ಕನ್ನಡ ಚಿತ್ರರಂಗಕ್ಕೆ ಸ್ಟಾರ್ ಮಕ್ಕಳ ಗ್ರ್ಯಾಂಡ್ ಎಂಟ್ರಿ ಆಗ್ತಾನೆ ಇದೆ. ಈಗಾಗಲೇ ರವಿಚಂದ್ರನ್ ಪುತ್ರ ವಿಕ್ರಮ್ ನಾಯಕರಾಗಿ ನಟಿಸುತ್ತಿದ್ದು, ಆ ಚಿತ್ರಕ್ಕೆ ತ್ರಿವಿಕ್ರಮ್ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರ ಪೋಸ್ಟರ್ ಹಾಗೂ ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡ್ತಿದೆ. ಈಗ ಮಮ್ಮಿ ಪ್ಲೀಸ್ ಮಮ್ಮಿ ಎಂಬ ಹಾಡು ರಿಲೀಸ್ ಆಗಿದ್ದು, ದೊಡ್ಡಮಟ್ಟದ ಸದ್ದು ಮಾಡುತ್ತಿದೆ.
ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ತ್ರಿವಿಕ್ರಮ್ ಚಿತ್ರಕ್ಕೆ ನಾಯಕಿಯಾಗಿ ಅಕಾಂಕ್ಷ ಶರ್ಮಾ ನಟಿಸುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ನಟಿಸಿದ್ದಾರೆ.
![mummy please mummy kannada song in Threevikaram movie](https://etvbharatimages.akamaized.net/etvbharat/prod-images/kn-bng-05-threevikaram-cinemada-songge-response-video-7204735_17112020211214_1711f_1605627734_707.jpg)
ಮಮ್ಮಿ ಹಾಡಿನಲ್ಲಿ ಮಗನೊಬ್ಬ ತನ್ನ ಪ್ರೀತಿಯ ವಿಷಯವನ್ನು ವಿನೂತನವಾಗಿ ಹೇಳಿಕೊಂಡಿದ್ದಾನೆ. ಮಮ್ಮಿ ಪ್ಲೀಸ್ ಮಮ್ಮಿ ಎಂಬ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟರ್ಟೈನರ್ ಲಾಂಛನದಲ್ಲಿ ಸೋಮಣ್ಣ ನಿರ್ಮಾಣ ಮಾಡಿದ್ದಾರೆ.
ಇನ್ನು ತ್ರಿವಿಕ್ರಮ್ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಮುಗಿಸಿ ಮುಂದಿನ ವರ್ಷ ತೆರೆಗೆ ಬರುವ ಸಿದ್ಧತೆಯಲ್ಲಿದೆ.
- " class="align-text-top noRightClick twitterSection" data="">