ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಸಿನಿಮಾ ನಂತರ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೆ ಸೆಟ್ಟೇರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.
ರಾಬರ್ಟ್, ಟೈಟಲ್ ಅನೌನ್ಸ್ ಮಾಡಿದಾಗಿನಿಂದಲೇ ಸ್ಯಾಂಡಲ್ವುಡ್ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ದರ್ಶನ್ ಲುಕ್, ಸ್ಟಾರ್ಕಾಸ್ಟ್ ಬಗ್ಗೆ ಒಂದಿಂಚೂ ಗುಟ್ಟು ಬಿಟ್ಟು ಕೊಡದ ನಿರ್ದೇಶಕ ತರುಣ್ ಸುಧೀರ್, ಇದೀಗ ಮತ್ತೊಂದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಮೊಬೈಲ್ ಸಂಪೂರ್ಣವಾಗಿ ಬ್ಯಾನ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮೊಬೈಲ್ ಸಮೇತ ಶೂಟಿಂಗ್ ಸೆಟ್ಗೆ ಬರದಂತೆ ತಡೆಯೊಡ್ಡಿದ್ದಾರೆ.
ತರುಣ್, ಶೂಟಿಂಗ್ ಸೆಟ್ನ ಹೊರಭಾಗದಲ್ಲಿ 'Mobile phone not allowed inside the set' ಎಂದು ಸೂಚನಾ ಫಲಕ ತೂಗು ಹಾಕಿದ್ದಾರೆ. ಒಳಗೆ ಹೋಗುವ ಮುಂಚೆ ಮೊಬೈಲ್ಗಳನ್ನು ಕೌಂಟರ್ನಲ್ಲಿಟ್ಟು ಹೋಗಬೇಕೆನ್ನುವ ನಿಯಮ ಜಾರಿ ಮಾಡಿದ್ದಾರೆ. ತಮ್ಮ ಈ ನೂತನ ನಿಯಮದ ಬಗ್ಗೆ ಇಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಸ್ಯಾಂಡಲ್ವುಡ್ ಮಂದಿ ಕೂಡ ನಿರ್ದೇಶಕನ ಹೊಸ ರೂಲ್ಸ್ ಮೆಚ್ಚಿ ಜೈ ಎಂದಿದ್ದಾರೆ.
-
"Your level of success is determined by your level of discipline and preservence" - source #Roberrt #shooting #nomobiles pic.twitter.com/ZqlMvpkAVg
— Tharun Sudhir (@TharunSudhir) May 8, 2019 " class="align-text-top noRightClick twitterSection" data="
">"Your level of success is determined by your level of discipline and preservence" - source #Roberrt #shooting #nomobiles pic.twitter.com/ZqlMvpkAVg
— Tharun Sudhir (@TharunSudhir) May 8, 2019"Your level of success is determined by your level of discipline and preservence" - source #Roberrt #shooting #nomobiles pic.twitter.com/ZqlMvpkAVg
— Tharun Sudhir (@TharunSudhir) May 8, 2019
ಇನ್ನು ತರುಣ್ ಅವರ ಈ ಕ್ರಮದ ಹಿಂದಿರುವುದು ಒಂದೇ ಉದ್ದೇಶ. ಚಿತ್ರದ ಸೀನ್, ತಾರೆಯರ ಡಿಫ್ರೆಂಟ್ಗಳು ಲುಕ್ಗಳು ಲೀಕ್ ಆಗಬಾರದು ಎನ್ನುವುದು. ಬಿಡುಗಡೆಯ ಮುನ್ನವೇ ಚಿತ್ರದ ಎಕ್ಸ್ಕ್ಲ್ಯೂಸಿವ್ ಸೀನ್ಗಳು ಪ್ರೇಕ್ಷಕರ ಕೈಗೆ ಸಿಕ್ಕಬಿಟ್ರೆ ನಾವು ಮಾಡಿರುವ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಎನ್ನುವುದು ತರುಣ್ ಅವರ ಲೆಕ್ಕಾಚಾರ.