ETV Bharat / sitara

ಕೊರೊನಾ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ರಂತೆ ಈ ನಟಿ!

ನಟಿ ಸನುಷ ಕೊರೊನಾ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ. ಅದನ್ನು ಅವರೇ ಬರೆದುಕೊಂಡಿದ್ದಾರೆ.

ಕೊರೊನಾ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ರಂತೆ ಈ ನಟಿ!
ನಟಿ ಸನುಷ
author img

By

Published : Oct 21, 2020, 4:09 PM IST

ಹೆಸರಾಂತ ಬಾಲನಟಿ ಸನುಷ ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ 1998 ರಿಂದ ಜನಪ್ರೀಯತೆ ಪಡೆದು 2012ರಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದಾರೆ. 2016 ರಲ್ಲಿ ಈಕೆ ಕನ್ನಡದಲ್ಲಿ ಬಿಡುಗಡೆ ಆದ ಶಿವರಾಜಕುಮಾರ್ ಅಭಿನಯದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾಕ್ಕೆ ‘ಲೋಯಿ’ ಪಾತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಆಮೇಲೆ ಕೆಲವು ಮಲಯಾಳಂ ಚಿತ್ರಗಳಲ್ಲಿ ನಾಯಕಿ ಪಟ್ಟ ಅಲಂಕರಿಸಿದ್ದೂ ಆಯ್ತು. ಈ ನಟಿ ಕೊರೊನಾ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ. ಈ ವಿಚಾರವನ್ನು ಅವರೇ ಬರೆದುಕೊಂಡಿದ್ದಾರೆ.

ಕೊರೊನಾ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ರಂತೆ ಈ ನಟಿ!
ನಟಿ ಸನುಷ

ಸನುಷ ಲಾಕ್‌ ಡೌನ್ ಸಮಯದಲ್ಲಿ ಅನುಭವಿಸಿದ ಮಾನಸಿಕ ಒತ್ತಡವನ್ನು ಯುಟ್ಯೂಬ್​​​ನಲ್ಲಿ ವಿವರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಮನಸು ಬಹಳ ವಿಚಿತ್ರವಾಗಿ ಹೋಯಿತು. ಒಂದು ಸಮಯದಲ್ಲಿ ಸಾವಿಗೆ ಶರಣಾಗುವ ಚಿಂತನೆ ಬಂತು. ಆಗಲೇ ವೈದ್ಯಕೀಯ ಸೌಲಭ್ಯ ಪಡೆದುಕೊಂಡೆ. ಆಮೇಲೆ ಕ್ರಮೇಣ ಎಲ್ಲವೂ ಸರಿ ಆಗುತ್ತಾ ಹೋಯಿತು. ಕೆಲಸವಿಲ್ಲದೆ, ಯಾರ ಸಂಪರ್ಕವೂ ಇಲ್ಲದೆ ಇದ್ದಾಗ ಆದ ಯಾತನೆಯನ್ನು ನಾನೇಕೆ ಯುಟ್ಯೂಬ್​​ನಲ್ಲಿ ವಿವರಿಸುತ್ತಿದ್ದೇನೆ ಎನ್ನುವುದಕ್ಕೆ ಕಾರಣವಿದೆ. ನನ್ನಂತೆ ಯಾರೂ ಕೂಡಾ ಕೆಟ್ಟ ಯೋಚನೆ ಮಾಡದಿರಲಿ ಅನ್ನೋದೇ ನನ್ನ ಬಯಕೆ ಎಂದು ಹೇಳಿದ್ದಾರೆ.

ನಟಿ ಸನುಷ ಈ ರೀತಿ ಹೇಳಿಕೊಂಡಿದ್ದಕ್ಕೆ ಕೆಲವು ನೆಟ್ಟಿಗರು ವಿಚಿತ್ರವಾಗಿ ಕಾಮೆಂಟ್ ಮಾಡಿ, ಅವರ ಮನಸ್ಸನ್ನು ನೋಯಿಸಿದ್ದರಂತೆ. ಯಾವುದೇ ವ್ಯಕ್ತಿಯ ಮೆಂಟಲ್ ಹೆಲ್ತ್ ಬಗ್ಗೆ ಹೀಗೆ ಮಾತನಾಡುವುದು ತಪ್ಪು. ಅಂತಹವರು ರೋಗಿಷ್ಟ ಮನಸ್ಥಿತಿಯವರು ಅಂತ ಗರಂ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.