ETV Bharat / sitara

'ಬಾಸ್ ಜೊತೆ ಹೊಂದಾಣಿಕೆ ಮಾಡ್ಕೊಂಡ್ರೆ 'ಬಿಗ್​​ಬಾಸ್'​ ಟಿಕೆಟ್'... ಪತ್ರಕರ್ತೆಯಿಂದ ಗಂಭೀರ ಆರೋಪ - ಪತ್ರಕರ್ತೆ

ಕೊನೆಯ ಸುತ್ತಿಗೆ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​​ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಈ ಶೋನ ನಾಲ್ವರ ಕಮಿಟಿಯಲ್ಲಿ ಹೇಳಿದ್ದಾರೆ ಎಂದು ತೆಲುಗು ಬಿಗ್​ಬಾಸ್​ಗೆ ನಾಮಿನೇಟ್ ಆಗಿದ್ದ ಹೈದರಾಬಾದ್ ಮೂಲದ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಬಿಗ್​​ಬಾಸ್
author img

By

Published : Jul 14, 2019, 8:55 AM IST

ಹೈದರಾಬಾದ್: ಮುಂದಿನ ವಾರದಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ ತೆಲುಗು ಬಿಗ್​ಬಾಸ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.

ಕೊನೆಯ ಸುತ್ತಿಗೆ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​​ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಈ ಶೋನ ನಾಲ್ವರ ಕಮಿಟಿಯಲ್ಲಿ ಹೇಳಿದ್ದಾರೆ ಎಂದು ತೆಲುಗು ಬಿಗ್​ಬಾಸ್​ಗೆ ನಾಮಿನೇಟ್ ಆಗಿದ್ದ ಹೈದರಾಬಾದ್ ಮೂಲದ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

"ಮಾರ್ಚ್​ ವೇಳೆ ಬಿಗ್​​ಬಾಸ್​ನಿಂದ ಕರೆ ಬಂದಿತ್ತು. ಅದರಂತೆ ಆಕೆ ಮೂರನೇ ಆವೃತ್ತಿಯ ಬಿಗ್​​ಬಾಸ್​ಗೆ ಆಯ್ಕೆಯಾಗಿದ್ದಳು. ಈ ನಿಟ್ಟಿನಲ್ಲಿ ಶೋಗೆ ಸಂಬಂಧಿಸಿದ ನಾಲ್ವರನ್ನು ಭೇಟಿ ಮಾಡಿದ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಕೊನೆಯ ಸುತ್ತಿನಲ್ಲಿ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​ ಜೊತೆಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಆಕೆಗೆ ಹೇಳಿದ್ದರಂತೆ. ಜೂನ್​ 13ರಂದು ಹಿರಿಯ ಪತ್ರಕರ್ತೆ ಹಾಗೂ ನಿರೂಪಕಿ ಸೆಕ್ಷನ್ 354ರ ಅಡಿಯಲ್ಲಿ ಶೋಗೆ ಸಂಬಂಧಪಟ್ಟ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ" ಎಂದು ಎಸಿಪಿ ಕೆ.ಎಸ್. ರಾವ್ ಹೇಳಿದ್ದಾರೆ.

Bigg Boss
ತೆಲುಗು ಬಿಗ್​ಬಾಸ್

ಇವೆಲ್ಲದರ ಜೊತೆಗೆ ಪತ್ರಕರ್ತೆಯ ದೇಹದ ಬಗ್ಗೆಯೂ ಕೆಳಮಟ್ಟದ ಪದಗಳನ್ನು ಬಳಸಿದ್ದಾರೆ ಎನ್ನುವುದನ್ನೂ ದೂರಿನಲ್ಲಿ ಹೇಳಲಾಗಿದೆ. ಸದ್ಯ ಮಹಿಳಾ ಪತ್ರಕರ್ತೆ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಸ್ತುತ ಈ ವಿಚಾರದ ಬಗ್ಗೆ ಶೋ ಆಯೋಜಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರಲಿರುವ ಬಿಗ್​ಬಾಸ್ ಶೋ ಆರಂಭಕ್ಕೂ ಮುನ್ನ ದೊಡ್ಡ ವಿವಾದದಲ್ಲಿ ಸಿಲುಕಿದ್ದು, ಈ ಪ್ರಕರಣ ಶೋ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Intro:Body:

'ಬಾಸ್ ಜೊತೆಗೆ ಹಾಸಿಗೆ ಹಂಚಿಕೊಂಡ್ರೆ 'ಬಿಗ್​​ಬಾಸ್'​ ಟಿಕೆಟ್'..! ಮಹಿಳಾ ಪತ್ರಕರ್ತೆಯಿಂದ ಗಂಭೀರ ಆರೋಪ

ಹೈದರಾಬಾದ್: ಮುಂದಿನ ವಾರದಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ ತೆಲುಗು ಬಿಗ್​ಬಾಸ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.

ಕೊನೆಯ ಸುತ್ತಿಗೆ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​​ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಶೋನ ನಾಲ್ವರ ಕಮಿಟಿಯಲ್ಲಿ ಹೇಳಿದ್ದಾರೆ ಎಂದು ತೆಲುಗು ಬಿಗ್​ಬಾಸ್​ಗೆ ನಾಮಿನೇಟ್ ಆಗಿದ್ದ ಹೈದರಾಬಾದ್ ಮೂಲದ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

"ಮಾರ್ಚ್​ ವೇಳೆ ಬಿಗ್​​ಬಾಸ್​ನಿಂದ ಕರೆ ಬಂದಿತ್ತು. ಅದರಂತೆ ಆಕೆ ಮೂರನೇ ಆವೃತ್ತಿಯ ಬಿಗ್​​ಬಾಸ್​ಗೆ ಆಯ್ಕೆಯಾಗಿದ್ದಳು. ಈ ನಿಟ್ಟಿನಲ್ಲಿ ಶೋಗೆ ಸಂಬಂಧಿಸಿದ ನಾಲ್ವರನ್ನು ಭೇಟಿ ಮಾಡಿದ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಕೊನೆಯ ಸುತ್ತಿನಲ್ಲಿ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​ ಜೊತೆಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಆಕೆಗೆ ಹೇಳಿದ್ದರು. ಜೂನ್​ 13ರಂದು ಹಿರಿಯ ಪತ್ರಕರ್ತೆ ಹಾಗೂ ನಿರೂಪಕಿ ಸೆಕ್ಷನ್ 354ರ ಅಡಿಯಲ್ಲಿ ಶೋಗೆ ಸಂಬಂಧಪಟ್ಟ ನಾಲ್ವರ ಮೇಲೆ ದೂರು ದಾಖಲಿಸಲಾಗಿದೆ" ಎಂದು ಎಸಿಪಿ ಕೆ.ಎಸ್. ರಾವ್ ಹೇಳಿದ್ದಾರೆ.

ಇವೆಲ್ಲದರ ಜೊತೆಗೆ ಪತ್ರಕರ್ತೆಯ ದೇಹದ ಬಗ್ಗೆಯೂ ಕೆಳಮಟ್ಟದ ಪದಗಳನ್ನು ಬಳಸಿದ್ದಾರೆ ಎನ್ನುದನ್ನೂ ದೂರಿನಲ್ಲಿ ಹೇಳಲಾಗಿದೆ. ಸದ್ಯ ಮಹಿಳಾ ಪತ್ರಕರ್ತೆ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಸ್ತುತ ಈ ವಿಚಾರದ ಬಗ್ಗೆ ಶೋ ಆಯೋಜಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರಲಿರುವ ಬಿಗ್​ಬಾಸ್ ಶೋ ಆರಂಭಕ್ಕೂ ಮುನ್ನ ದೊಡ್ಡ ವಿವಾದಲ್ಲಿ ಸಿಲುಕಿದ್ದು, ಈ ಪ್ರಕರಣ ಶೋ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಕಾದು ನೋಡಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.