ಸ್ಯಾಂಡಲ್ವುಡ್ನಲ್ಲಿ ಹೊಸ ನಟರು ಹಾಗೂ ಯುವ ನಿರ್ದೇಶಕರಿಗೆ ಸ್ಟಾರ್ಗಳು ಸಾಥ್ ನೀಡುವುದು ಸಾಮಾನ್ಯವಾಗಿದೆ. ಚೊಚ್ಚಲಾಗಿ ಸಿನಿ ರಂಗಕ್ಕೆ ಎಂಟ್ರಿಕೊಟ್ಟು ಬೆಳೆಯಬೇಕೆಂದಿರುವ ಪ್ರತಿಭೆಗಳಿಗೆ ಈ ಸ್ಟಾರ್ ನಟರ ಸಹಾಯ ಮುಖ್ಯವಾಗಿರುತ್ತದೆ.
ಸದ್ಯ ಗಾಂಧಿನಗರದಲ್ಲಿ 'ಮಹಿಷಾಸುರ'ಅಂತಾ ಟೈಟಲ್ ಇಟ್ಟುಕೊಂಡು ಸಿನಿಮಾ ಬರ್ತಾ ಇದೆ. ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸ ಮುಗಿದಿದ್ದು ರಿಲೀಸ್ಗೆ ರೆಡಿಯಾಗಿದೆ.
ಮಹಿಷಾಸುರ ಸಿನಿಮಾದ ಲಿರಿಕಲ್ ವಿಡಿಯೋವನ್ನ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಕ್ಕೆ ಉದಯ ಪ್ರಸನ್ನ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಈ ಸಿನಿಮಾದಲ್ಲಿ ಅರ್ಜುನ್, ಮಂಜು, ಬಿಂದುಶ್ರೀ, ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‍ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಲಿದ್ದಾರೆ.
ಮಹಿಷಾಸುರನಿಗೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿಯ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯುಡಿವಿ ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಮೇಲುಕೋಟೆ ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಸೆನ್ಸಾರ್‍ಗೆ ತೆರಳಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇನ್ನು, ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ ಧ್ರುವ ಸರ್ಜಾಗೆ ಮಹಿಷಾಸುರ ಚಿತ್ರತಂಡ ಆಂಜನೇಯನ ವಿಗ್ರಹ ನೀಡಿ ಗೌರವಿಸಿದೆ.