ಕನ್ನಡದವರೆ ತಯಾರು ಮಾಡಿರುವ ‘ನಮ್ಮ ಫ್ಲಿಕ್ಸ್’ ಆ್ಯಪ್‌ನ ಸೂಪರ್ ಸ್ಟಾರ್ ಉಪೇಂದ್ರ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ಜನುಮ ದಿನವಾದ ಏಪ್ರಿಲ್ 24 ರಂದು ಬಿಡುಗಡೆ ಮಾಡಿದ್ದರು. ಈ ಆ್ಯಪ್ ಬಹಳ ಮೆಚ್ಚುಗೆಯನ್ನು ಸಹ ಗೂಗಲ್ ವಲಯದಿಂದ ಪಡೆದಿದೆ.
ಪ್ರತಿ ವಾರ ಒಂದು ಹೊಚ್ಚ ಹೊಸ ಚಿತ್ರ ಬಿಡುಗಡೆಗಾಗಿ ‘ನಮ್ಮ ಫ್ಲಿಕ್ಸ್’ ಆ್ಯಪ್‌ನ ಆರಂಭ ಮಾಡಲಾಯಿತು. ಇದೀಗ ಯಾವುದೇ ಪಾತ್ರವಾದರು ಲೀಲಾಜಾಲವಾಗಿ ಮಾಡುವ ನಟಿ ಹರಿಪ್ರಿಯಾ. ದಕ್ಷ ಪೊಲೀಸ್ ಅಧಿಕಾರಿಯಾಗಿ ಅಭಿನಯ ಮಾಡಿರುವ, ಮಯೂರ ರಾಘವೇಂದ್ರ ಪ್ರಥಮ ನಿರ್ದೇಶನದ ಸಿನಿಮಾವಿದು. ಶ್ರೀ ರಾಮರತ್ನ ಪ್ರೂಡಕ್ಷನ್ ಬ್ಯಾನರ್ನಲ್ಲಿ ಯಶಸ್ಸನ್ನು ಕಂಡಿದ್ದ ಚಿತ್ರ "ಕನ್ನಡ್ ಗೊತ್ತಿಲ್ಲ" ನೋಡಿಗರಿಗೆ ಒಂದೊಳ್ಳೆ ಅವಕಾಶ ಕಲ್ಪಿಸಿದೆ.
ಈ ಚಿತ್ರ ಬಹಳಷ್ಟು ಜನರಿಗೆ ಕನ್ನಡದ ಮೇಲೆ ಒಲವನ್ನು ಮೂಡಿಸಿದೆ. ಸದ್ಯ ಈ ಚಿತ್ರ ಚಿತ್ರಮಂದಿರದ ನಂತರ "ನಮ್ಮ ಫ್ಲಿಕ್ಸ್" ಆ್ಯಪ್ ಮೂಲಕ ನಿಮ್ಮನ್ನು ಮನರಂಜಿಸಲು ನಿಮ್ಮ ಮೊಬೈಲ್‌ಗೆ ಬರ್ತಿದೆ. "ನಮ್ಮ ಫ್ಲಿಕ್ಸ್" ಆ್ಯಪ್ ಎಂದಿಗೂ ಕನ್ನಡಿಗರಿಗಾಗಿ ಕನ್ನಡಿಗರೆ ಮಾಡಿರುವ ಆ್ಯಪ್ ಆಗಿದೆ. ಹೀಗಾಗಿ ನಮ್ಮ ಕನ್ನಡಕ್ಕೆ ಒತ್ತು ಕೊಟ್ಟು ಮೊದಲ ಬಾರಿಗೆ "ಕನ್ನಡ್ ಗೊತ್ತಿಲ್ಲಾ" ಸಿನಿಮಾವನ್ನು ನಿಮ್ಮ ಮುಂದೆ ತರ್ತಿದೆ.
‘ಕನ್ನಡ್ ಗೊತ್ತಿಲ್ಲ’ ಸಿನಿಮಾವನ್ನು ಮೊದಲ ಬಾರಿಗೆ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದಾರೆ. ಇದೊಂದು ಥ್ರಿಲ್ಲರ್ ಕಥಾ ವಸ್ತು ಇರುವ ಸಿನಿಮಾ. ಹರಿಪ್ರಿಯಾ ಪೊಲೀಸ್ ಅಧಿಕಾರಿ ಪಾತ್ರ, ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ಹಾಗೂ ತಾರಾ ಚಿತ್ರದ ತಾರಾಗಣದಲ್ಲಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಸಂಕಲನ, ನಕುಲ್ ಅಭಯಂಕರ್ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.
ಇಲ್ಲಿ ಕೇವಲ 1 ರೂಪಾಯಿಗೆ ಒಂದು ಸಿನಿಮಾ ಲಭ್ಯವಿದೆ. ನೆಟ್ ಫ್ಲಿಕ್ಸ್, ಅಮೆಜಾನ್ ಬಳಕೆದಾರರು ಈ ನಮ್ಮ ಫ್ಲಿಕ್ಸ್ ಕಡೆ ಹೆಚ್ಚಾಗಿ ವಾಲಿಕೊಂಡಿರುವುದು ಸಹ ಕೇಳಿ ಬಂದಿದೆ. ಹಾಗೆಯೇ ಇದರಲ್ಲಿ ಕೇವಲ ಸಿನಿಮಾ ಮಾತ್ರವಲ್ಲದೇ ವೆಬ್ ಸೀರೀಸ್, ಸಂಗೀತ, ಸ್ಟಾರ್ ಜೊತೆ ಮಾತು ಕಥೆಯನ್ನು ಸಹ ವೀಕ್ಷಿಸಬಹುದು.