ಕ್ರಿಕೆಟ್ಗಾಗಿ ಚಿತ್ರರಂಗಕ್ಕೂ ಒಂಥರಾ ಬಿಡಿಸಿ ಹೇಳಲಾರದ ಅನ್ಯೋನ್ಯತೆ. ಅದರಲ್ಲೂ ಲವ್, ಕ್ರಶ್, ಡೇಟಿಂಗ್, ಮ್ಯಾರೇಜ್ ಮ್ಯಾಟರ್ನಲ್ಲಿ ಈ ಎರಡು ರಂಗಗಳು ಒಟ್ಟಾಗಿಯೇ ಕಾಣಿಸಿಕೊಳ್ಳುತ್ತವೆ.
- " class="align-text-top noRightClick twitterSection" data="
">
ಸಿನಿಮಾ ತಾರೆಯರ ಜತೆ ಓಡಾಡಿ ಕ್ರಿಕೆಟಿಗರು ಸುದ್ದಿಯಾಗುವುದು ಹೊಸದಲ್ಲ. ಈಗಾಗಲೇ ಕೆಲ ಕ್ರಿಕೆಟಿಗರು ಸಿನಿಮಾ ತಾರೆಯರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉದಾಹರಣೆಗಳು ನಮ್ಮ ಕಣ್ತುಂದೆ ಇವೆ. ಇದೀಗ ಸೌಥ್ ಸುಂದರಿ ಕಾಜಲ್ ಅಗರ್ವಾಲ್ಗೂ ಭಾರತೀಯ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಮೇಲೆ ಕ್ರಶ್ ಆಗಿದೆಯಂತೆ.
ಇತ್ತೀಚಿಗಷ್ಟೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಕಾಜಲ್ 'ಮನದ ಮಾತುಗಳು' ಹೊರಬಿದ್ದಿವೆ. ಸಂದರ್ಶಕ ಕೇಳಿದ ಪ್ರಶ್ನೆಗೆ ಕ್ಷಣಾರ್ಧದಲ್ಲೇ ಉತ್ತರಿಸಿದ ಈ ತಾರೆ, ನಂಗೆ ರೋಹಿತ್ ಶರ್ಮಾ ಇಷ್ಟ. ಅವರ ಮೇಲೆ ನಂಗೆ ಕ್ರಶ್ ಆಗಿದೆ. ಅವರನ್ನು ಕ್ರಿಕೆಟ್ ಮೈದಾನದಲ್ಲಿ ನೋಡೋವುದಂದ್ರೆ ನಂಗೆ ಪಂಚಪ್ರಾಣ ಎಂದಿದ್ದಾರೆ.
- " class="align-text-top noRightClick twitterSection" data="
">
ಇನ್ನು ಅದೆಷ್ಟು ಹುಡುಗಿಯರು ರೋಹಿತ್ ಮೇಲೆ ಪ್ರಾಣ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಇದೀಗ ಈ ಹುಡುಗಿಯ ಸಾಲಿಗೆ ನಟಿಮಣಿ ಕಾಜಲ್ ಸೇರಿದ್ದಾರೆ. ಆದರೆ, ರೋಹಿತ್ ಶರ್ಮಾ, ಈಗಾಗಲೇ ಮ್ಯಾರೀಡ್. 2015 ರಲ್ಲಿ ತನ್ನ ಬಹುಕಾಲದ ಗೆಳತಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಈ ದಂಪತಿಗೆ ಮುದ್ದಾದ ಒಂದು ಮಗು ಸಹ ಇದೆ.