ದರ್ಶನ್ಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಈ ಪ್ರೀತಿಯಿಂದಲೇ ಮೈಸೂರಿನಲ್ಲಿ ದರ್ಶನ್ ಪ್ರಾಣಿಗಳಿಗಾಗಿ ಫಾರ್ಮ್ ಹೌಸ್ ಮಾಡಿದ್ದಾರೆ. ಅಲ್ಲದೆ ಬಿಡುವಿದ್ದಾಗ ಅಲ್ಲಿಗೆ ಹೋಗಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾರೆ.
ಇದೇ ರೀತಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ಶ್ವಾನ ಪ್ರೇಮಿಯಾಗಿದ್ರು. ಅಂಬಿ ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಒಂದಕ್ಕೆ ಕನ್ವರ್ ಲಾಲ್ ಎಂದು, ಮತ್ತೊಂದಕ್ಕೆ ಬುಲ್‌ಬುಲ್ ಎಂದು ಹೆಸರಿಟ್ಟಿದ್ರು.
ಇತ್ತೀಚೆಗೆ ಚಾಲೆಂಚಿಂಗ್ ಸ್ಟಾರ್ ದರ್ಶನ್ ಅಂಬಿ ಮನೆಗೆ ತೆರಳಿದ್ದು ಕನ್ವರ್ ಲಾಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಕನ್ವರ್ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಇದನ್ನು ದಚ್ಚು ಅಭಿಮಾನಿಗಳು ಡಿ ಕಂಪನಿಯ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
-
#BoxOfficeSultan #ChallengingStarDarshan #DBoss selfie with his pet 😍@dasadarshan @vijayaananth2 @dinakar219 pic.twitter.com/uPjR8a0qJ1
— D Company(R)Official (@Dcompany171) January 11, 2020 " class="align-text-top noRightClick twitterSection" data="
">#BoxOfficeSultan #ChallengingStarDarshan #DBoss selfie with his pet 😍@dasadarshan @vijayaananth2 @dinakar219 pic.twitter.com/uPjR8a0qJ1
— D Company(R)Official (@Dcompany171) January 11, 2020#BoxOfficeSultan #ChallengingStarDarshan #DBoss selfie with his pet 😍@dasadarshan @vijayaananth2 @dinakar219 pic.twitter.com/uPjR8a0qJ1
— D Company(R)Official (@Dcompany171) January 11, 2020
ಅಂಬರೀಶ್ ಮನೆಯಲ್ಲಿರುವ ಕನ್ವರ್ ಲಾಲ್ ಎಂಬ ನಾಯಿ ಸೇಂಟ್ ಬರ್ನಾಡ್ ತಳಿಯದ್ದಾಗಿದೆ. ಇದರ ಜೊತೆಗಿನ ದರ್ಶನ್ ಸೆಲ್ಫಿ ಕಂಡ ಡಿ ಬಾಸ್ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.