ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಗಂಡು ಮಗುವಿನ ತಂದೆಯಾಗಿದ್ದಾರೆ. ಪತ್ನಿ ರೇವತಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮಗನನ್ನೆತ್ತಿಕೊಂಡು ಸಂಭ್ರಮಿಸಿದ್ರೆ, ದೇವೇಗೌಡರು ಮರಿಮೊಮ್ಮಗನನ್ನು ಹಾಗೂ ಕುಮಾರಸ್ವಾಮಿ ಅವರು ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.
![ಮರಿಮೊಮ್ಮಗ ಜನಿಸಿದ ಸಂಭ್ರಮದಲ್ಲಿ ದೇವೇಗೌಡರು](https://etvbharatimages.akamaized.net/etvbharat/prod-images/13158911_nikhli.jpg)
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಮಾನ್ವಿ ಕನ್ವೆನ್ಷನ್ ಹಾಲ್ನಲ್ಲಿ ನಿಖಿಲ್ ಪತ್ನಿ ರೇವತಿಗೆ ಸೀಮಂತ ಕಾರ್ಯಕ್ರಮ ನಡೆದಿತ್ತು.
![ಮೊಮ್ಮಗ ಜನಿಸಿದ ಸಂಭ್ರಮದಲ್ಲಿ ಕುಮಾರಸ್ವಾಮಿ ಕುಟುಂಬ](https://etvbharatimages.akamaized.net/etvbharat/prod-images/13158911_nikhli2.jpg)
2020ರ ಏಪ್ರಿಲ್ನಲ್ಲಿ ರೇವತಿ-ನಿಖಿಲ್ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಲಾಕ್ಡೌನ್ ನಿಯಮಗಳ ಅನುಸಾರ ವಿವಾಹ ಸಮಾರಂಭ ನೆರವೇರಿತ್ತು. ಬಿಡದಿ ಬಳಿ ಇರುವ ಫಾರ್ಮ್ಹೌಸ್ನಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
![Baby boy to Nikhil Kumaraswamy](https://etvbharatimages.akamaized.net/etvbharat/prod-images/13158911_nikhil1.jpg)