ETV Bharat / sitara

ಬಾಕ್ಸ್‌ ಆಫೀಸ್​ ಕೊಳ್ಳೆ ಹೊಡೆದು ಬೆಳ್ಳಿತೆರೆ ಮೇಲೆ ಮಿಂಚಿದ ನೈಜ ಕಥೆಯಾಧಾರಿತ ಸಿನಿಮಾಗಳಿವು..

ಪ್ರೇಕ್ಷಕರ ಅಭಿರುಚಿಯಲ್ಲಿನ ಬದಲಾವಣೆಗಳನ್ನು ಗಮನಿಸಿ ಚಲನಚಿತ್ರ ಬರಹಗಾರರು ಮತ್ತು ನಿರ್ದೇಶಕರು ಸಿನಿಮಾ ಮಾಡಲು ಮುಂದಾಗುತ್ತಾರೆ. ಇದೀಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಹಲವು ನೈಜ ಘಟನೆಯಾಧಾರಿತ ಚಿತ್ರಗಳ ಮಾಹಿತಿ ಇಲ್ಲಿದೆ ನೋಡಿ.

ನೈಜ ಕಥೆಯಾಧಾರಿತ ಸಿನಿಮಾಗಳಿವು
ನೈಜ ಕಥೆಯಾಧಾರಿತ ಸಿನಿಮಾಗಳಿವು
author img

By

Published : Mar 20, 2022, 11:50 AM IST

ಕಾಲದಿಂದ ಕಾಲಕ್ಕೆ ಜನರ ಆಸೆ, ಅಭಿರುಚಿ ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ ಪ್ರೇಕ್ಷಕರು ಕೃತಕ ಕಥೆಗಳು ಮತ್ತು ತರ್ಕಕ್ಕೆ ಸುಂದರವಾದ ಕಥೆಗಳನ್ನು ನೋಡುವುದಕ್ಕಿಂತ ವಾಸ್ತವದಲ್ಲಿರುವ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ.

ಪ್ರೇಕ್ಷಕರ ಅಭಿರುಚಿಯಲ್ಲಿನ ಬದಲಾವಣೆಗಳನ್ನು ಗಮನಿಸಿದ ಚಲನಚಿತ್ರ ಬರಹಗಾರರು ಮತ್ತು ನಿರ್ದೇಶಕರು ಅಂತಹ ಕಥೆಗಳಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಇದೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಹಲವು ನೈಜ ಘಟನೆ ದೃಶ್ಯ ಕಾವ್ಯಗಳಾಗಿ ಬೆಳ್ಳಿತೆರೆಗೆ ಬರುತ್ತಿವೆ.

ದೇಶಾದ್ಯಂತ ಸಂಚಲನ ಮೂಡಿಸಿರುವ ನೈಜ ಘಟನೆಯಾಧಾರಿತ ಹಲವು ಚಿತ್ರಗಳು ಈಗಾಗಲೇ ಬೆಳ್ಳಿತೆರೆಗೆ ಅಪ್ಪಳಿಸಿವೆ. 90ರ ದಶಕದಲ್ಲಿ ನಿರ್ದೇಶಕ ಮಣಿರತ್ನಂ ಅವರಿಂದ ಬಂದ 'ರೋಜಾ' ಮತ್ತು 'ಬಾಂಬೆ' ಸಿನಿಮಾ ಕಥೆ ಹೆಚ್ಚು ಸ್ಫೂರ್ತಿ ಪಡೆದಿವೆ.

ಮಣಿರತ್ನಂ ಅವರು 'ರೋಜಾ' ಸಿನಿಮಾದಲ್ಲಿ ಕಾಶ್ಮೀರ ಭಯೋತ್ಪಾದನಾ ಸಮಸ್ಯೆಯನ್ನು ಪ್ರೇಮಕಥೆಯ ದೃಷ್ಟಿಕೋನದ ಮೂಲಕ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಇದು ಆ ಸಮಯದಲ್ಲಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡ ಚಿತ್ರ.

1995ರಲ್ಲಿ ತೆರೆಕಂಡ ‘ಬಾಂಬೆ’ ದೇಶದೆಲ್ಲೆಡೆ ದೊಡ್ಡ ಸಂಚಲನ ಮೂಡಿಸಿತ್ತು. ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈನಲ್ಲಿ ನಡೆದ ಮತೀಯ ಕಲಹದ ಹಿನ್ನೆಲೆ ಆಧಾರಿತ ಚಿತ್ರವಾಗಿದೆ. ಆ ಸಮಯದಲ್ಲಿ ಈ ಚಿತ್ರದ ಬಗ್ಗೆ ಹಲವಾರು ರಾಜ್ಯಗಳಲ್ಲಿ ವಿವಾದಗಳು ಭುಗಿಲೆದ್ದವು. ಆದರೆ, ಇದೆಲ್ಲವನ್ನೂ ಮೀರಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಆದಾಯದ ಸುರಿಮಳೆಗರೆದಿತ್ತು.

'ಉರಿ : ದಿ ಸರ್ಜಿಕಲ್ ಸ್ಟ್ರೈಕ್' ಸೇನಾ ಹಿನ್ನೆಲೆಯುಳ್ಳ ಹಿಂದಿ ಸಾಹಸಪ್ರಧಾನ ಚಲನಚಿತ್ರವಾಗಿದೆ. ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು, ವಿಕ್ಕಿ ಕೌಶಲ್ ನಾಯಕನಾಗಿ ಮಿಂಚಿದ್ದಾರೆ. ಆದಿತ್ಯ ಧರ್ ನಿರ್ದೇಶಿಸಿದ್ದಾರೆ. 2016ರ ಉರಿ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರವು ಅರೆಸೈನಿಕ ಪಡೆಗಳೊಂದಿಗೆ ಪಾಕಿಸ್ತಾನದಲ್ಲಿ ಮೇಲೆ ಮಿಂಚಿನ ದಾಳಿ ನಡೆಸಿದ ಘಟನೆಯನ್ನ ಒಳಗೊಂಡಿದೆ.

'ಉರಿ' ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆದ ಚಿತ್ರ. ಜನವರಿ 11, 2019ರಂದು ಬಿಡುಗಡೆಯಾದ ಈ ಚಿತ್ರವು, ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಕಂಡಿತು. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಆ ಸಮಯದಲ್ಲಿ ಸುಮಾರು 342 ಕೋಟಿ ರೂ. ಗಳಿಸಿತ್ತು.

ಉರಿ: ದಿ ಸರ್ಜಿಕಲ್ ಸ್ಟ್ರೈಕ್
ಉರಿ : ದಿ ಸರ್ಜಿಕಲ್ ಸ್ಟ್ರೈಕ್

'ಸ್ಟೇಟ್ ಆಫ್ ಸೀಜ್' : ಇದು ಗುಜರಾತ್​ನ ದೇವಾಸ್ಥನಕ್ಕೆ ಉಗ್ರರು ನುಗ್ಗಿದ ಘಟನೆಯಾಧಾರಿತ ಚಿತ್ರ. ಈ ಸಿನಿಮಾವು ಭಾರತೀಯ ಸೇನೆ ನಡೆಸಿದ ನೈಜ ಕಾರ್ಯಾಚರಣೆಯನ್ನು ಆಧರಿಸಿದೆ. ಅಕ್ಷಯ್ ಖನ್ನಾ ಅಭಿನಯದ ಈ ಚಿತ್ರವನ್ನ ಕೆನ್ ಘೋಷ್ ನಿರ್ದೇಶಿಸಿದ್ದಾರೆ.

ಇದು 2002ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲಿನ ದಾಳಿಯ ದುಷ್ಕರ್ಮಿಗಳನ್ನು ಕೊನೆಗೊಳಿಸಲು NSG ಕಮಾಂಡೋಗಳು ನಡೆಸಿದ ವಿಶೇಷ ಕಾರ್ಯಾಚರಣೆಯ ಕಥೆಯನ್ನು ಆಧರಿಸಿದೆ. ಕಳೆದ ವರ್ಷ ಜುಲೈ 9ರಂದು ಜನಪ್ರಿಯ OTT ಪ್ಲಾಟ್‌ಫಾರ್ಮ್ 'G5'ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಸ್ಟೇಟ್ ಆಫ್ ಸೀಜ್
ಸ್ಟೇಟ್ ಆಫ್ ಸೀಜ್

'ದಿ ಕಾಶ್ಮೀರ್ ಫೈಲ್ಸ್' : ಸದ್ಯಕ್ಕೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ಸಿನಿಮಾ ಅಂದ್ರೆ 'ದಿ ಕಾಶ್ಮೀರ್ ಫೈಲ್ಸ್'. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಈ ಚಿತ್ರವು 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ಕ್ರೂರ ಹತ್ಯಾಕಾಂಡದ ಕುರಿತು ತಿಳಿಸುತ್ತದೆ. 1990ರಲ್ಲಿ ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲೆ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿಗಳು ದಾಳಿ ನಡೆಸಿದ್ದರು.

ಈ ವೇಳೆ ಸಾವಿರಾರು ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡಿ, ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಕಾಲದಲ್ಲಿ ಅನೇಕ ವಿದ್ವಾಂಸರು ಪ್ರಾಣ ಭಯದಿಂದ ಬೇರೆಡೆಗೆ ವಲಸೆ ಹೋದರು. 32 ವರ್ಷಗಳ ಹಿಂದಿನ ಈ ದುರಂತವನ್ನ ಭಾವನಾತ್ಮಕವಾಗಿ ಕಣ್ಣಿಗೆ ಕಟ್ಟುವಂತೆ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ನಲ್ಲಿ ತೋರಿಸಿದ್ದಾರೆ.

ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜನಪ್ರಿಯತೆ ಗಳಿಸುತ್ತಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಷ್ಟೇ ಅಲ್ಲ, ಸದ್ಯಕ್ಕೆ ರಾಜಕೀಯ ವಲಯದಲ್ಲಿ ಸಹ ಚರ್ಚೆಗೆ ಗ್ರಾಸವಾಗುತ್ತಿದೆ.

ದಿ ಕಾಶ್ಮೀರ್ ಫೈಲ್ಸ್
ದಿ ಕಾಶ್ಮೀರ್ ಫೈಲ್ಸ್

ನಿಜವಾದ ಸವಾಲು : ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಎಷ್ಟು ಸುಲಭವೋ ಅಷ್ಟೇ ದೊಡ್ಡ ಸವಾಲು ಕೂಡ ಹೌದು. ಹೆಚ್ಚಿನ ಜನರಿಗೆ ವಿಷಯಗಳು ತಿಳಿದಿರುವುದರಿಂದ ಹೋಲಿಕೆ ಮಾಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ರಾಜಕೀಯ, ಜಾತಿ, ಧರ್ಮಗಳಿಗೆ ಸಂಬಂಧಿಸಿದ ಕಥೆಗಳನ್ನು ಹೇಳುವಾಗ ನಿರ್ದೇಶಕರು ತುಂಬಾ ಜಾಗರೂಕರಾಗಿರಬೇಕು.

ಇಂತಹ ಕಥೆಗಳನ್ನ ತಿರುಚುವುದು ಅಪಾಯಕಾರಿ. ಕೆಲವೊಮ್ಮೆ ಅದನ್ನು ಹಾಗೆಯೇ ತೋರಿಸುವುದು ಕೂಡ ಕಷ್ಟ. ಯಾವುದೇ ವರ್ಗಕ್ಕೆ ನೋವಾಗದಂತೆ ವಿಷಯವನ್ನ ಮನದಟ್ಟು ಮಾಡುವುದು ಸವಾಲಿನ ಸಂಗತಿ.

ಇದನ್ನೂ ಓದಿ: ಮೆತ್ತಿದ ಬಣ್ಣದ ನಡುವೆ ಒಬ್ಬರಿಗೊಬ್ಬರು ಮುತ್ತಿನ ಸುರಿಮಳೆಗೈದ ಬಾಲಿವುಡ್​ ಜೋಡಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.