ತಮ್ಮ ಮಗಳ ಸಿನಿ ಎಂಟ್ರಿ ಬಗ್ಗೆ ಅಣ್ಣಾವ್ರ ಮಗಳು ಪೂರ್ಣಿಮಾ ರಾಮ್ಕುಮಾರ್ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತಾಡಿದ್ದಾರೆ. ಇಂದು ನಿನ್ನ ಸನಿಹಕೆ ಚಿತ್ರದ ಮುಹೂರ್ತ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನನ್ನ ಮಗಳು ಚಿತ್ರರಂಗಕ್ಕೆ ಬರುವುದು ನಂಗೆ ಮೊದಲಿನಿಂದಲೂ ಇಷ್ಟ ಇತ್ತು. ಅವಳು ಸಿನಿಮಾದಲ್ಲಿ ಆಕ್ಟ್ ಮಾಡ್ತೀನಿ ಎಂದು ಹೇಳಿದಾಗ ಕೂಡಲೇ ನಾನು ಒಪ್ಪಿಗೆ ಕೊಟ್ಟಿದ್ದೆ ಎಂದರು.
ಇದುವರೆಗೆ ನಮ್ಮ ಕುಟುಂಬದಿಂದ ಗಂಡು ಮಕ್ಕಳು ಮಾತ್ರ ಚಿತ್ರರಂಗಕ್ಕೆ ಬಂದಿದ್ರು. ಈಗ ನನ್ನ ಮಗಳು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದಾಗ ಅವಳಿಗೆ ಸಪೋರ್ಟ್ ಮಾಡಬೇಕು ಎನ್ನಿಸಿತು. ಅವಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸ್ವಲ್ಪ ಟೆನ್ಷನ್ ಜತೆಗೆ ತುಂಬಾ ಖುಷಿಯೂ ಆಗ್ತಿದೆ ಎಂದರು ಪೂರ್ಣಿಮಾ.
ಇನ್ನು ಚಿತ್ರದ ಶೂಟಿಂಗ್ ವೇಳೆ ಅವಳ ಜೊತೆ ಹೋಗುತ್ತೇನೆ. ಅವರ ತಂದೆ ಮೊದಲು ಸ್ವಲ್ಪ ಟೆನ್ಷನ್ ಆಗಿದ್ದರು. ಆನಂತರ ಮಗಳು ಅಭಿನಯಕ್ಕೆ ಕಾಲಿಡಲು ಒಪ್ಪಿಗೆ ಸೂಚಿಸಿದರು. ಅವರು ಸ್ವಲ್ಪ ಬ್ಯುಝಿ ಇದ್ದ ಕಾರಣಕ್ಕೆ ಇಂದು ಬಂದಿಲ್ಲ, ಮುಂದಿನ ದಿನಗಳಲ್ಲಿ ಚಿತ್ರದ ಶೂಟಿಂಗ್ ಸ್ಪಾಟ್ಗೆ ಬಂದು ಮಗಳಿಗೆ ಸಪೋರ್ಟ್ ಮಾಡ್ತಾರೆ ಎಂದು ಚಿತ್ರದ ಮುಹೂರ್ತಕ್ಕೆ ಗಂಡ ರಾಮ್ ಕುಮಾರ್ ಅನುಪಸ್ಥಿತಿ ಬಗ್ಗೆ ಸ್ಪಷ್ಟನೆ ಕೊಟ್ರು ಪೂರ್ಣಿಮಾ.