ನಿನ್ನೆಯಷ್ಟೆ ರಿಲೀಸ್ ಆಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ'ಚಿತ್ರದ ಪೋಸ್ಟರ್ ಬಗ್ಗೆ ಗುಮಾನಿಯೊಂದು ಹರಿದಾಡುತ್ತಿದೆ. ಇದು ಹಿಂದಿಯ 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಚಿತ್ರದ ಪೋಸ್ಟರ್ ಹೋಲುವಂತಿದ್ದು,ಇದನ್ನೇ ಚಿತ್ರತಂಡ ಕಾಪಿ ಮಾಡಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಡುವೆ ರಕ್ಷಿತ್ ಶೆಟ್ಟಿಗೆ ವಿಶ್ ಮಾಡಿರುವ ತರುಣ್ ಸುಧೀರ್, 'ಫಟಾ ಪೋಸ್ಟರ್ ನಿಕ್ಲಾ ಹೀರೋ, ಲವ್ಲಿ ಪೋಸ್ಟರ್ ರಕ್ಷಿತ್ ಶೆಟ್ಟಿ. ಹುಟ್ಟುಹಬ್ಬದ ಶುಭಾಶಯಗಳು ಬ್ರೋ'. ಈ ವರ್ಷ ನಿಮಗೆ ಗ್ರ್ಯಾಂಡ್ ಸಕ್ಸಸ್ ಸಿಗಲಿ ಎಂದು ಹಾರೈಸಿದ್ದಾರೆ.
ಇವರ ಟ್ವಿಟ್ಲ್ಲಿರುವ 'ಫಟಾ ಪೋಸ್ಟರ್ ನಿಕ್ಲಾ ಹೀರೋ ' ಪದವನ್ನು ಉದ್ದೇಶಪೂರ್ವಕವಾಗಿ ಸೇರಿಸಿ, ರಕ್ಷಿತ್ ಶೆಟ್ಟಿಯನ್ನು ಕಿಚಾಯಿಸಿದ್ದಾರೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ. ಹಾಗೇ ನೋಡಿದ್ರೆ 2013 ರಲ್ಲಿ ತೆರೆಕಂಡಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಉಳಿದವರ ಕಂಡಂತೆ ಚಿತ್ರದಲ್ಲಿಯೇ ಈ ಡೈಲಾಗ್ ಇದೆ.
-
"Phata Poster Nikhla Hero"... lovely poster @rakshitshetty.. a very happy birthday bro.. may this year bring u a grand success...🤗🤗#HappyBirthdayRakshitShetty #AvaneSrimanNarayana pic.twitter.com/yAUIxznZsX
— Tharun Sudhir (@TharunSudhir) June 6, 2019 " class="align-text-top noRightClick twitterSection" data="
">"Phata Poster Nikhla Hero"... lovely poster @rakshitshetty.. a very happy birthday bro.. may this year bring u a grand success...🤗🤗#HappyBirthdayRakshitShetty #AvaneSrimanNarayana pic.twitter.com/yAUIxznZsX
— Tharun Sudhir (@TharunSudhir) June 6, 2019"Phata Poster Nikhla Hero"... lovely poster @rakshitshetty.. a very happy birthday bro.. may this year bring u a grand success...🤗🤗#HappyBirthdayRakshitShetty #AvaneSrimanNarayana pic.twitter.com/yAUIxznZsX
— Tharun Sudhir (@TharunSudhir) June 6, 2019
ಇದು ಒಂದೆಡೆಯಾದರೆ, ಸುದೀಪ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಬೇರೆಯಿದೆ. ಮೊನ್ನೆ ಸುದೀಪ್ ಅವರ ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆಯಿತು. ನಿನ್ನೆ ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಕೂಡ ಅನಾವರಣಗೊಂಡಿತು. ಇವುಗಳಲ್ಲಿ ತರುಣ್ ಕೇವಲ ರಕ್ಷಿತ್ ಶೆಟ್ಟಿಯ ಪೋಸ್ಟರ್ಗೆ ಮಾತ್ರ ವಿಶ್ ಮಾಡಿ, ಪೈಲ್ವಾನ್ ಚಿತ್ರಕ್ಕೆ ವಿಶ್ ಮಾಡಿಲ್ಲ. ಇದು ಕಿಚ್ಚನ ಅಭಿಮಾನಿಗಳನ್ನೂ ಕೆರಳಿಸಿದೆ.
ದರ್ಶನ್ ಅಭಿನಯದ ರಾಬರ್ಟ್ಸ್ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾಗಿ ಸುದೀಪ್ ಪೋಸ್ಟರ್ ಬಗ್ಗೆ ತರುಣ್ ಯಾವುದೇ ಟ್ವೀಟ್ ಮಾಡಿಲ್ಲ ಗಾಂಧಿನಗರದ ಜನ ಮಾತಾಡಿಕೊಳ್ಳುತ್ತಿದ್ದಾರೆ.