ಡಾ. ರಾಜ್ಕುಮಾರ್ ಕಣ್ಣುಗಳನ್ನ ದಾನ ಮಾಡುವ ಮೂಲಕ ನೇತ್ರದಾನ ಮಹಾದಾನ ಎಂಬ ಮಹಾನ್ ಕಾರ್ಯಕ್ಕೆ ನಾಂದಿ ಹಾಡಿದ್ರು. ಅದೇ ರೀತಿ ಡಾ. ರಾಜ್ ಕುಟುಂಬ ತಮ್ಮ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಪುನೀತ್ ರಾಜ್ಕುಮಾರ್ ಕೂಡ ತಂದೆಯ ಆದರ್ಶಗಳನ್ನ ಪಾಲಿಸುತ್ತಾ ಬಂದಿದ್ದಾರೆ. ಅದೆಕ್ಕೆ ಉದಾಹರಣೆ ತುಮಕೂರಿನ ಸಿದ್ದಗಂಗಾ ಮಠದ 10 ಸಾವಿರ ಮಕ್ಕಳಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿಸಿರೋದು.
ಈ ಕಾರ್ಯಕ್ರಮ ಡಾ. ರಾಜ್‌ಕುಮಾರ್ ಟ್ರಸ್ಟ್ ಬೆಂಗಳೂರು ಹಾಗೂ ಡಾ. ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ ಬಿಡದಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ಸಿದ್ದಗಂಗಾ ಮಠದಲ್ಲಿ ನಡೆಯಿತು.
![free eye checkup by rajkumar trust](https://etvbharatimages.akamaized.net/etvbharat/prod-images/kn-bng-04-thandeya-aadhrashavanna-palesuthiro-puneeth-rajkaumar-photos-7204735_27112019181335_2711f_1574858615_743.jpg)
![free eye checkup by rajkumar trust](https://etvbharatimages.akamaized.net/etvbharat/prod-images/kn-bng-04-thandeya-aadhrashavanna-palesuthiro-puneeth-rajkaumar-photos-7204735_27112019181335_2711f_1574858615_131.jpg)
ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ, ಸಹೋದರಿ ಪೂರ್ಣಿಮಾ, ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ನಟ ದೊಡ್ಡಣ್ಣ ಹಾಗೂ ಸಾಧು ಕೋಕಿಲ ಭಾಗಿಯಾಗಿದ್ದರು. ಇನ್ನು ಕಣ್ಣಿನ ಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಕನ್ನಡಕಗಳನ್ನ ವಿತರಣೆ ಮಾಡಿದರು.
![free eye checkup by rajkumar trust](https://etvbharatimages.akamaized.net/etvbharat/prod-images/kn-bng-04-thandeya-aadhrashavanna-palesuthiro-puneeth-rajkaumar-photos-7204735_27112019181335_2711f_1574858615_979.jpg)
ಇನ್ನು ಪುನೀತ್ ರಾಜ್ಕುಮಾರ್ ಯುವರತ್ನ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಕಾರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಈ ವಿಷಯವನ್ನು ಪುನೀತ್ ರಾಜ್ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
-
ನೇತ್ರ ದಾನ ಮಹಾ ದಾನ.... ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ನೆನ್ನೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು..... pic.twitter.com/Ec6VvgiS83
— Puneeth Rajkumar (@PuneethRajkumar) November 27, 2019 " class="align-text-top noRightClick twitterSection" data="
">ನೇತ್ರ ದಾನ ಮಹಾ ದಾನ.... ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ನೆನ್ನೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು..... pic.twitter.com/Ec6VvgiS83
— Puneeth Rajkumar (@PuneethRajkumar) November 27, 2019ನೇತ್ರ ದಾನ ಮಹಾ ದಾನ.... ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ನೆನ್ನೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು..... pic.twitter.com/Ec6VvgiS83
— Puneeth Rajkumar (@PuneethRajkumar) November 27, 2019