ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬಡವ ರಾಸ್ಕಲ್ ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ನೆರವು ನೀಡಲು ಮುಂದಾಗಿವೆ.
ಕಳೆದ ಎರಡು ದಿನಗಳ ಹಿಂದೆ ನಟ ಧನಂಜಯ್ ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹಾರ ಪಟಾಕಿಗಳಿಗೆ ಖರ್ಚು ಮಾಡುವ ಬದಲಾಗಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಈ ಮನವಿಗೆ ಸ್ಪಂದಿಸಿರುವ ಡಾಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್ಡೇ ಸರಳವಾಗಿ ಆಚರಿಸಿ, ಅದಕ್ಕೆ ಮೀಸಲಿಟ್ಟಿದ್ದ ಹಣ ವನ್ನು ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
ಇಂದು ಬಡವ ರಾಸ್ಕಲ್ ಚಿತ್ರದ ಮುಹೂರ್ತದ ವೇಳೆ ಈಟಿವಿ ಭಾರತ ಜೊತೆ ಈ ಬಗ್ಗೆ ಮಾತಾಡಿರುವ ಧನಂಜಯ್, ಬಡವ ರಾಸ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡಗಳು ಹಾಗೂ ನನ್ನ ಅಭಿಮಾನಿಗಳು ಸೇರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದಿಷ್ಟು ಹಣ ನೀಡಲು ಮುಂದಾಗಿದ್ದೇವೆ. ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಹಣ ನೀಡುವುದಾಗಿ ತಿಳಿಸಿದರು.
ಇನ್ನು ಈಗಾಗಲೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಧನಂಜಯ್ ಹಾಗೂ ಅವರ ಅಭಿಮಾನಿಗಳು ಸಾಕಷ್ಟು ಸಹಾಯ ಮಾಡಿದ್ದಾರೆ. ಇದೀಗ ಮತ್ತೆ ನೆರವಿನ ಹಸ್ತ ಚಾಚುತ್ತಿರುವುದು ಶ್ಲಾಘನೀಯ.