ETV Bharat / sitara

'ಆರ್​​ಆರ್​​ಆರ್'​​​ ಅಡ್ಡಾಕ್ಕೆ ಎಂಟ್ರಿ ಕೊಟ್ಟ ಆಲಿಯಾ ಭಟ್​​ - ಆರ್​ಆರ್​ಆರ್​​ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾದ ಆಲಿಯಾ ಭಟ್​​

ರಾಮ್​​ಚರಣ್​​ ಮತ್ತು ಜೂ.ಎನ್​ಟಿಆರ್ ನಟಿಸುತ್ತಿರುವ ಆರ್​ಆರ್​ಆರ್​​ ಚಿತ್ರತಂಡಕ್ಕೆ ಬಾಲಿವುಡ್​​ ನಟಿ ಆಲಿಯಾ ಭಟ್​​​ ಸೇರಿಕೊಂಡಿದ್ದಾರೆ.

'ಆರ್​​ಆರ್​​ಆರ್'​​​ ಅಡ್ಡಕ್ಕೆ ಎಂಟ್ರಿ ಕೊಟ್ಟ ಆಲಿಯಾ ಭಟ್​​

author img

By

Published : Dec 6, 2020, 4:55 PM IST

ಟಾಲಿವುಡ್​ ಖ್ಯಾತ ಡೈರೆಕ್ಟರ್​ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ಆರ್​​ಆರ್​​ಆರ್​​​ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೂಟಿಂಗ್​ನಲ್ಲಿ ಈಗಾಗಲೇ ರಾಮ್​​ಚರಣ್​​ ಮತ್ತು ಜೂ.ಎನ್​ಟಿಆರ್​​​ ಭಾಗಿಯಾಗಿದ್ದು, ಕೆಲವು ಭಾಗದ ಶೂಟಿಂಗ್​ ಅನ್ನು ಮುಗಿಸಿದ್ದಾರೆ. ಸದ್ಯ ಬಾಲಿವುಡ್​​​​ ನಟಿ ಆಲಿಯಾ ಭಟ್​​ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಈ ಬಗ್ಗೆ ಸ್ವತಃ ನಟಿ ಆಲಿಯಾ ಭಟ್​​​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆರ್​ಆರ್​ಆರ್​​ ಶೂಟಿಂಗ್​ಗೆ ತೆರಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿರುವ ನಟಿ ಅಭಿಮಾನಿಗಳಿಗೆ ಶೂಟಿಂಗ್​ಗೆ ತೆರಳುತ್ತಿರುವ ಮಾಹಿತಿಯನ್ನು ನೀಡಿದ್ದಾರೆ.

Alia Bhatt recommences shooting for movie 'RRR'
'ಆರ್​​ಆರ್​​ಆರ್'​​​ ಅಡ್ಡಕ್ಕೆ ಎಂಟ್ರಿ ಕೊಟ್ಟ ಆಲಿಯಾ ಭಟ್​​

ಈ ಹಿಂದೆ ಹಲವಾರು ವದಂತಿಗಳು ಹರಿದಾಡಿದ್ದು, ಆರ್​ಆರ್​ಆರ್​​ ಚಿತ್ರದಲ್ಲಿ ಆಲಿಯಾ ಭಟ್​​​ ಬದಲು ಪರಿಣಿತಿ ಚೋಪ್ರಾ ನಟಿಸುತ್ತಾರೆ ಎಂಬೆಲ್ಲ ವದಂತಿಗಳು ಹರಿದಾಡಿದ್ದವು. ಇದನ್ನು ತಳ್ಳಿ ಹಾಕಿದ್ದ ಸಿನಿಮಾ ವಿಮರ್ಶಕ ತರುಣ್​ ಆದರ್ಶ್​​​​ ಅವರು ಆಲಿಯಾ ಭಟ್​​​ ಆರ್​ಆರ್​ಆರ್​​​ನಲ್ಲಿ ನಟಿಸುವುದನ್ನು ಪಕ್ಕಾ ಮಾಡಿದ್ದರು. ಆರ್​ಆರ್​ಆರ್​​ ಚಿತ್ರದಲ್ಲಿ ಬಾಲಿವುಡ್​​ನ ಮತ್ತೊಬ್ಬ ನಟ ಕೂಡ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖ ಪಾತ್ರವೊಂದಕ್ಕೆ ಅಜಯ್​ ದೇವಗನ್​ ಬಣ್ಣ ಹಚ್ಚುತ್ತಿದ್ದಾರೆ.

ಚಳಿಯನ್ನೂ ಲೆಕ್ಕಿಸದೇ ಚಿತ್ರತಂಡ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ. ಚಿತ್ರದಲ್ಲಿ ರಾಮ್​​​​ಚರಣ್​​ ತೇಜ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸುತ್ತಿದ್ದು, ಜೂ.ಎನ್​ಟಿಆರ್​​ ಕೋಮುರಾಮ್​ ಭೀಮ್​ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.