ETV Bharat / sitara

ಈ ವಾರ ಬಿಗ್​ಬಾಸ್​​ ಮನೆಯಲ್ಲಿ ನಾಲ್ಕು ಸದಸ್ಯರು ನಾಮಿನೇಟ್: ಯಾರ್ಯಾರು ಗೊತ್ತಾ? - ಕನ್ನಡ ಬಿಗ್​ಬಾಸ್​ ಸೀಸನ್​ 8

ಕನ್ನಡ ಬಿಗ್​ಬಾಸ್​​​ ಸೀಸನ್​ 8 ರಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ನಾಮಿನೇಟ್​ ಆಗಿದ್ದಾರೆ.

Four people nominated for elimination for this week
ಈ ವಾರ ಬಿಗ್​ಬಾಸ್​​ ಮನೆಯಲ್ಲಿ ನಾಲ್ಕು ಸದಸ್ಯರು ನಾಮಿನೇಟ್
author img

By

Published : Jul 15, 2021, 10:53 PM IST

ಬಿಗ್​​ಬಾಸ್ ಮನೆಯಿಂದ ಹೊರಹೋಗಲು ಈ ವಾರ ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದಾರೆ.

Four people nominated for elimination for this week
ಬಿಗ್​ಬಾಸ್​​ ಮನೆ

ನಿಂಗೈತೆ ಇರು ಹಾಗೂ ವಿಜಯ ಯಾತ್ರೆ ತಂಡಗಳ ಸದಸ್ಯರು ನಾಮಿನೇಷನ್‌ನಿಂದ ಪಾರಾಗಲು ಬಿಗ್​​​ಬಾಸ್ ಹಂತ-ಹಂತವಾಗಿ ಟಾಸ್ಕ್​ಗಳನ್ನು ನೀಡಿದ್ದರು. ಕೊಟ್ಟಿದ್ದ ಹತ್ತು ಟಾಸ್ಕ್​​​ನಲ್ಲಿ ಆರು ಅಂಕಗಳನ್ನು ಪಡೆದು ನಿಂಗೈತೆ ಇರು ತಂಡ ಜಯ ಸಾಧಿಸಿದ್ದು, ವಿಜಯಯಾತ್ರೆ ತಂಡ ಸೋಲು ಕಂಡಿತ್ತು.

ವಿಜಯಯಾತ್ರೆ ತಂಡ ಸೋತ ಕಾರಣ ತಂಡದಲ್ಲಿದ್ದ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಪ್ರಿಯಾಂಕಾ ತಿಮ್ಮೇಶ್ ಹಾಗೂ ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ತಂಡದ ಗೆಲುವಿಗಾಗಿ ಇಮ್ಯುನಿಟಿ ಇದ್ದರೂ ಅರವಿಂದ್ ಉತ್ತಮ ಆಟ ನೀಡಿದ್ದಾರೆ ಎಂದು ಶುಭಾ ಪೂಂಜಾ ಮೆಚ್ಚುಗೆ ವ್ಯಕ್ತಪಡಿಸಿದರು.

Priyanka Thimmesh
ಪ್ರಿಯಾಂಕಾ ತಿಮ್ಮೇಶ್​

ನಾಮಿನೇಟ್ ಆದ ಕಾರಣ ಶುಭಾ ಪೂಂಜಾ ಹಾಗೂ ಪ್ರಶಾಂತ್ ಸಂಬರಗಿ ತುಂಬಾ ಬೇಸರ ಮಾಡಿಕೊಂಡರು. ಇಷ್ಟು ದಿನ ಇದ್ದು ಕೊನೆಯಲ್ಲಿ ಹೋಗಬೇಕಾದರೆ ತುಂಬಾ ಬೇಜಾರಾಗುತ್ತದೆ ಎಂದು ಶುಭಾ ಹಾಗೂ ಮಂಜು ಮಾತನಾಡಿಕೊಂಡರು. ಇತ್ತ ಗಾಯಗೊಂಡಿದ್ದರೂ ದಿವ್ಯ ಉರುಡುಗ ಹಾಗೂ ಚಕ್ರವರ್ತಿ ಚಂದ್ರಚೂಡ್ ನಾಮಿನೇಷನ್​​ನಿಂದ ಪಾರಾಗಿರುವ ಅದೃಷ್ಟದ ಬಗ್ಗೆ ಪ್ರಶಾಂತ್ ಹಾಗೂ ಶುಭಾ ಮಾತನಾಡಿಕೊಂಡರು.

ಇದನ್ನೂ ಓದಿ: ಸಂಚಾರಿ ಹುಟ್ಟುಹಬ್ಬಕ್ಕೆ 'ಲಂಕೆ' ಚಿತ್ರದ ಪೋಸ್ಟರ್ ಬಿಡುಗಡೆ..

ಒಟ್ಟಾರೆಯಾಗಿ ಈ ವಾರ ನಾಲ್ಕು ಮಂದಿಯಲ್ಲಿ ಮನೆಯಿಂದ ಯಾರು ಹೋಗಲಿದ್ದಾರೆ ಎಂಬುದನ್ನು ಶನಿವಾರದವರೆಗೆ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.