ETV Bharat / sitara

‘ನೀನಾದೆ ನಾ’ ಗೀತೆ ಹಾಡಿ ಜನರನ್ನು ರಂಜಿಸಿದ ಬಿಗ್ ಬಾಸ್ ಸ್ಪರ್ಧಿ ವಿಶ್ವನಾಥ್ ಹಾವೇರಿ - ಬಿಗ್ ಬಾಸ್ ಸ್ಪರ್ಧಿ ವಿಶ್ವನಾಥ್

ವಿಶ್ವನಾಥ್ ಹಾವೇರಿ ಅವರು ಲಾಕ್​ಡೌನ್ ಸಮಯದಲ್ಲಿ ಹಾಡುತ್ತಿರುವ ಕೆಲ ಜನಪ್ರಿಯ ಸಿನಿಮಾಗಳ ಹಾಡುಗಳು ಭಾರಿ ವೈರಲ್ ಆಗುತ್ತಿವೆ. ಅದರಲ್ಲಿ ಒಂದು ಹಾಡು ಅವರ ಅನುಯಾಯಿಗಳ ಒತ್ತಾಯದ ಮೇರೆಗೆ ಹಾಡಿದ್ದಾರೆ. ಈ ಹಾಡು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರ ಯುವರತ್ನದ ಜನಪ್ರಿಯ ಗೀತೆ ‘ನೀನಾದೆ ನಾ…’ ಆಗಿದೆ. ಈ ಹಾಡನ್ನು ಕೇಳಿದ ಪ್ರೇಕ್ಷಕರು ವಿಶ್ವನಾಥ್ ಅವರ ಕಂಠವನ್ನು ಮೆಚ್ಚಿ ಕೊಂಡಾಡಿದ್ದಾರೆ.

ಗಾಯಕ ವಿಶ್ವನಾಥ್ ಹಾವೇರಿ
ಗಾಯಕ ವಿಶ್ವನಾಥ್ ಹಾವೇರಿ
author img

By

Published : May 22, 2021, 9:28 PM IST

ಗಾಯಕ ವಿಶ್ವನಾಥ್ ಹಾವೇರಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು. ರಿಯಾಲಿಟಿ ಶೋ ‘ಹಾಡು ಕರ್ನಾಟಕ’ ಮೂಲಕ ಜನಪ್ರಿಯತೆ ಗಳಿಸಿರುವ ಅವರ ವಿಶೇಷ ಧ್ವನಿಗೆ ಕರ್ನಾಟಕಾದ್ಯಂತ ಅಭಿಮಾನಿಗಳಿದ್ದಾರೆ.

ವಿಶ್ವನಾಥ್ ಹಾವೇರಿ ಬಿಗ್​ಬಾಸ್ ಮನೆಯಿಂದ ಔಟ್ ಆದಾಗ ಸ್ಪರ್ಧಿಗಳು ಮಾತ್ರವಲ್ಲದೇ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಅವರೂ ಕೂಡ ಹೊರಬರುವಾಗ ಭಾವುಕರಾಗಿ, ನಾನು ಮತ್ತಷ್ಟು ಹಾಡುಗಳನ್ನು ಹಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು.

Big Boss contestant Vishwanath Haveri, who sang a number of songs and entertainiing people
ಗಾಯಕ ವಿಶ್ವನಾಥ್ ಹಾವೇರಿ
Big Boss contestant Vishwanath Haveri, who sang a number of songs and entertainiing people
ಗಾಯಕ ವಿಶ್ವನಾಥ್ ಹಾವೇರಿ

ಸದ್ಯ ಅವರು ಈ ಲಾಕ್​ಡೌನ್ ಸಮಯದಲ್ಲಿ ಹಾಡುತ್ತಿರುವ ಕೆಲ ಜನಪ್ರಿಯ ಸಿನಿಮಾಗಳ ಹಾಡುಗಳು ಭಾರಿ ವೈರಲ್ ಆಗುತ್ತಿವೆ. ಅದರಲ್ಲಿ ಒಂದು ಹಾಡನ್ನು ಅವರ ಅನುಯಾಯಿಗಳ ಒತ್ತಾಯದ ಮೇರೆಗೆ ಹಾಡಿದ್ದಾರೆ. ಈ ಹಾಡು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರ ಯುವರತ್ನದ ಜನಪ್ರಿಯ ಗೀತೆ ‘ನೀನಾದೆ ನಾ…’ ಆಗಿದೆ. ಈ ಹಾಡನ್ನು ಕೇಳಿದ ಪ್ರೇಕ್ಷಕರು ವಿಶ್ವನಾಥ್ ಅವರ ಕಂಠವನ್ನು ಮೆಚ್ಚಿ ಕೊಂಡಾಡಿದ್ದಾರೆ.

https://www.instagram.com/tv/CPI2C5XgyB_/?utm_medium=copy_link

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ, ವಿಶ್ವನಾಥ್ ಹಾಡಿರುವ ಮತ್ತೊಂದು ಜನಪ್ರಿಯ ಗೀತೆ ‘ದಿಯಾ’ ಚಿತ್ರದ್ದು. ಈ ಗೀತೆಗೂ ಕೂಡ ಅಭಿಮಾನಿಗಳಿಂದ ಕಮೆಂಟ್​ಗಳ ಮಹಾಪೂರವೇ ಹರಿದು ಬಂದಿದೆ. ವಿಶ್ವನಾಥ್ ತಮ್ಮ 19ನೇ ವಯಸ್ಸಿನಲ್ಲಿಯೇ ಅದ್ಭುತವಾಗಿ ಹಾಡು ಹೇಳುವುದು ಮಾತ್ರವಲ್ಲದೇ, ಹಾಡು ರಚಿಸುತ್ತಿರುವುದು ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.