEN.. CALLED ONE MAN.. THE MOST VIOLENT!!
Revealing our next Indian Film, an Action Saga.@VKiragandur @prashanth_neel pic.twitter.com/RqaIPwSUiB