ಹೈದರಾಬಾದ್: ನಟಿ ಜಾನ್ವಿ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ತನ್ನ ಬೀಚ್ ಹಾಲಿಡೇ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಈಜುಡುಗೆಯಲ್ಲಿ ಜಾನ್ವಿಯ ಚಿತ್ರಕ್ಕಿಂತ ಹೆಚ್ಚಾಗಿ, ಸ್ನೇಹಿತನೊಂದಿಗಿನ ಅವಳ ಚಿತ್ರವು ಎಲ್ಲರ ಗಮನ ಸೆಳೆಯುತ್ತಿದೆ.
ಅವರ ಇತ್ತೀಚಿನ ಈ ಇನ್ಸ್ಟಾಗ್ರಾಂ ಪೋಸ್ಟ್ ಚಿಕ್ಕಮ್ಮ ಮಹೀಪ್ ಕಪೂರ್, ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ನವ್ಯಾ ನಂದಾ ಅವರಿಂದ ಪ್ರತಿಕ್ರಿಯೆ ಪಡೆದಿದೆ. ಚಿತ್ರಗಳಲ್ಲಿ, ಜಾನ್ವಿ ಬಿಳಿ ಬಿಕಿನಿ ಟಾಪ್ ಧರಿಸಿರುವುದನ್ನು ಕಾಣಬಹುದಾಗಿದೆ.
ಒಂದು ಚಿತ್ರದಲ್ಲಿ, ಜಾನ್ವಿ ತನ್ನ ಗೆಳೆಯನ ಕೈ ಹಿಡಿದು ಓಡುತ್ತಿರುವುದು ಕಂಡುಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಜಾನ್ವಿ ಅವರ ಅನೇಕ ಅಭಿಮಾನಿಗಳು ಜಾನ್ವಿ ಅವರ ಚಿತ್ರದಲ್ಲಿರುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿದ್ದು, ಅವರ ಗುರುತನ್ನು ಚರ್ಚಿಸುತ್ತಿದ್ದಾರೆ.
ಆದರೆ, ಚಿತ್ರದಲ್ಲಿರುವ ವ್ಯಕ್ತಿ ಜಾನ್ವಿ ಅವರ ಆಪ್ತರಲ್ಲಿ ಒಬ್ಬರಾದ ಓರ್ಹಾನ್ ಅವತ್ರಮಣಿ ಎಂದು ತಿಳಿದು ಬಂದಿದೆ.
ಆನಿಮೇಷನ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರೆಸುತ್ತಿರುವ ಓರ್ಹಾನ್, ಸಾರಾ ಅಲಿ ಖಾನ್, ಅಲಾಯಾ ಎಫ್, ಜಾವೇದ್ ಜಾಫೆರಿ ಮಗಳು ಅಲಾವಿಯಾ ಜಾಫೆರಿ ಮತ್ತು ಇನ್ನೂ ಅನೇಕ ನಟರ ಮಕ್ಕಳೊಂದಿಗೆ ಸ್ನೇಹಿತರಾಗಿದ್ದಾರೆ.