ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ದಚ್ಚು, ಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆ ನೋಡ್ಕೋತಾರೆ. ಅಲ್ಲದೆ ಮೈಸೂರು ಜೂನಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿರುವ ಸಾರಥಿ, ಈಗ ಗೋಶಾಲೆಗಳಲ್ಲಿರುವ ಪ್ರಾಣಿಗಳ ಸೇವೆಗೆ ನಿಂತಿದ್ದಾರೆ.
ಮೈಸೂರಿನ ಸುತ್ತಮುತ್ತ ಇರೋ ಗೋ ಶಾಲೆಗಳಿಗೆ ಸುಮಾರು 15 ಟ್ರ್ಯಾಕ್ಟರ್ ಹುಲ್ಲಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಅಲ್ಲದೆ ಸ್ವತಃ ದರ್ಶನ್ ಸಹ ಗೋಶಾಲೆಗಳಿಗೆ ಭೇಟಿ ನೀಡಿದ್ದಾರೆ.
ಪಾಂಡವರ ಗೋಶಾಲೆ, ಚೈತ್ರಾ ಗೋಶಾಲೆ ಸೇರಿದಂತೆ ಹಲವು ಗೋಶಾಲೆಗಳಿಗೆ ಹುಲ್ಲಿನ ಹೊರೆಗಳನ್ನು ಈಗಾಗಲೇ ರವಾನಿಸಿದ್ದಾರೆ.