ETV Bharat / sitara

'ಐ ಲವ್​ ಯು' ಬಗ್ಗೆ ಮತ್ತೆ ಮಾತನಾಡಲ್ಲ, ಸಾಧ್ಯವಾದ್ರೆ ಹಾಡು ಕಟ್​​ ಮಾಡಿ: ಹುಚ್ಚ ವೆಂಕಟ್​​​​

author img

By

Published : Jun 26, 2019, 5:21 PM IST

ಉಪೇಂದ್ರ ನಟಿಸಿರುವ 'ಐ ಲವ್​ ಯು' ಸಿನಿಮಾ ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಅಮೋಘ ಪ್ರದರ್ಶನ ಕಾಣುತ್ತಿದೆ. ಇದುವರೆಗೂ ಸಿನಿಮಾ ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ ಎನ್ನಲಾಗಿದೆ.

ಹುಚ್ಚ ವೆಂಕಟ್​

'ಐ ಲವ್​ ಯು' ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಡುವಿನ ರೊಮ್ಯಾಂಟಿಕ್​ ಸಾಂಗ್ ಬಗ್ಗೆ ನಟ ಹುಚ್ಚ ವೆಂಕಟ್ ಗುಡುಗಿದ್ದರು. ಚಿತ್ರದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದ ಹುಚ್ಚ ವೆಂಕಟ್​​ಗೆ ಉಪ್ಪಿ ಫ್ಯಾನ್ಸ್​​​​ ಕ್ಲಾಸ್ ಕೂಡಾ ತೆಗೆದುಕೊಂಡಿದ್ರು. 'ಐ ಲವ್ ಯು' ಸಿನಿಮಾ ಕುಟುಂಬಸಹಿತ ಥಿಯೇಟರ್​​​ಗೆ ಬಂದು ನೋಡುವಂತಹ ಚಿತ್ರ. ನೀವು ಸಿನಿಮಾ ನೋಡಿ ನಂತರ ಮಾತನಾಡಿ ಎಂದು ಉಪ್ಪಿ ಅಭಿಮಾನಿಯೊಬ್ಬರು ಸಲಹೆ ನೀಡಿದ್ದರು. ಇದಾದ ಬಳಿಕ ವೆಂಕಟ್ ಕಳೆದ ಭಾನುವಾರ ತ್ರಿವೇಣಿ ಚಿತ್ರಮಂದಿರದ ಬಳಿ ಹೋಗಿ ನಿರ್ದೇಶಕ ಆರ್​​​​. ಚಂದ್ರು ಬಳಿ ಕ್ಷಮೆ ಕೇಳಿದ್ದರು.

'ಐ ಲವ್​ ಯು' ರೊಮ್ಯಾಂಟಿಕ್ ಹಾಡಿನ ಬಗ್ಗೆ ಹುಚ್ಚ ವೆಂಕಟ್ ಫೈರ್

ಆದರೆ ಯಾರೋ ಕಿಡಿಗೇಡಿಗಳು ಹುಚ್ಚ ವೆಂಕಟ್ 'ಐ ಲವ್ ಯು' ಚಿತ್ರದ ಬಗ್ಗೆ ಈ ಹಿಂದೆ ಕೆಟ್ಟದಾಗಿ ಮಾತನಾಡಿದ್ದ ಹಳೆಯ ವಿಡಿಯೋವನ್ನು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನೆಗೆಟಿವ್ ಕಮೆಂಟ್ ಹಾಕುತ್ತಿದ್ದ ಬಗ್ಗೆ ಬೇಸತ್ತ ವೆಂಕಟ್, ಇಂದು ಪ್ರೆಸ್​ಕ್ಲಬ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ಐ ಲವ್​ ಯು' ಚಿತ್ರದ ಬಗ್ಗೆ ನಾನು ಇನ್ಮುಂದೆ ಎಲ್ಲಿಯೂ ಮಾತನಾಡುವುದಿಲ್ಲ. ಆದರೆ ಯಾರೋ ಹಳೇ ವಿಡಿಯೋವನ್ನು ಮತ್ತೆ ಮತ್ತೆ ಪೋಸ್ಟ್ ಮಾಡುತ್ತಿದ್ದಾರೆ. ಆರ್​​. ಚಂದ್ರು ನನ್ನ ಅಣ್ಣನ ರೀತಿ. ತಮ್ಮನಾಗಿ ನಾನು ಕೇಳುವುದು ಒಂದೇ. ಚಿತ್ರದ ಹಾಡನ್ನು ಬ್ಲರ್ ಮಾಡಲಿ, ಇಲ್ಲವೇ ಎಡಿಟ್ ಮಾಡಿ ಸಿನಿಮಾದಿಂದ ಕಟ್ ಮಾಡಿದರೆ ಒಳ್ಳೆಯದು ಎಂದು ಮನವಿ ಮಾಡಿದರು.

ಚಿತ್ರದ ಬಗ್ಗೆ ನಾನು ಏನಾದರೂ ಕೆಟ್ಟದಾಗಿ ಮಾತನಾಡಿದರೆ ಆರ್​​. ಚಂದ್ರು ಅವರಿಗೆ ಕ್ಷಮೆ ಕೇಳ್ತಿನಿ. ಅಲ್ಲದೆ ಅವರ ಕುಟುಂಬದವರಿಗೂ ಕ್ಷಮೆ ಕೇಳ್ತಿನಿ ಎಂದರು. ಅಲ್ಲದೆ ಸೆನ್ಸಾರ್ ಬೋರ್ಡ್ ಬಗ್ಗೆ ಕೂಡಾ ಮಾತನಾಡಿದ ವೆಂಕಟ್​​​, ಇಂತಹ ಸೀನ್​​​​​​​​​​ಗಳನ್ನು ಸೆನ್ಸಾರ್ ಮಂಡಳಿ ಕಟ್ ಮಾಡಿಸಬೇಕು. ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಹಾಡುಗಳಿಗೆ ಅವಕಾಶ ನೀಡಲೇಬಾರದು ಎಂದು ಹುಚ್ಚ ವೆಂಕಟ್ ಸೆನ್ಸಾರ್ ವಿರುದ್ಧ ಗುಡುಗಿದರು.

Intro:ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಆರ್ ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರದ ರೋಮ್ಯಾಂಟಿಕ್ ಸಾಂಗ್ ವಿರುದ್ಧ ಹುಚ್ಚ ವೆಂಕಟ್ ಗುಡುಗಿದ್ದರು. ಅಲ್ಲದೆ ಐ ಲವ್ ಯು ಚಿತ್ರದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದ ಹುಚ್ಚ ವೆಂಕಟ್ ಗೆ ಉಪ್ಪಿ ಫ್ಯಾನ್ಸ್ ಸಕ್ಕತ್ತಾಗಿ ಕ್ಲಾಸ್ ತಗೊಂಡಿದ್ರು. ಐ ಲವ್ ಯು ಚಿತ್ರದ ಚಿತ್ರವಲ್ಲ ಕುಟುಂಬ ಸಮೇತ ನೋಡುವಂತಹ ಚಿತ್ರ ನೀವು ಬಂದು ಸಿನಿಮಾ ನೋಡಿ ನಂತರ ಮಾತನಾಡಿ ಎಂದು ಹುಚ್ಚ ವೆಂಕಟ್ ಗೆ ಉಪೇಂದ್ರ ಅಭಿಮಾನಿಗಳು ಸಲಹೆ ನೀಡಿದರು. ಇನ್ನು ಉಪ್ಪಿ ಫ್ಯಾನ್ಸ್ ಗಳ ಮನವಿಗೆ ಸ್ಪದಿಂದ್ದ ನೋಡುವುದಾಗಿ ಹುಚ್ಚ ವೆಂಕಟ್ ಹೇಳಿದ್ರು.

Body:ಅಲ್ಲದೆ ಐ ಲವ್ ಯು ಚಿತ್ರ ಕುಟುಂಬ ಸಮೇತವಾಗಿ ನೋಡಿದ್ದು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ. ಹುಚ್ಚ ವೆಂಕಟ್ ಕಳೆದ ಭಾನುವಾರ ತ್ರಿವೇಣಿ ಚಿತ್ರಮಂದಿರದ ಬಳಿ ಹೋಗಿ ನಿರ್ದೇಶಕ ಚಂದ್ರುಗೆ ಕ್ಷಮೆ ಕೇಳಿದರು. ಆದರೆ ಇತ್ತೀಚೆಗೆ ಮತ್ತೆ ಯಾರೋ ಕಿಡಿಗೇಡಿಗಳು ಹುಚ್ಚ ವೆಂಕಟ್ ಐ ಲವ್ ಯು ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಹಳೆಯ ವಿಡಿಯೋವನ್ನು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನೆಗೆಟಿವ್ ಕಮೆಂಟ್ ಹಾಕ್ತಿದ್ದರು. ಇನ್ನು ಈ ವಿಚಾರಕ್ಕೆ ಬೇಸತ್ತ ಹುಚ್ಚವೆಂಕಟ್ ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಐ ಲವ್ ಯು ಚಿತ್ರದ ಬಗ್ಗೆ ನಾನು ಇನ್ನು ಮುಂದೆ ಎಲ್ಲೂ ಮಾತನಾಡುವುದಿಲ್ಲ ಇಲ್ಲ.

Conclusion:ಆದರೆ ಯಾರು ಹಳೇ ವಿಡಿಯೋವನ್ನು ಹಾಕಿ ನನಗೆ ಟಾರ್ಚರ್ ಕೊಡುತ್ತಿದ್ದಾರೆ. ಸಾಧ್ಯವಾದರೆ ಆರ್ ಚಂದ್ರು ಐ ಲವ್ ಯು ಚಿತ್ರದ ಆ ರೋಮ್ಯಾಂಟಿಕ್ ವಿಡಿಯೋವನ್ನು ಬ್ಲರ್ ಮಾಡಲಿ ಇಲ್ಲವೇ ಎಡಿಟ್ ಮಾಡಿ ಸಿನಿಮಾದಿಂದ ಕಟ್ ಮಾಡಿದರೆ ಒಳ್ಳೆಯದು ಎಂದು ನಿರ್ದೇಶಕ ಆರ್ ಚಂದ್ರು ಹುಚ್ಚ ವೆಂಕಟ್ ಮನವಿ ಮಾಡಿದರು.ನಾನು ಒಬ್ಬ ಅಣ್ಣನಾಗಿ ಆರ್ ಚಂದ್ರು ಗೆ ಹೇಳ್ತದ್ದೀನಿ ನಾನು ಏನಾದ್ರು ಕೆಟ್ಟದಾಗಿ ಮಾತನಾಡಿದ್ರೆ ಅರ್ ಚಂದ್ರು ಅವರಿಗೆ ಕ್ಷಮೆ ಕೇಳ್ತಿನಿ ಅಲ್ಲದೆ ಅವರ ಕುಟುಂಬದವರಿಗೂ ಕ್ಷಮೆ ಕೇಳ್ತಿನಿ ಎಂದರು.ಅಲ್ಲದೆ ಇದೇ ವೇಳೆ ಸೆನ್ಸಾರ್ ಬೋರ್ಡ್ ವಿರುದ್ದ ಫೈಯರ್ ಆದ ಫೈರಿಂಗ್ ಸ್ಟಾರ್ ಸೆನ್ಸಾರ್ ನವರು ಇಂತಹ ಸೀನ್ ಗಳು ಇದ್ದರೆ ಸೆನ್ಸರ್ ನೀಡದೆ ಅಲ್ಲಿಯೇ ಕಟ್ ಮಾಡಿಸಬೇಕು. ಸೆನ್ಸಾರ್ ನವರು ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಹಾಡುಗಳಿಗೆ ಅವಕಾಶ ನೀಡಬಾರದು ಎಂದು ಹುಚ್ಚ ವೆಂಕಟ್ ಸೆನ್ಸಾರ್ ವಿರುದ್ಧ ಗುಡುಗಿದ್ರು.ಅಲ್ಲದೆ ಇನ್ನು ಮುಂದೆ ನಾನು ಎಲ್ಲಿಯೂ ಐ ಲವ್ ಯು ವಿಚಾರವಾಗಿ ಮಾತನಾಡುವುದಿಲ್ಲ ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಹುಚ್ಚವೆಂಕಟ್ ಐ ಲವ್ ಯೂ ಕಾಂಟ್ರವರ್ಸಿ ಗೆ ಎಳ್ಳುನೀರು ಬಿಟ್ಟರು..

ಸತೀಶ್ ಎಂಬಿ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.