ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ದಿಯಾ ಮಿರ್ಜಾ, ಅತುಲ್ ಕುಲಕರ್ಣಿ ಮತ್ತು ರಾಣಾ ದಗ್ಗುಬಟಿಯಾ ಇದೀಗ ಕೊರೊನಾ ಜಾಗೃತಿ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರ್ಯಾಪರ್ ಹಾಡಾಗಿದ್ದು, ಹಿಂದಿ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಮೂಡಿ ಬಂದಿದೆ. ಇದನ್ನು ಜೋಯಲ್ ಡಿಸೋಜಾ ನಿರ್ದೇಶಿಸಿದ್ದಾರೆ. ಅಲ್ಲದೆ ಎಂಸಿ ಅಲ್ತಾಫ್, ಡೋಪೆಡೆಲಿಕ್ಸ್ನ ಟೋನಿ ಸೈಕೊ ಮತ್ತು ಸೆವೆನ್ ಬಾಂಟೈಜ್ನ ಬೊಂಜ್ ಎನ್. ರಿಬ್ಜ್ ಬರೆದಿದ್ದಾರೆ.
- " class="align-text-top noRightClick twitterSection" data="
">
ಈ ಹಾಡು ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಒಂದೊಳ್ಳೆ ಸಂದೇಶವನ್ನು ಸಾರುತ್ತಿದೆ. ಈ ಹಾಡು ನಿಜವಾಗಿಯೂ ನನ್ನ ಹೃದಯ ತಟ್ಟಿದೆ. ಈ ಹಾಡಿನ ಭಾವನೆ ಅನೇಕರೊಂದಿಗೆ ಸಂವಹಿಸುತ್ತದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ದಿಯಾ ಮಿರ್ಜಾ ಈ ಬಗ್ಗೆ ಮಾತನಾಡಿದ್ದು, ಅದ್ಭುತ ಕಲಾವಿದರಿಂದ ಜಾಗೃತಿ ಮೂಡಿಸುವ ಗೀತೆ ಇದಾಗಿದೆ. ಈ ಹಾಡಿನಲ್ಲಿ ನಾನು ಭಾಗಿಯಾಗಿರುವುದಕ್ಕೆ ಹಾಡಿನ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ಇನ್ನುಕೊರೊನಾ ಬಗ್ಗೆ ಜನರು ಅರ್ಥಮಾಡಿಕೊಳ್ಳುವಂತೆ ಈ ಹಾಡು ಮಾಡುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಹಾಡನ್ನು ಗಲ್ಲಿ ಗ್ಯಾಂಗ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿದ್ದು, ಹಾಡಿನ ಸಾಹಿತ್ಯದಲ್ಲಿ ಜನರು ತಾವಿರುವ ಜಾಗದಲ್ಲಿಯೇ ಸುರಕ್ಷರಾಗಿರಿ ಎಂದು ಹೇಳಲಾಗಿದೆ.
ಇನ್ನು ಗಲ್ಲಿಗ್ಯಾಂಗ್ನ ಅಲ್ತಾಫ್ ಮಾತನಾಡಿದ್ದು, ಸುರಕ್ಷಿತರಾಗಿ ಮನೆಯಲ್ಲೇ ಇದ್ದುಅಧಿಕಾರಿಗಳು ಹೇಳಿದಂತೆ ಕೇಳಿ ಎಂದು ತಿಳಿಸಿದ್ದಾರೆ.