ETV Bharat / sitara

ಸೆಂಚುರಿ ಸ್ಟಾರ್ ಹಾಗೂ ರಿಯಲ್ ಸ್ಟಾರ್ ಮಧ್ಯೆ ಬಾಕ್ಸ್ ಆಫೀಸ್ ಫೈಟ್

author img

By

Published : May 10, 2019, 10:46 PM IST

ಉಪೇಂದ್ರ ಅಭಿನಯದ 'ಐ ಲವ್​ ಯು' ಹಾಗೂ ಶಿವರಾಜ್​ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾ ಬಹುತೇಕ ಒಂದೇ ದಿನ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಆ ರೀತಿ ಆದರೆ ನಿರ್ಮಾಪಕರಿಗೆ ನಷ್ಟವಾಗಲಿದೆ ಎನ್ನಲಾಗುತ್ತಿದೆ.

ಶಿವರಾಜ್​ಕುಮಾರ್ , ಉಪೇಂದ್ರ

ಸ್ಯಾಂಡಲ್​ವುಡ್​​​ನಲ್ಲಿ ಇಬ್ಬರು ಬಿಗ್​​​​​ಸ್ಟಾರ್​​​​​​​​ಗಳ ಸಿನಿಮಾಗಳು, ಒಂದೇ ದಿನ ರಿಲೀಸ್ ಆಗೋದ್ರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ​​​​ಫೈಟ್ ಜೊತೆ ನಿರ್ಮಾಪಕನಿಗೆ ನಷ್ಟ ಆಗೋದು ಗ್ಯಾರಂಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಡುವೆ ಬಾಕ್ಸ್ ಆಫೀಸ್ ಫೈಟ್ ಶುರುವಾಗಲಿದೆ.

i love you
'ಐ ಲವ್​ ಯು ' ಪ್ರೆಸ್​​​ಮೀಟ್​​​

ಉಪೇಂದ್ರ ಅಭಿನಯದ 'ಐ ಲವ್ ಯು' ಸಿನಿಮಾ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಆಗಿದೆ. ಇದರ ಜೊತೆಗೆ ಅದೇ ವೇಳೆ ಶಿವರಾಜ್ ಕುಮಾರ್ 'ರುಸ್ತುಂ' ಕೂಡಾ ತೆರೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಉಪೇಂದ್ರ ಅಭಿನಯದ ಸಿನಿಮಾಗಳು ಬಿಡುಗಡೆಯಾಗಿ ಸುಮಾರು 2 ವರ್ಷಗಳು ಕಳೆದಿವೆ. ಇದರಿಂದ ಫ್ಯಾನ್ಸ್ ಕೂಡಾ ಅವರ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇಷ್ಟು ದಿನ ರಾಜಕೀಯದಲ್ಲಿ ಬ್ಯುಸಿ ಇದ್ದ ಉಪ್ಪಿ ಈಗ ರಚಿತಾ ರಾಮ್​ಗೆ 'ಐ ಲವ್​ ಯು' ಹೇಳಲು ಹೊರಟಿದ್ದಾರೆ. ಆರ್​. ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಸೋನುಗೌಡ ಕೂಡಾ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Rustum
'ರುಸ್ತುಂ' ಚಿತ್ರದಲ್ಲಿ ಶಿವರಾಜ್​​​​ಕುಮಾರ್​​​

ಇನ್ನು ಶಿವರಾಜ್ ಕುಮಾರ್​​​ ಮೀಸೆ ಬಿಟ್ಟು ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸುತ್ತಿರುವ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದಲ್ಲಿ ತಯಾರಾಗಿರುವ 'ರುಸ್ತುಂ' ಜೂನ್ 14ಕ್ಕೆ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕ ರವಿವರ್ಮ ಹೇಳೋದೇ ಬೇರೆ. ಜೂನ್ 14ಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೆವು. ಆದರೆ ಇನ್ನೂ ಪಕ್ಕಾ ಆಗಿಲ್ಲ. ಜೂನ್ 6 ರಂದು ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ. ಏಕೆಂದರೆ ಒಂದೇ ದಿನ ಇಬ್ಬರು ಸ್ಟಾರ್ ನಟರ ಸಿನಿಮಾ ಬಿಡುಗಡೆ ಆದರೆ ನಿರ್ಮಾಪಕರಿಗೆ ನಷ್ಟ ಆಗಲಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ವಾರ್ ಆಗುತ್ತಾ.. ಅಥವಾ ರವಿವರ್ಮ ಹೇಳಿದಂತೆ ಅವರ ಸಿನಿಮಾ ಮೊದಲು ಬಿಡುಗಡೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕು.

Intro:ಹ್ಯಾಟ್ರಿಕ್ ಹೀರೋ ಹಾಗು ರಿಯಲ್ ಸ್ಟಾರ್ ಮಧ್ಯೆ ಬಾಕ್ಸ್ ಆಫೀಸ್ ಫೈಟ್!!

ಕನ್ನಡ ಚಿತ್ರರಂಗದಲ್ಲಿ ಇಬ್ಬರು ಬಿಗ್ ಸ್ಟಾರ್ ಗಳ ಸಿನಿಮಾಗಳು, ಒಂದೇ ದಿನ ರಿಲೀಸ್ ಆಗೋದ್ರಿಂದ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್ ಜೊತೆ ನಿರ್ಮಾಪಕನಿಗೆ ನಷ್ಟ ಆಗೋದು ಗ್ಯಾರಂಟಿ..ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ನಡುವೆ ಬಾಕ್ಸ್ ಆಫೀಸ್ ಫೈಟ್ ಶುರುವಾಗಲಿದೆ.

ಒಟ್ಟಿಗೆ ಬರ್ತಾ ಇದ್ದಾರೆ ಶಿವಣ್ಣ ಉಪೇಂದ್ರ!!

ಸ್ಯಾಂಡಲ್ ವುಡ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಅಂತಾ ಕರೆಯಿಸಿಕೊಂಡಿರುವ ಶಿವರಾಜ್ ಕುಮಾರ್ ಹಾಗು ಉಪೇಂದ್ರ, ಪ್ರೊಫೆಷನ್ ಅಂತಾ ಒಬ್ಬರಿಗೊಬ್ಬರು ಎದುರಾಳಿಗಳು ಆಗ್ತಾರೆ‌‌..ಈಗಾಗಲೆ ರಿಯಲ್ ಸ್ಟಾರ್ ಅಭಿನಯದ ಐ ಲವ್ ಯು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದರೆ ಜೊತೆಗೆ ಶಿವರಾಜ್ ಕುಮಾರ್ ರುಸ್ತುಂ ಕೂಡ ತೆರೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಉಪೇಂದ್ರ ಸಿನಿಮಾ ಬಂದು ಎರಡು ವರ್ಷ ಆಯಿತ್ತು!!

ಸಿಲ್ವರ್ ಸ್ಕ್ರೀನ್ ಮೇಲೆ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ, ಉಪ್ಪಿ‌ ಫ್ಯಾನ್ಸ್ ಬರೋಬ್ಬರಿ ಎರಡು ವರ್ಷ ಆಯಿತ್ತು..ಈಗ ಐ ಲವ್ ಯೂ ಸಿನಿಮಾ ಮೂಲಕ ಜೂನ್ 14ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸುಮಾರು ವರ್ಷದಿಂದ ಪ್ರಜಾಕೀಯದಲ್ಲಿ ಬ್ಯುಸಿ ಇದ್ದ ಉಪೇಂದ್ರ ಈಗ ಐ ಲವ್ ಯೂ ಅಂತ ಹೇಳುತ್ತಿದ್ದಾರೆ. ಆರ್ ಚಂದ್ರು ನಿರ್ದಶನದಲ್ಲಿ ಮೂಡಿ ಬಂದಿರುವ ಐ ಲವ್ ಯೂ ಸಿನಿಮಾದಲ್ಲಿ ರಚಿತಾ ರಾಮ್ ಹಾಗು ಸೋನು ಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Body:ಉಪೇಂದ್ರಗಿಂತ ಮುಂಚೆ ಬರಲಿದ್ದಾರೆ ಶಿವರಾಜ್ ಕುಮಾರ್?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮೀಸೆ ಬಿಟ್ಟು ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿರೋ ಸಿನಿಮಾ‌ ರುಸ್ತುಂ..ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಈಗಾಗಲೇ ಟ್ರೈಲರ್ ನಿಂದ ಸದ್ದು ಮಾಡ್ತಿರೋ ರುಸ್ತುಂ ಸಿನಿಮಾವನ್ನ, ಜೂನ್ 14ಕ್ಕೆ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ..ಭಟ್ ಈ ಬಗ್ಗೆ ನಿರ್ದೇಶಕ ರವಿವರ್ಮ ಹೇಳೋದೆ ಬೇರೆ..ಜೂನ್ 14ಕ್ಕೆ ರುಸ್ತುಂ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ವಿ..ಆದ್ರೆ ಇನ್ನು ಪಕ್ಕಾ ಆಗಿಲ್ಲ..ಯಾಕಂದ್ರೆ ರುಸ್ತುಂ ಚಿತ್ರದ ನಿರ್ಮಾಪಕ‌ ಕಮ್‌ ವಿತರಕರಾಗಿರೊ ಜಯಣ್ಣ, ಉಪೇಂದ್ರ ಸಿನಿಮಾಗಿಂತ ಮುಂಚೆ ರಿಲೀಸ್ ಮಾಡುವ, ಅಂದ್ರೆ ಜೂನ್ 6ಕ್ಕೆ ರುಸ್ತುಂ ಸಿನಿಮಾ ಬರುವ ಸಾಧ್ಯತೆ ಇದೆ ಅಂತಾರೆ ನಿರ್ದೇಶಕ ರವಿವರ್ಮ. ಯಾಕಂದ್ರೆ ಒಂದೇ ದಿನ ಇಬ್ಬರು ಸ್ಟಾರ್ ನಟರು‌‌ ಸಿನಿಮಾ ರಿಲೀಸ್ ಆಗೋಂದ್ರಿಂದ ನಿರ್ಮಾಪಕರಿಗೆ ನಷ್ಟ ಅನ್ನೋದು..ಇನ್ನು ವಿಶೇಷ ಅಂದ್ರೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಹಾಗೇ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಶಿವರಾಜ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ..ಒಟ್ಟಾರೆ ಈ ಎರಡು ಸಿನಿಮಾ ಒಂದೇ ದಿನ ರಿಲೀಸ್ ಆಗಿದೆ ಬಾಕ್ಸ್ ಆಫೀಸ್ ಗೆ ವಾರ್ ಗೆ ಕಾರಣ ಆಗುತ್ವಾ ಅಥವಾ ನಿರ್ದೇಶಕ ರವಿವರ್ಮ ಪ್ರಕಾರ ರುಸ್ತುಂ ಸಿನಿಮಾ ಜೂನ್‌ 6ಕ್ಕೆ ರಿಲೀಸ್ ಆಗುತ್ತಾ ಸದ್ಯದಲ್ಲೇ ಗೊತ್ತಾಗಲಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.