ಇಂದು ಎಲ್ಲಾ ಪ್ರೇಮಿಗಳು ಗರಿ ಬಿಚ್ಚಿ ಬಾನೆತ್ತರಕ್ಕೆ ಹಾರಿ ಸಂತೋಷ ಪಡುವ ದಿನ. ಯಾಕಂದ್ರೆ ಇಂದು ವಿಶ್ವ ಪ್ರೇಮಿಗಳ ದಿನ. ಈ ದಿನದಂದೇ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಮೊಟ್ಟ ಮೊದಲ ಟೀಸರ್ ರಿಲೀಸ್ ಆಗಿದೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ಪ್ರೇಮ್ ಅಳಿಯ ರಾಣ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡ್ರೆ, ನಾಯಕಿಯಾಗಿ ರೀಶ್ಮಾ ನಟಿಸಿದ್ದಾರೆ. ಏಕ್ ಲವ್ ಯಾ ಸಿನಿಮಾಲ್ಲಿ ರಚಿತಾ ರಾಮ್ ಕೂಡ ಅಭಿನಯಿಸಿದ್ದು, ಬೋಲ್ಡ್ ಹುಡುಗಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿಯಲ್ಲಿ ಸಮಾನ್ಯವಾಗಿ ನಡೆಯುವ ಯಾತನೆ, ವಿರಹ, ನಗು, ಅಳುವನ್ನು ಮಿಶ್ರಣ ಮಾಡಿ ಹೊಸದೊಂದು ಪ್ರೇಮ ಕಥೆಯನ್ನು ಪ್ರೇಮ್ ತೋರಿಸಲು ಹೊರಟಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ರಕ್ಷಿತಾ ಪ್ರೇಮ್ ಬಂಡವಾಳ ಹೂಡಿದ್ದಾರೆ.