ಪ್ಯಾನ್ ಇಂಡಿಯಾ ಸಿನಿಮಾ ಕುರುಕ್ಷೇತ್ರದ ಮೊದಲ ಹಾಡು 'ಸಾಹೋರೆ ಸಾಹೋ' ಇಂದು ಹೊರಬಿದ್ದಿದೆ. ಇದು ಕೌರವಾಧಿಪತಿ, ಹಸ್ತಿನಾಪುರದ ಅಧಿಪತಿ ಸುಯೋಧನನ ಪರಿಚಯದ ಈ ಗೀತೆ. ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ವಿ.ಹರಿಕೃಷ್ಣ ಅವರ ಸಂಗೀತ ಜತೆಗೆ ವಿಜಯ್ ಪ್ರಕಾಶ್ ಅವರ ಕಂಚಿನ ಕಂಠದಲ್ಲಿ ಅದ್ಭುತವಾಗಿ ಈ ಹಾಡು ಮೂಡಿಬಂದಿದೆ.
- " class="align-text-top noRightClick twitterSection" data="">
ಇದೇ 7 ರಂದು ಕುರುಕ್ಷೇತ್ರದ ಧ್ವನಿ ಸುರುಳಿಕೆ ಅನಾವರಣಗೊಳ್ಳುತ್ತಿದೆ. ಎರಡು ವರ್ಷಗಳ ಅವಿರತ ಶ್ರಮದಲ್ಲಿ ಮೂಡಿಬಂದಿರುವ ಈ ಸಿನಿಮಾ ದಕ್ಷಿಣ ಭಾರತದಲ್ಲಿ ಬಹುನಿರೀಕ್ಷೆ ಮೂಡಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50 ನೇ ಚಿತ್ರವಾಗಿ ಸೆಟ್ಟೇರಿದ ಕುರುಕ್ಷೇತ್ರ, ಈಗ 51 ನೇ ಸಿನಿಮಾ ಆಗಿ ತೆರೆಗೆ ಬರುತ್ತಿದೆ.
ದಿವಂಗತ ನಟ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಗೌಡ, ಟಾಲಿವುಡ್ ನಟ ಸೋನು ಸೂದ್ ಸೇರಿದಂತೆ ಬಹುತಾರಾಗಣದ ಈ ಸಿನಿಮಾಗೆ ಮುನಿರತ್ನ ಹಣ ಹೂಡಿದ್ದಾರೆ. 2ಡಿ ಹಾಗೂ 3ಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮೊದಲ ಲಿರಿಕಲ್ ವಿಡಿಯೋವನ್ನು ಲಹರಿ ಆಡಿಯೋ ಸಂಸ್ಥೆ ಇಂದು ಬಿಡುಗಡೆಯಾಗಿದೆ.