ಮುಂಬೈ : ಮುಂಬರುವ ಚಿತ್ರ 'ಲಕ್ಷ್ಮಿ ಬಾಂಬ್'ನಲ್ಲಿ ಅತ್ಯಂತ ಸವಾಲಿನ ತೃತೀಯ ಲಿಂಗಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇದರಿಂದ ಯಾವುದೇ ಸಮುದಾಯದ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮೂರು ದಶಕಗಳ ವೃತ್ತಿ ಜೀವನದ ಬಳಿಕವೂ ಅತ್ಯಂತ ಜಾಗರೂಕತೆಯಿಂದ ಪಾತ್ರಕ್ಕೆ ಜೀವ ತುಂಬಿದ್ದೇನೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
- " class="align-text-top noRightClick twitterSection" data="
">
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಇದು ಅತ್ಯಂತ ಮಾನಸಿಕವಾಗಿ ತೀವ್ರವಾದ ಮತ್ತು ತುಂಬಾ ಕಠಿಣವಾದ ಪಾತ್ರವಾಗಿದ್ದು. ಈ ಮೊದಲು ಈ ರೀತಿಯ ಅನುಭವ ಆಗಿಲ್ಲ. ಇದರ ಎಲ್ಲಾ ಕ್ರೆಡಿಟ್ ನಿರ್ದೇಶಕ ಲಾರೆನ್ಸ್ ಸರ್ ಅವರಿಗೆ ಸಲ್ಲುತ್ತದೆ. ಅವರು ನನ್ನನ್ನು ಹೊಸ ರೀತಿಯಲ್ಲಿ ಪರಿಚಯಿಸಿದರು ಎಂದು ಅಕ್ಕಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಲಕ್ಷ್ಮಿ ಬಾಂಬ್ಗಾಗಿ ಪ್ರತಿ ಶಾಟ್ಗಳನ್ನು ಹಲವು ಬಾರಿ ಪರಿಶೀಲಿಸಿ ಸ್ವ ಇಚ್ಚೆಯಿಂದ ರಿಟೇಕ್ ತೆಗೆದುಕೊಳ್ಳುತ್ತಿದ್ದೆ. ಇದುವರೆಗೆ 150 ಚಿತ್ರಗಳನ್ನು ಮಾಡಿದ್ದರೂ, ಈ ಚಿತ್ರದ ಶೂಟಿಂಗ್ ವೇಳೆ ನನ್ನ ಮಿತಿಗಳನ್ನು ದಾಟಿ ಹೆಚ್ಚು ಕಲಿಯಲು ನಾನು ಉತ್ಸುಕನಾಗಿದ್ದೆ. ಲಿಂಗ ಸಮಾನತೆಯ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಲು ಈ ಚಿತ್ರವು ನನಗೆ ಸಹಕಾರಿಯಾಯಿತು ಎಂದಿದ್ದಾರೆ.
ಲಕ್ಷ್ಮಿ ಬಾಂಬ್ 2011ರಲ್ಲಿ ಬಿಡುಗಡೆಯಾದ ಹಾರರ್- ಕಾಮಿಡಿ ತಮಿಳು ಚಿತ್ರ ಕಾಂಚನಾದ ರಿಮೇಕ್ ಆಗಿದ್ದು, ಮೂಲ ಚಿತ್ರ ನಿರ್ದೇಶನ ಮಾಡಿದ್ದ ರಾಘವ ಲಾರೆನ್ಸ್ ಇದನ್ನು ನಿರ್ದೇಶಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಥಿಯೇಟರ್ಗಳು ಮುಚ್ಚಿರುವುದರಿಂದ ಡಿಜಿಟಲ್ ವೇದಿಕೆಗಳಾದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಕ್ಷ್ಮಿ ಬಾಂಬ್ ಬಿಡುಗಡೆಯಾಗಲಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿರುವ ಅಕ್ಷಯ್ ಕುಮಾರ್ ನಟನೆಯ ಮೊದಲ ಚಿತ್ರ ಇದಾಗಿದೆ.