ETV Bharat / sitara

ಅಪರಿಚಿತರನ್ನ ಇನ್ಮುಂದೆ ನಾನು ನಂಬುವುದಿಲ್ಲ, ಜಗ್ಗೇಶ್ ಹೀಗ್ಯಾಕೆ ಹೇಳಿದ್ರು? - ಡ್ರೋನ್​ ಪ್ರತಾಪ್​ ನಿಜ ಸಂಗತಿ

'ಕಣ್ಣು ಕಿತ್ತರು ನಿದ್ರೆ ಬರಲಿಲ್ಲ, ಇವನ ವಿಷಯ ಕೇಳಿ. ಇವನ ಬಗ್ಗೆ ಬರೆದಿದ್ದು ಹಾಗೂ ಗಣ್ಯರನ್ನ ಪರಿಚಯ ಮಾಡಿಕೊಟ್ಟಿದ್ದು, ಪ್ರಯೋಜನವಿಲ್ಲ ಎಂದು ಹಿಂದೆ ಹಾಕಿದ್ದ ಎಲ್ಲಾ ಪೋಸ್ಟ್​​ಗಳನ್ನು ತೆಗೆದು ಬಿಟ್ಟೆ..

jaggesh-angry-on-drone-prathap
ಡ್ರೋನ್​ ಪ್ರತಾಪ್​
author img

By

Published : Jul 11, 2020, 5:37 PM IST

Updated : Jul 12, 2020, 7:57 PM IST

ನಟ‌ ಜಗ್ಗೇಶ್‌ ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರ್ತಾರೆ. ಕಷ್ಟ ಅಂತಾ ಜಗ್ಗೇಶ್ ಅವರನ್ನ ಹುಡುಕಿ ಬರುವ ಜನರಿಗೆ ಹಾಗೂ ಸ್ನೇಹಿತರಿಗೆ ತಮ್ಮ ಕೈಲಾದ ಸಹಾಯ ಮಾಡಿ ಧೈರ್ಯ ತುಂಬುತ್ತಾರೆ. ಆದರೆ, ಇನ್ಮುಂದೆ ಸಹಾಯ ಕೇಳಿ ಬರುವ ಅಪರಿಚಿತರನ್ನ ನಂಬುವುದಿಲ್ಲ ಅಂತಾ ಜಗ್ಗೇಶ್ ತಮ್ಮ ಕೋಪ ಹೊರ ಹಾಕಿದ್ದಾರೆ.

ಜಗ್ಗೇಶ್ ಹೀಗೆ ಹೇಳಲು ಕಾರಣ, ಡ್ರೋನ್ ಪ್ರತಾಪ್ ಎಂಬ ಯುವಕ. ಈತನ ಸಾಧನೆ ಶುದ್ಧ ಸುಳ್ಳು ಅನ್ನೋದು ತಿಳಿಯುತ್ತಿದ್ದಂತೆಯೇ ಜಗ್ಗೇಶ್‌ ಇಂತಹ ಒಂದು ಮಾತು ಆಡಿದ್ದಾರೆ. 22 ವಯಸ್ಸಿನ ಡ್ರೋನ್ ಪ್ರತಾಪ್, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಚಿಕ್ಕ ವಯಸ್ಸಿಗೆ ವಿಜ್ಞಾನಿ ಆಗೋದ್ದೀನಿ ಅಂತಾ ದೇಶದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ. ಆದರೆ, ಈಗ ಪ್ರತಾಪ್ ಸಾಧನೆಗಳೆಲ್ಲವೂ ಸುಳ್ಳು ಎಂದು ವೈಬ್​​ಸೈಟ್​ವೊಂದು ವರದಿ ಮಾಡಿದೆ.

ಈ ವಿಷಯ ತಿಳಿದ ಜಗ್ಗೇಶ್, ಮನಸ್ಸಿಗೆ ಬೇಸರ ಮಾಡಿಕೊಂಡಿದ್ದಾರೆ. 'ಕಣ್ಣು ಕಿತ್ತರು ನಿದ್ರೆ ಬರಲಿಲ್ಲ, ಇವನ ವಿಷಯ ಕೇಳಿ. ಇವನ ಬಗ್ಗೆ ಬರೆದಿದ್ದು ಹಾಗೂ ಗಣ್ಯರನ್ನ ಪರಿಚಯ ಮಾಡಿಕೊಟ್ಟಿದ್ದು, ಪ್ರಯೋಜನವಿಲ್ಲ ಎಂದು ಹಿಂದೆ ಹಾಕಿದ್ದ ಎಲ್ಲಾ ಪೋಸ್ಟ್​​ಗಳನ್ನು ತೆಗೆದು ಬಿಟ್ಟೆ, ಕಷ್ಟ ಅಂತಾ ಬಂದವರಿಗೆ ಭುಜಕೊಡುತ್ತಿದ್ದೆ. ಇನ್ನು ಮುಂದೆ ಯಾವ ಅಪರಿಚಿತರನ್ನೂ ನಂಬುವುದಿಲ್ಲ' ಎಂದು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

Last Updated : Jul 12, 2020, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.